ಅತ್ಯಾಚಾರಿಗೆ ಜೀವಾವಧಿ ಶಿಕ್ಷೆ

life sentence for rapist
life sentence for rapist
Published on
ಕಲಬುರಗಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅತ್ಯಾಚಾರಿಗೆ ಜೀವಾವಧಿ ಶಿೆ, 55 ಸಾವಿರ ರೂ. ದಂಡ ವಿಧಿಸಿ, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎ್​ಟಿಎಸ್​ಸಿ ನ್ಯಾಯಾಧೀಶ ಎಸ್​.ಎಲ್​.ಚವ್ಹಾಣ್​ ಆದೇಶಿಸಿದ್ದಾರೆ. ನಗರದ ಹಮಾಲಸಂಗ ನಿವಾಸಿ, ಜೇವರ್ಗಿ ತಾಲೂಕಿನ ಸೊನ್ನದ ರಜಾಕ್​ ಮಹೆಬೂಬ್​ ಸಾಬಶೇಖ್​ (20) ಶಿೆಗೆ ಈಡಾದ ಅತ್ಯಾಚಾರಿ.
ಸಬ್​ ಅರ್ಬನ್​ ಪೊಲೀಸ್​ ಠಾಣೆ ವ್ಯಾಪ್ತಿಯ 16 ವರ್ಷದ ಪರಿಶಿಷ್ಟ ಜಾತಿಯ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು, ರಾಮ ನಗರದ ್ಯಾಕ್ಟರಿಯೊಂದಕ್ಕೆ ಕರೆದೊಯ್ದು, ಅತ್ಯಾಚಾರ ಎಸಗಿದ್ದ. ಬಾಲಕಿ ವಿರೋಧ ಮಾಡಿದರೂ ಬಲವಂತದಿಂದ ಅತ್ಯಾಚಾರ ಎಸಗಿದ್ದ. ಈ ಕುರಿತು ಸಬ್​ ಅರ್ಬನ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ತನಿಖಾಧಿಕಾರಿ ಸಹಾಯುಕ ಪೊಲೀಸ್​ ಆಯುಕ್ತ ಡಿ.ಜಿ.ರಾಜಣ್ಣ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆದಿ ನ್ಯಾಯಾಧೀಶರು ಶಿೆ ವಿಧಿಸಿ, ಆದೇಶಿಸಿದ್ದಾರೆ. ನೊಂದ ಬಾಲಕಿಗೆ ಐದು ಲಕ್ಷ ರೂ. ಪರಿಹಾರವಾಗಿ ನೀಡಬೇಕು ಎಂದು ಆದೇಶಿಸಿದ್ದಾರೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ತುಪ್ಪದ ವಾದಿಸಿದ್ದಾರೆ. ಸಾಗಳನ್ನು ಪ್ರಭುರಾಜ, ಶ್ರೀನಿವಾಸ, ಕುಮಾರ, ಅಮೃತರಾವ ಹಾಜರುಪಡಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net