22ನೇ ನುಡಿಜಾತ್ರೆಗೆ ಮುಡುಬಿ ಸರ್ವಾಧ್ಯಕ್ಷ

ವಿಜಯಕುಮಾರ ತೇಗಲತಿಪ್ಪಿ ,ಮುಡುಬಿ ಗುಂಡೇರಾವ್
ವಿಜಯಕುಮಾರ ತೇಗಲತಿಪ್ಪಿ ,ಮುಡುಬಿ ಗುಂಡೇರಾವ್
Published on

ಪ್ರಮುಖ ಮುಖ್ಯಾಂಶಗಳು

  • ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾಹಿತಿ
  • ಫೆಬ್ರವರಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಕಲಬುರಗಿ: ಫೆಬ್ರವರಿಯಲ್ಲಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸರ್ವಾಧ್ಯಕ್ಷರನ್ನಾಗಿ ಸಂಶೋಧಕ, ಸಾಹಿತಿ ಮುಡುಬಿ ಗುಂಡೇರಾವ್​ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹೇಳಿದರು.
ಕನ್ನಡ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸಂಶೋಧನಾ ೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಸಂಶೋಧಕರೊಬ್ಬರನ್ನು ಈ ಬಾರಿಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂಬ ಪರಿಷತ್ತಿನ ರ್ನಿಣಯದಂತೆ ಸೇಡಂನ ಮುಡುಬಿ ಗುಂಡೇರಾವ್​ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಮುಡುಬಿ ಗುಂಡೇರಾವ ಅವರು ಬಹುಮುಖ ಪ್ರತಿಭೆಯಾಗಿದ್ದು, ಸದಾ ಒಂದಿಲ್ಲೊಂದು ಸಾಂಸತಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಗೌರವ ಉಪನ್ಯಾಸಕ, ಪ್ರಾಧ್ಯಾಪಕ, ಸಾಹಿತಿ, ಸಂಶೋಧಕ, ಸೇಡಂ ತಾಲೂಕು ಕಸಾಪ ಕಾರ್ಯದರ್ಶಿ, ಅಧ್ಯಕ್ಷ, ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಆಲತ ಇತಿಹಾಸ ಹಾಗೂ ಎಲೆಮರೆ ಕಾಯಿಯಂತೆ ಸಾಹಿತ್ಯ, ಸಂಗೀತ, ಕಲೆಯ ಸೇವೆ ಮಾಡುತ್ತಿರುವವರ ಸಾಧನೆಯನ್ನು ಕೃತಿರೂಪಕ್ಕಿಳಿಸಿ ಸಂಶೋಧನಾ ೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಕಮಲಾಪೂರ ತಾಲೂಕಿನ ಹೊಡಲ್​ ಗ್ರಾಮದವರಾದ ಗುಂಡೇರಾವ್​ ಅವರು, ಎಂ.ಎ., ಎಂ.ಫಿಲ್​ ಪದವಿ ಪಡೆದ ಬಳಿಕ ಸೇಡಂನ ನೃಪತುಂಗ ಪ್ರಥಮದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ನಂತರ ಸರ್ಕಾರಿ ಶಾಲೆಯ ಶಿಕ್ಷಕ, ಮುಖ್ಯಗುರು, ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೇಡಂ ತಾಲೂಕು ದರ್ಶನ, ಸೇಡಿಂಬ ದುರ್ಗದ ಶಾಸನಗಳು, ಸ್ವಾಭಿಮಾನ&1 ಮತ್ತು 2, ಸಂಗೀತ ಸಂಪದ, ಮನ್ನೆದಡಿ ಸಾಸಿರನಾಡು, ಭಾವೈಕ್ಯತೆಯ ೇತ್ರ ಮಳಖೇಡ ದರ್ಗಾ, ಸಾಹಿತ್ಯ ಚಿಲುಮೆ, ಮಾನ್ಯಖೇಟದ ಸಿರಿ, ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮೀಜಿ, ಆಳಂದ ಸಾಸಿರ ನಾಡು, ಕಾಳಗಿ ಕಾಳೇಶ್ವರ, ಶರಣು ಶರಣಾರ್ಥಿ, ಕವಿರಾಜ ಮಾರ್ಗ ಪರಿಸರ, ಆಲೂರು ಕೆಂಚ ವೃಷಬೇಂದ್ರ ಶ್ರೀ, ಸ್ವಾತಂತ್ರ್ಯ ಹೋರಾಟದಲ್ಲಿ ಮುಧೋಳ ಸೇರಿ ಸುಮಾರು 20ಕ್ಕೂ ಹೆಚ್ಚು ಮೌಲಿಕ ಪುಸ್ತಕಗಳನ್ನು ಬರೆಯುವ ಮೂಲಕ ಸಂಶೋಧನೆಗೆ ಹೊಸ ಆಯಾಮ ಕಲ್ಪಿಸಿದ್ದಾರೆ ಎಂದು ವಿವರಿಸಿದರು.
ಪ್ರಮುಖರಾದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಶರಣರಾಜ ಛಪ್ಪರಬಂದಿ, ಶಕುಂತಲಾ ಪಾಟೀಲ್​, ಜಯಶ್ರೀ ಜಮಾದಾರ, ಜ್ಯೋತಿ ಕೋಟನೂರ, ವಿನೋದಕುಮಾರ ಜೆ.ಎಸ್​, ಶಿವಾನಂದ ಪೂಜಾರಿ, ಕಲ್ಯಾಣಕುಮಾರ ಶೀಲವಂತ, ಡಾ.ರೆಹಮಾನ್​ ಪಟೇಲ್​, ಸೈಯ್ಯದ್​ ನಜಿರುದ್ದಿನ್​ ಮುತ್ತವಲ್ಲಿ, ದಿನೇಶ ಮದಕರಿ, ರಾಜೇಂದ್ರ ಮಾಡಬೂಳ, ಸಿದ್ದಲಿಂಗ ಬಾಳಿ, ರವೀಂದ್ರಕುಮಾರ ಭಂಟನಳ್ಳಿ, ಹಣಮಂತರಾವ ಪೆಂಚನಪಳ್ಳಿ, ಶಿವಲೀಲಾ ಕಲಗುರ್ಕಿ, ಎಸ್​.ಕೆ.ಬಿರಾದಾರ, ನಾಗಪ್ಪ ಸಜ್ಜನ್​, ಹಣಮಂತ ಶೇರಿ, ಸುರೇಶ ದೇಶಪಾಂಡೆ, ಸುರೇಶ ಲೇಂಗಟಿ, ಸಂತೋಷ ಕುಡಳ್ಳಿ, ಶರಣಬಸಪ್ಪ ಕೋಬಾಳ, ವೀರಭದ್ರಪ್ಪ ಗುರುಮಿಠಕಲ್​, ಪ್ರಭಾವತಿ ಮೇತ್ರಿ, ಪ್ರಭುಲಿಂಗ ಮೂಲಗೆ, ರವಿಕುಮಾರ ಶಹಾಪೂರಕರ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net