ಕಲಬುರಗಿಯಲ್ಲಿ ಮೊಸ್ಟ್ ವಾಂಟೆಡ್ ಡ್ರಗ್ ಪೆಡ್ಲರ್ ಬಂಧನ

drug peddler
drug peddler
Published on
ಕಲಬುರಗಿ: ಮುಂಬೈ ನಿಂದ MDM ಡ್ರಗ್ ತಂದು ಮಾರಟ ಮಾಡ್ತಿದ್ದ ಮೋಸ್ಟ್ ವಾಂಟೆಡ್ ಆರೋಪಿಯನ್ನು ನಗರ ಚೌಕ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಮಹಮ್ಮದ್ ಶೇಖ್ ಬಂಧಿತ ಆರೋಪಿ‌. ಕಲಬುರಗಿ ನಗರದ ಕೋಟೆ ಮುಂಭಾಗದಲ್ಲಿ ಡ್ರಗ್ಸ್ ಮಾರಾಟಕ್ಕೆ ಮುಂದಾದಾಗ ಬಂಧನ ಮಾಡಿದ್ದಾರೆ.
ಬಂಧಿತ ಮಹ್ಮದ್ ಶೇಖ್ ನಿಂದ 20 ಗ್ರಾಂ ಎಮ್ ಡಿ ಎಮ್ ವಶಕ್ಕೆ ಪಡೆದಿದ್ದಾರೆ.
ಮುಂಬೈನಿಂದ ತಂದು ಕಲುರಗಿಗೆ ತಂದು ಕಲಬುರಗಿಯಲ್ಲಿ ಮಾರಾಟಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು.
ಟ್ರೈನ್ ಮೂಲಕ ಕಲಬುರಗಿಗೆ ಆಗಮಿಸಿ ಕಲಬುರಗಿಯಲ್ಲಿ ಮಾರಾಟ ಮಾಡಿದ್ದ. ಹಿಂದೆಯು ಒಂದೆರಡು ಬಾರಿ ಕಲಬುರಗಿಗೆ ಬಂದು ಮಾರಾಟ ಮಾಡಿದ್ದ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು.
ಕಲಬುರಗಿ ನಗರದ ಖಾಜಾ ಬಂದೇನವಾಜ್ ದರ್ಗಾಕ್ಕೆ ಬರುವ ನೆಪದಲ್ಲಿ ಡ್ರಗ್ ತಂದು ಮಾರಾಟ ಮಾಡುವ ವೇಳೆ ಚೌಕ್ ಇನ್ಸಪೇಕ್ಟರ್ ಸುಶೀಲ್ , ಕಾನ್ಸಟೇಬಲ್ ತೌಸಿಫ್ ಸಿಬ್ಬಂದಿ ದಾಳಿ ನಡೆಸಿ, ಬಂಧಿಸಿದ್ದಾರೆ.
ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net