ಅನುಭವಿ ಅಲ್ಲಮಪ್ರಭು ಪಾಟೀಲ್​ಗೆ ಮಂತ್ರಿ ಮಾಡಿ

allamprabhu patil
allamprabhu patil
Published on
ಕಲಬುರಗಿ: ರಾಜ್ಯದ ಹೊಸ ಸಚಿವ ಸಂಪುಟದಲ್ಲಿ ಕಲಬುರಗಿ ದಕ್ಷಿಣ ಶಾಸಕರು, ಅನುಭವಿ ಅಲ್ಲಂಪ್ರಭು ಪಾಟೀಲರಿಗೆ ಸಚಿವ ಸ್ಥಾನ ನೀಡಿ ಜನಸೇವೆಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಮೇಳಕುಂದಾ (ಬಿ) ಗ್ರಾಮದ ಹಿರಿಯ ಕಾಂಗ್ರೆಸ್‌ ಮುಖಂಡರಾದ ಭೀಮರಾವ ಕೊಳ್ಳೂರ ಮೇಳಕುಂದಾ, ಹಡಗಿಲ್​ ಹಾರುತಿ ಮುಖಂಡರಾದ ಮಹಾದೇವಪ್ಪಗೌಡ ಪಾಟೀಲ್‌ ಸೇರಿ ಪ್ರಮುಖರು, ವಿವಿಧ ಸಂಘ ಸಂಸ್ಥೆಗಳವರು ಆಗ್ರಹಿಸಿದ್ದಾರೆ.
ಗ್ರಾಮ ಪಂಚಾಯಿತಿಯಿಂದ, ಜಿಲ್ಲಾ ಪಂಚಾಯಿತಿ, ಹಾಪ್​ಕಾಮ್ಸ್​ ಅಧ್ಯಕ್ಷ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾಗಿ, ಪರಿಷತ್ ಸದಸ್ಯರಾಗಿ, ಶಾಸಕರಾಗಿ ಪಕ್ಷ ನಿಷ್ಠರಾಗಿ ಜನ ಸೇವೆ ಮಾಡಿದ್ದಾರೆ. ಸದಾ ಜನರ ಮಧ್ಯೆ ಇದ್ದು, ಸಂಘಟನೆ, ಪಕ್ಷ, ಸರ್ಕಾರಕ್ಕೆ ಉತ್ತಮ ಹೆಸರು ತರುವಂತೆ ಕೆಲಸ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿರಿಯ ಶಾಸಕ ಅಲ್ಲಮಪ್ರಭು ಪಾಟೀಲರು ಕಲಬುರಗಿ ದಕ್ಷಿಣ ಮತಕ್ಷೇತ್ರ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ತಮ್ಮದೆ ಕೊಡುಗೆ ನೀಡಿದ್ದಾರೆ. ಶಾಸಕರಾಗಿ ಜನಸೇವೆ ನಿರಂತರ ಮಾಡುತ್ತಿದ್ದಾರೆ. ಹಗಲಿರುಳು ಅವರು ರೈತರಿಗೆ, ಜನರಿಗೆ ನೀಡುವ ಸ್ಪಂದನೆಯಿಂದಲೇ ಹೆಚ್ಚು ಜನಪರತೆ ಗಳಿಸಿದ್ದಾರೆಂದು ಶ್ಲಾಘಿಸಿದ್ದಾರೆ.
ಐದು ದಶಕದಿಂದ ಕಾಂಗ್ರೆಸ್​ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ ಪಕ್ಷಕ್ಕೆ ಬಲ ಬರಲಿದೆ ಎಂದು ಭ್ರಮರಾಂಬಿಕಾ ಮಹಿಳಾ ಸ್ವಸಹಾಯ ಸಂಘ, ಅಕ್ಕಮಹಾದೇವಿ ಸ್ವಸಹಾಯ ಸಂಘದ ಸರ್ವ ಸದಸ್ಯರು, ಅಣ್ಣಾರಾಯ ಕೆರಮಗಿ, ಶಿವಕುಮಾರ್ ಕಟ್ಟಿ, ಮೆಹಬೂಬ್‌ ಪಟೇಲ್‌, ರಮೇಶ ಕೊಳ್ಳೂರ, ಮಹಾದೇವಪ್ಪ ಕೊಳ್ಳೂರ, ಶಿವಕುಮಾರ ಹಸರಗುಂಡಗಿ, ಬಾಬೂ ಜಮಾದಾರ, ಶರಣು ಬಾಬಜಿ, ಕುಪ್ಪಣ್ಣ ಜಮಾದಾರ ಮಳಲಿ, ಶರಣು ಕಲಬುರಗಿ ಸೇರಿ ಹಲವರು ಎಐಸಿಸಿ ಹೈಕಮಾಂಡ್​ಗೆ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net