ಕೆಟ್ಟ ಘಳಿಗೆ ಮರೆತು ಉತ್ತಮ ಜೀವನ ನಡೆಸಿ

ಸೇಡಂನ ಉಪ-ಕಾರಾಗೃಹದಲ್ಲಿ ಬಂದಿಗಳಿಗೆ ಆಯೋಜಿಸಿಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ನ್ಯಾಯಾಧೀಶ ಸಿರಾಜೋದ್ದಿನ್ ಎ. ಉದ್ಘಾಟಿಸಿದರು. ಬಸವರಾಜ ತಳವಾರ, ಬಾಲು ಜಾಧವ್, ಶರಣಬಸಪ್ಪ ಹಾಗರಗಿ ಇದ್ದರು.
ಸೇಡಂನ ಉಪ-ಕಾರಾಗೃಹದಲ್ಲಿ ಬಂದಿಗಳಿಗೆ ಆಯೋಜಿಸಿಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ನ್ಯಾಯಾಧೀಶ ಸಿರಾಜೋದ್ದಿನ್ ಎ. ಉದ್ಘಾಟಿಸಿದರು. ಬಸವರಾಜ ತಳವಾರ, ಬಾಲು ಜಾಧವ್, ಶರಣಬಸಪ್ಪ ಹಾಗರಗಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶ ಸಿರಾಜೋದ್ದಿನ್ ಸಲಹೆ
  • ಸೇಡಂ ಉಪ ಕಾರಾಗೃಹದಲ್ಲಿ ಕಾನೂನು ಅರಿವು ನೆರವು
ಸೇಡಂ: ಸಮಾಜದಲ್ಲಿ ಸರ್ವರಿಗೂ ಕಾನೂನು ಅರಿವು ಅಗತ್ಯವಿದ್ದು, ಅಂದಾಗ ಮಾತ್ರ ಅಪರಾಧಗಳ ಸಂಖ್ಯೆ ಕಮ್ಮಿಯಾಗಲಿದೆ. ಬಂದಿಗಳಾದ ತಾವು ಬದುಕಿನಲ್ಲಾದ ದುರ್ಘಟನೆ ಮರೆತು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ೪ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶ ಸಿರಾಜೋದ್ದಿನ್ ಎ. ಹೇಳಿದರು.
ಉಪ-ಕಾರಾಗೃಹದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರಾಗೃಹ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಬಂದಿಗಳಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೈಲಿನಿಂದ ಹೊರಹೋದ ಮೇಲೆ ಪರಿವರ್ತನೆಯಾಗಿ ಉತ್ತಮ ನಾಗರಿಕರಾಗಿ ಬದುಕಬೇಕು ಎಂದು ಸಲಹೆ ನೀಡಿದರು.
ಹಿರಿಯ ಶ್ರೇಣಿ ನ್ಯಾಯಾಧೀಶ ಬಸವರಾಜ ತಳವಾರ ಮಾತನಾಡಿ, ದೇಶದಲ್ಲಿ ಕಾನೂನಿನ ಅರಿವು ಹೊಂದಲು ಸಾಕಷ್ಟು ಅವಕಾಶವಿದೆ. ಬಂದಿಗಳು ಹಿಂದಿನ ಕೆಟ್ಟ ಘಳಿಗೆ ಮರೆತು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಕಿರಿಯ ಶ್ರೇಣಿ ನ್ಯಾಯಾಧೀಶ ಬಾಲು ಜಾಧವ್ ಮಾತನಾಡಿ, ಪ್ರತಿ ನಾಗರಿಕ ಕಾನೂನು ಅರಿಯುವುದು ಅಗತ್ಯ. ಬಡತನ, ಅಜ್ಞಾನ, ಅಥವಾ ಸಾಮಾಜಿಕ ಹಿಂದುಳಿದಿರುವಿಕೆಯಿAದಾಗಿ ನ್ಯಾಯದಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಉಚಿತ ಕಾನೂನು ನೆರವು ಯೋಜನೆ ಜಾರಿಯಲ್ಲಿದೆ ಎಂದು ತಿಳಿಸಿದರು.
ಸಹಾಯಕ ಸರ್ಕಾರಿ ಅಭಿಯೋಜಕ ಹನುಮೇಗೌಡ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಶರಣಬಸಪ್ಪ ಹಾಗರಗಿ ಮಾತನಾಡಿದರು.
ಉಪಾಧ್ಯಕ್ಷೆ ಹೇಮಾ, ಪ್ರಧಾನ ಕಾರ್ಯದರ್ಶಿ ಭೀಮರಾಯ ದಂಡೋತಿ, ವಕೀಲರಾದ ಶಂಕರಮಾನAದ ಅವಂಟಿ, ಬಸವರಾಜ ತಡಕಲ್, ಜೈಲಿನ ಅಧಿಕ್ಷಕ ಡೇವಿಡ್, ಸಿಬ್ಬಂದಿ ಅಂಬರೀಶ ಗಡದೆ, ಪುಂಡಪ್ಪ, ಸತೀಶ ಕಣ್ಮೇಶ್ವರ, ಬಸಮ್ಮ, ಏಶಪ್ಪ, ಸದಾಶಿವ ಪಾಟೀಲ್, ಶರಣಬಸಪ್ಪ ದೇಗಾಂವ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net