ಭಿಕ್ಷೆ ಎತ್ತಲು ಮಗುವನ್ನು ಅಪಹರಿಸಿದವನಿಗೆ ಜೈಲು ಶಿಕ್ಷೆ

kidnapper
kidnapper
Published on

ಪ್ರಮುಖ ಮುಖ್ಯಾಂಶಗಳು

  • ಮಗುವನ್ನು ಭಿಕ್ಷೆ ಬೇಡಲು ಬಳಕೆ ಮಾಡಿದ್ದ ಖತರ್ನಾಕ್​ ಅಪರಾಧಿ
  • ಚಿಂಚೋಳಿಯಿಂದ ಹೈದರಾಬಾದ್​ಗೆ ಒಯ್ದಿದ್ದ ಆಘಂತುಕ
ಕಲಬುರಗಿ: ಬಿಸ್ಕಟ್​ ಕೊಡಿಸುತ್ತೇನೆ ಎಂದು ಒಂಬತ್ತು ತಿಂಗಳ ಮಗುವನ್ನು ಅಪಹರಿಸಿಕೊಂಡು ಹೋದ ಆರೋಪಿ ಇಮಾಮ್​ ಶಹಾನಿಗೆ ಮೂರು ವರ್ಷ ಕಾರಾಗೃಹ ಶಿೆ, ಐದು ಸಾವಿರ ರೂ. ದಂಡ ವಿಧಿಸಿ ಸೇಡಂ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕರಣ್​ ಗುಜ್ಜಾರ್​ ಆದೇಶಿಸಿದ್ದಾರೆ.
2023 ಜೂ.3ರಂದು ಮನೆ ಅಂಗಳದಲ್ಲಿ ಆಡುತ್ತಿದ್ದ ಮಗುವನ್ನು ಇಮಾಮ್​ ಶಹಾನು ಬಿಸ್ಕಟ್​ ಕೊಡಿಸುತ್ತೇನೆ ಎಂದು ಕರೆದೊಯ್ದಿದ್ದ. ಸಂಬಂಧಿಕನೇ ಆಗಿದ್ದರಿಂದ ಮಗುವಿನ ತಂದೆ, ತಾಯಿ ಸುಮ್ಮನಿದ್ದರು. ಆದರೆ ಬಹುಕಾಲದಿಂದ ವಾಪಸ್​ ಬಾರದೇ ಇರುವುದನ್ನು ಕಂಡು ಹುಡುಕಾಡಿದ್ದು, ಮಗು ಪತ್ತೆಯಾಗಿರಲಿಲ್ಲ. ಈ ಕುರಿತು ಮುಧೋಳ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು.
ಭಿಕ್ಷೆ ಬೇಡಲು ಬಳಕೆ: ಇಮಾಮ್​ ಶಹಾನು ಅಪಹರಿಸಿಕೊಂಡು ಹೋದ 9 ತಿಂಗಳ ಮಗುವನ್ನು ತೆಲಂಗಾಣದ ಹೈದರಾಬಾದ್​ನಲ್ಲಿ ಮಗುವನ್ನು ತೋರಿಸಿ, ಭಿೆ ಬೇಡುವುದನ್ನು ಮಾಡುತ್ತಿದ್ದಾಗ ಪೊಲೀಸರು, ಮಗುವಿನ ತಂದೆ, ತಾಯಿ ಕಣ್ಣಿಗೆ ಬಿದಿದ್ದಾನೆ. ತಕ್ಷಣ ಮಗುವನ್ನು ಬಿಟ್ಟು, ಓಡಿ ಹೋಗಿದ್ದ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದಾಗ ಹೈದರಾಬಾದ್​ನ ಮಸೀದಿಗಳ ಎದುರು ನಿಂತು ಮಗುವನ್ನು ತೋರಿಸಿ, ಭಿೆ ಬೇಡುವುದಕ್ಕಾಗಿ ಅಪಹರಿಸಿದ್ದಾಗಿ ತಿಳಿಸಿದ್ದ. ಈ ಕುರಿತು ತನಿಖಾಧಿಕಾರಿ ದೋಷಾರೋಪಣೆ ಸಲ್ಲಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್​ ಶಿೆ ವಿಧಿಸಿ, ಆದೇಶಿಸಿದೆ. ಸರ್ಕಾರದ ಪರ ಕೆ.ಆರ್​.ನಾಗರಾಜ್​ ವಾದಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net