

ಅಫಜಲಪುರ: ಆರು ಬಾರಿ ಗ್ರಾಮ ಪಂಚಾಯಿತಿ ಸದಸ್ಯ, ಒಮ್ಮೆ ಅಧ್ಯಕ್ಷರಾಗಿ ಸುಮಾರು ಮೂರು ದಶಕ ಸೇವೆ ಸಲ್ಲಿಸಿದ್ದ ಗೌಡಪ್ಪಗೌಡ ಬಿರಾದಾರ ನಮ್ಮನ್ನು ಅಗಲಿದ್ದರೂ ಜನರ ಮನಸ್ಸಿನಲ್ಲಿ ಸದಾ ಜೀವಂತವಾಗಿದ್ದಾರೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್ಟಿಸಿ) ಅಧ್ಯ ಅರುಣಕುಮಾರ ಪಾಟೀಲ್ ಸ್ಮರಿಸಿದರು.
ಮದರಾ(ಬಿ) ಗ್ರಾಮದಲ್ಲಿ ಗ್ರಾಪಂ ಅಧ್ಯಕ್ಷ ಗೌಡಪ್ಪಗೌಡ ಬಿರಾದಾರ ತೃತೀಯ ಪುಣ್ಯಸ್ಮರಣೆ ನಿಮಿತ್ತ ಬುಧವಾರ ಏರ್ಪಡಿಸಿದ್ದ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಮುಖಿ ಕಾರ್ಯಗಳ ಮೂಲಕ ನಮ್ಮವರನ್ನು ಸ್ಮರಿಸುವ ಪರಿಪಾಠ ಹೆಚ್ಚಾದರೆ ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸಲು ಸಹಕಾರಿಯಾಗಲಿದೆ ಎಂದರು.
ಅಫಜಲಪುರ - ದೇವಲಗಾಣಗಾಪುರ ನಗರ ಯೋಜನಾಭಿವೃದ್ಧಿ ಪ್ರಾಧಿಕಾರ ಅಧ್ಯ ಚಂದ್ರಶೇಖರ ಕರಜಗಿ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಅಮರ ಪಾಟೀಲ, ಅಯ ಗುತ್ತೇದಾರ್, ಸಿದ್ದು ಶಿರಸಗಿ, ರಾಜುಗೌಡ ಅವರಳ್ಳಿ, ಚಂದು ದೇಸಾಯಿ, ರಾಜು ಜಿಡ್ಡಗಿ, ಶಿವಶರಣಪ್ಪ ಹೀರಾಪುರ, ಮಲ್ಲಿಕಾರ್ಜುನ ರ್ಖಗೆ ಅತನೂರ, ಸಿದ್ಧರಾಮ ಬಿರಾದಾರ, ಶಿವಲಿಂಗಪ್ಪ ಬಿರಾದಾರ, ಶಿವರಾಜ ಬಿರಾದಾರ, ರುದ್ರಗೌಡ ಬಿರಾದಾರ, ಶ್ರೀಶೈಲ ಬಿರಾದಾರ, ವಿಜಯಕುಮಾರ ಬಿರಾದಾರ, ದತ್ತು ಬಿರಾದಾರ, ಚನ್ನುಗೌಡ ಪಾಟೀಲ, ಶಿವಶರಣಪ್ಪ ಅಂಗಡಿ, ಭೀಮಾಶಂಕರ ಬೋರುಟಿ, ಸಿದ್ದು ಸಾಹುಕಾರ ಜವಳಿ, ಸಚಿನ್ ರಾಠೋಡ, ಶರಣು ನಿಲೂರ, ಸಿದ್ದರಾಮ ಪಾಟೀಲ, ಮಾಳಪ್ಪ ಪೂಜಾರಿ, ಮಲ್ಲಪ್ಪ ತಳವಾರ ಇತರರಿದ್ದರು.