ಚಿಂಚೋಳಿ(ಕಲಬುರಗಿ): ತಾಲೂಕಿನ ಶಿಕಾರ ಮೋತಕಪಳ್ಳಿ ಗ್ರಾಮದಲ್ಲಿ ಬೆಳ್ಳಂ ಬೆಳಗ್ಗೆ ಬೃಹತ್ ಗಾತ್ರದ ಬಲೂನ್ ನೆಲಕ್ಕೆ ಉರಳಿ ಬಿದ್ದಿದ್ದು, ಅದರಲ್ಲಿ ಮಷಿನ್ ಸೇರಿ ಇತರೆ ವೈರಗಳನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಬೆಳ್ಳಂ ಬೆಳಗ್ಗೆ ಗ್ರಾಮಸ್ಥರು ಎಂದಿನಂತೆ ದೈನಂದಿನ ಕೃಷಿ ಕೆಲಸಕ್ಕೆ ತೆರಳುವ ವೇಳೆ ಗ್ರಾಮದ ಹೊರವಲಯದಲ್ಲಿನ ಹೊಲದಲ್ಲಿ ಬೃಹತ್ ಗಾತ್ರದ ಬಲೂನ್ ಕಂಡು ಆತಂಕಕ್ಕೆ ಒಳಗಾಗಿದ್ದು, ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸಿ ಕಂಡು ಬೆರಗಾದರು.
ತಕ್ಟಣವೇ ಸಂಬಂಧಪಟ್ಟ ಅಧಿಕಾರಿಗಳು, ಪೋಲಿಸ್ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ತೆಗೆದುಕೊಂಡು ಹೋಗುವ ಮೂಲಕ ಗ್ರಾಮಸ್ಥರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಆತ್ಮಸ್ಥೈರ್ಯ ತುಂಬಿದರು.