ಭೌತಿಕ ಬೆಳೆವಣಿಗೆಗೆ ಗ್ರಂಥಾಲಯ ಸಹಕಾರಿ

home library
home library
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ವೆಂಕಟೇಶ ಜನಾದ್ರಿ ಹೇಳಿಕೆ
  • ಮನೆಗೊಂದು ಗ್ರಂಥಾಲಯ ಅನುಷ್ಠಾನ
ಕಲಬುರಗಿ: ಗ್ರಂಥಾಲಯದಲ್ಲಿ ಪುಸ್ತಕಗಳು ಓದಿದರೆ ವ್ಯಕ್ತಿಯ ಭೌತಿಕ ಬೆಳೆವಣಿಗೆಗೆ ಮತ್ತು ವಿಕಸನಕ್ಕೆ ಸಹಕಾರಿಯಾಗಿ ನಿಲ್ಲುತ್ತದೆ ಎಂದು ಹಿರಿಯ ಸಾಹಿತಿ ವೆಂಕಟೇಶ ಜನಾದ್ರಿ ಹೇಳಿದರು.
ನಗರದ ಎನ್​ಜಿಓ ಕಾಲನಿಯಲ್ಲಿರುವ ಪತ್ರಕರ್ತ ಸಂಗಮನಾಥ ರೇವತಗಾಂವ ಅವರ "ರಶ್ಮಿಸಂಗಮ' ನಿವಾಸದಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತ ಸಮಿತಿ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ "ಮನೆಗೊಂದು ಗ್ರಂಥಾಲಯ' ಸಮಾರಂಭದಲ್ಲಿ ಮಾತನಾಡಿದರು.
ಮನೆಯಲ್ಲಿರುವ ಗ್ರಂಥಾಲಯದಿಂದ ಸಂಸ್ಕಾರ ಹೊಂದಲು ಸಾಧ್ಯ. ಮಕ್ಕಳಲ್ಲಿ ಮೊಬೈಲ್​ಗೀಳಿನ ಮಧ್ಯೆ ಪತ್ರಿಕೆಗಳೇ ಓದುವ ವ್ಯವದಾನವಿಲ್ಲ. ಪುಸ್ತಕಗಳಂತೂ ದೂರ. ಮನೆಯಲ್ಲಿ ಗ್ರಂಥಗಳಿದ್ದಲ್ಲಿ ಪುಟಗಳನ್ನಾದರೂ ತಿರುವಿಹಾಕಬಹುದಾಗಿದೆ. ಗ್ರಂಥಾಲಯಗಳು ವ್ಯವಸ್ಥಿತ ರೂಪದಲ್ಲಿದ್ದಲ್ಲಿ ಓದುಗರಿಗೆ ಜ್ಞಾನದೇಗುಲವಾಗುತ್ತದೆ ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯ ಬಿ.ಎಚ್​.ನಿರಗುಡಿ ಮಾತನಾಡಿ, ಒಂದು ಲಕ್ಷ ಮನೆಗಳಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಮಾಡಬೇಕೆನ್ನುವುದು ಪ್ರಾಧಿಕಾರ ಅಧ್ಯಕ್ಷ ಮಾನಸ ಮೈಸೂರ ಅವರ ಕನಸಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿಯೂ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದ ಯೋಜನೆಯಾಗಿದೆ. ಉತ್ತಮ ಗ್ರಂಥಾಲಯ ಸಂಗ್ರಹಕ್ಕೆ ಅಭಿನಂದನಾ ಪತ್ರ ನೀಡುವ ಯೋಜನೆ ಪ್ರಾಧಿಕಾರ ಹಾಕಿಕೊಂಡಿದೆ ಎಂದರು.
ಶಾಲಾ&-ಕಾಲೇಜುಗಳಲ್ಲಿ ಪ್ರಾಧಿಕಾರದಿಂದ ಅನೇಕ ಯೋಜನೆಗಳು ಹಾಕಿಕೊಂಡಿದ್ದೇವೆ. 10 ಸಾವಿರ ಧನ ಸಹಾಯದೊಂದಿಗೆ ನನ್ನ ನೆಚ್ಚಿನ ಪುಸ್ತಕ, ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಕಲ್ಯಾಣ ಕರ್ನಾಟಕದ 21 ಯುವ ಸಾಹಿತಿಗಳ ಪುಸ್ತಕಗಳ ಪ್ರಕಟಣೆ ಮಾಡಿ ಬಿಡುಗಡೆ ಮಾಡಿರುವ ಶ್ರೇಯಸ್ಸು ಕಂಡಿದ್ದೇವೆ. ಪ್ರಾಧಿಕಾರದೊಂದಿಗೆ ಸಹಕಾರ ನೀಡಿ, ಪುಸ್ತಕ ಸಂಸತಿ ಬೆಳೆಸಬೇಕು ಎಂದರು.
ಸಂಪದಾ ಪ್ರಾರ್ಥಿಸಿದಳು. ಜಿಲ್ಲಾ ಜಾಗೃತ ಸಮಿತಿ ಸದಸ್ಯ ಡಾ.ಎಂ.ಬಿ.ಕಟ್ಟಿ ಸ್ವಾಗತಿಸಿದರು. ಶ್ರೀಶೈಲ ಮದಾನೆ ನಿರೂಪಣೆ ಮಾಡಿದರು. ಡಾ.ನಾಗಪ್ಪ ಗೋಗಿ ವಂದಿಸಿದರು. ರೇವಣಸಿದ್ಧಪ್ಪ ದುಖಾನ, ಡಾ.ಮಹೇಶ ಗಂವ್ಹಾರ, ಲೇಖಕ ಸೂರ್ಯಕಾಂತ ಸೊನ್ನದ, ಶಿಕ್ಷಕಿ ರಶ್ಮಿ, ಕೃಷ್ಣ ಕುಲ್ಕರ್ಣಿ, ಶರಣಮ್ಮ ರಾಂಪೂರೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net