

ಚಿತ್ತಾಪುರ: ಇಂದಿನ ಮುಂದುವರಿದ ಜಗತ್ತಿನಲ್ಲಿ ಚಿಟ್ಟೆಗಳನ್ನು ಕಾಪಾಡುವುದು ಅಗತ್ಯವಾಗಿದೆ. ಚಿಟ್ಟೆಗಳನ್ನು ಕಾಪಾಡುವ ಮೂಲಕ ಪ್ರಕೃತಿಯನ್ನು ಉಳಿಸಿ, ಸುಂದರ ಭವಿಷ್ಯ ನಿರ್ಮಿಸೋಣ ಎಂದು ತಾಲೂಕು ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿ ವಿಜಯಕುಮಾರ ಬಡಿಗೇರ ಹೇಳಿದರು.
ಗುಂಡಗುರ್ತಿ ಲುಂಬಿನಿ ಟ್ರೀ ಪಾರ್ಕ್ನಲ್ಲಿ ತಾಲೂಕು ಅರಣ್ಯ ಇಲಾಖೆ, ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ ಪ್ರಾಣಿ ಶಾಸ್ತ್ರ ವಿಭಾಗ ಹಾಗೂ ಇಕೋ ಕ್ಲಬ್ನಿಂದ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದೊಡ್ಡ ಚಿಟ್ಟೆಗಳ ತಿಂಗಳು (ಬಿಗ್ ಬಟರ್ಫ್ಲೆ ಮಂತ್) ಕಾರ್ಯಕ್ರಮದಲ್ಲಿ ಮಾತನಾಡಿ, ಚಿಟ್ಟೆಗಳು ಪ್ರಕೃತಿಯ ಸೌಂದರ್ಯದ ಪ್ರತಿಕ. ಅವುಗಳ ವೈವಿಧ್ಯಮಯ ಬಣ್ಣಗಳು ನಮ್ಮ ಮನಸ್ಸಿಗೆ ಸಂತೋಷವನ್ನು ನೀಡುವುದಷ್ಟೇ ಅಲ್ಲದೆ, ಪರಿಸರದ ಆರೋಗ್ಯಕ್ಕೂ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ನಾವು ಹೆಚ್ಚು ಗಿಡಮರಗಳನ್ನು ಬೆಳೆಸಬೇಕು, ಹೂವಿನ ಸಸ್ಯಗಳನ್ನು ನೆಡಬೇಕು ಮತ್ತು ಪ್ರಕೃತಿಯನ್ನು ಸಂರಸಬೇಕು. ಚಿಟ್ಟೆಗಳನ್ನು ರಸುವುದು ಎಂದರೆ ನಮ್ಮ ಪರಿಸರವನ್ನು ರಸುವುದಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಅರಣ್ಯ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದು ಹೇಳಿದರು.
ಸಹಾಯಕ ಅರಣ್ಯ ಸಂರಣಾಧಿಕಾರಿ ಸುನೀಲಕುಮಾರ ಚವ್ಹಾಣ್, ಪ್ರಾಣಿಶಾಸ ಅಧ್ಯಾಪಕ ಪವನ ಮೋಹನರಾವ್ ಮಾತನಾಡಿದರು.
ವನ್ಯಜಿವಿ ಛಾಯಾಗ್ರಾಹಕ ಅಭಿಷೇಕ, ಡಿಆರ್ಎಫಒ ಅನಿಲ ಕುಮಾರ, ಬೀಟ್ ಫಾರೆಸ್ಟರ್ ಶ್ರೀಕಾಂತ, ಅರಣ್ಯ ಸಿಬ್ಬಂದಿ ನಾಗೇಶ, ಸಿದ್ದು, ಜಾಫರ್ ಇತರರಿದ್ದರು.
ವಿದ್ಯಾರ್ಥಿಗಳು, ಅಧ್ಯಾಪಕರು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪ್ರಕೃತಿ ಪ್ರೇಮಿಗಳು ಲುಂಬಿನಿ ಟ್ರೀ ಪಾರ್ಕ್ನಲ್ಲಿ ಸುತ್ತಾಡಿ ಚಿಟ್ಟೆಗಳನ್ನು ವೀಕ್ಷಿಸಿದರು. ವಿವಿಧ ಸಸ್ಯಗಳ ಮೇಲೆ ಕಂಡುಬಂದ ಚಿಟ್ಟೆಗಳ ವೈವಿಧ್ಯ, ಅವುಗಳ ಆವಾಸಸ್ಥಾನ, ಆಹಾರ ಸಸ್ಯಗಳು ಹಾಗೂ ಪರಿಸರ ವ್ಯವಸ್ಥೆಯಲ್ಲಿ ಚಿಟ್ಟೆಗಳ ಮಹತ್ವದ ಕುರಿತು ಮಾಹಿತಿ ಪಡೆದರು.