ಕಾನೂನು ಶಿಕ್ಷಣದಲ್ಲಿ ಮಾನವೀಯ ಆಯಾಮ

ಕಲಬುರಗಿ ಪಿಡಿಎ ಇಂಜಿನಿಯರಿAಗ್ ಕಾಲೇಜಿನಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಸೋಮವಾರ ಆಯೋಜಿಸಿದ್ದ ವಲಯ ಮಟ್ಟದ ಕಾರ್ಯಾಗಾರದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಭಕ್ರು, ಅನು ಸಿವರಾಮನ್, ಆರ್.ದೇವದಾಸ್, ಎಂ.ಚAದ್ರಶೇಖರ ರಡ್ಡಿ, ಎಚ್.ಶಶಿಧರ ಶೆಟ್ಟಿ, ಜಿ.ಎಲ್.ಲಕ್ಷಿö್ಮÃನಾರಾಯಣ ಇದ್ದರು.
ಕಲಬುರಗಿ ಪಿಡಿಎ ಇಂಜಿನಿಯರಿAಗ್ ಕಾಲೇಜಿನಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಸೋಮವಾರ ಆಯೋಜಿಸಿದ್ದ ವಲಯ ಮಟ್ಟದ ಕಾರ್ಯಾಗಾರದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಭಕ್ರು, ಅನು ಸಿವರಾಮನ್, ಆರ್.ದೇವದಾಸ್, ಎಂ.ಚAದ್ರಶೇಖರ ರಡ್ಡಿ, ಎಚ್.ಶಶಿಧರ ಶೆಟ್ಟಿ, ಜಿ.ಎಲ್.ಲಕ್ಷಿö್ಮÃನಾರಾಯಣ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಭಕ್ರು ಪ್ರತಿಪಾದನೆ
  • ಪಿಡಿಎ ಕಾಲೇಜಿನಲ್ಲಿ ವಲಯದ ಮಟ್ಟದ ಕಾರ್ಯಾಗಾರ
ಕಲಬುರಗಿ: ಕಾನೂನು ಶಿಕ್ಷಣ ಕೇವಲ ಪಠ್ಯಪುಸ್ತಕ, ಪರೀಕ್ಷೆ ಅಥವಾ ನ್ಯಾಯಾಲಯದ ಕಾರ್ಯವಿಧಾನಗಳಿಗೆ ಸೀಮಿತವಾಗಿಲ್ಲ, ಅದು ಮಾನವೀಯ ಆಯಾಮವನ್ನೂ ಹೊಂದಿದೆ. ಪರಾನುಭೂತಿ, ತಾಳ್ಮೆ, ನೀತಿಶಾಸ್ತç ಮತ್ತು ಜವಾಬ್ದಾರಿಯನ್ನು ಕಾನೂನು ಬಯಸುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯೂ ಆಗಿರುವ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಪ್ರಧಾನ ಪೋಷಕ ವಿಭು ಭಕ್ರು ಹೇಳಿದರು.
ಪಿಡಿಎ ಇಂಜಿನಿಯರಿAಗ್ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಹಾಗೂ ಕಲಬುರಗಿ ವಲಯದ ಕಾನೂನು ಪದವಿ ಮಹಾವಿದ್ಯಾಲಯಗಳ ಸಹಯೋಗದಡಿ ತರಗತಿ ಕೊಠಡಿಯಿಂದ ನ್ಯಾಯಾಲಯದ ಕೋಣೆಗೆ: ಸಾಮಾಜಿಕ ನ್ಯಾಯಕ್ಕೆ ವೇಗರ್ವಧಕರಾಗಿ ಕಾನೂನು ವಿದ್ಯಾರ್ಥಿಗಳು ಘೋಷವಾಕ್ಯದೊಂದಿಗೆ ಸೋಮವಾರ ಆಯೋಜಿಸಿದ್ದ ಐದನೇ ವಲಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ಕಾಲೇಜುಗಳಿಗೆ ಪ್ರವೇಶಿಸುವ ಅನೇಕ ವಿದ್ಯಾರ್ಥಿಗಳು ವಕೀಲರು, ನ್ಯಾಯಾಧೀಶರು, ಶಿಕ್ಷಣ ತಜ್ಞರು ಅಥವಾ ನಾಗರಿಕ ಸೇವಕರಾಗಲು ಬಯಸುತ್ತಾರೆ. ಇವು ನಿಜಕ್ಕೂ ಉದಾತ್ತ ಆಕಾಂಕ್ಷೆಗಳು. ಕಾನೂನು ವೃತ್ತಿ ಯಾವಾಗಲೂ ಗೌರವಾನ್ವಿತ ಸ್ಥಾನ ಹೊಂದಿದೆ. ಅದು ಸಾಂವಿಧಾನಿಕ ಮೌಲ್ಯಗಳ ರಕ್ಷಣೆ ಮತ್ತು ನ್ಯಾಯ ಪ್ರವೇಶದೊಂದಿಗೆ ನಿಕಟ ಸಂಪರ್ಕ ಹೊಂದಿದೆ ಎಂದು ಪ್ರತಿಪಾದಿಸಿದರು.
ಭಾರತದ ಸಂವಿಧಾನ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಒದಗಿಸಿದೆ. ಆದರೂ ನ್ಯಾಯ ಹಿಂದುಳಿದ ಮತ್ತು ಅಂಚಿನಲ್ಲಿರುವವರನ್ನು ಒಳಗೊಂಡAತೆ ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪಿದಾಗಲೇ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಉz್ದೆÃಶ ಈಡೇರಿದಂತಾಗುತ್ತದೆ ಎಂದರು.
ಕಾನೂನು ವಿದ್ಯಾರ್ಥಿಗಳು ಮೊದಲು ಸಾಂವಿಧಾನಿಕ ತತ್ವ, ನ್ಯಾಯ, ಸಮಾನತೆ, ಹಕ್ಕು, ಕರ್ತವ್ಯ ಮತ್ತು ಕಾನೂನಿನ ನಿಯಮಗಳ ಬಗ್ಗೆ ಕಲಿಯುವುದು ತರಗತಿ ಕೋಣೆಯೊಳಗೆ. ಆದರೆ ಕಾನೂನು ಶಿಕ್ಷಣದ ನಿಜವಾದ ಉz್ದÉÃಶ ಸೈದ್ಧಾಂತಿಕ ಜ್ಞಾನ ಪಡೆಯುವುದು ಮಾತ್ರವಲ್ಲ, ಸಾಮಾಜಿಕ ಪರಿವರ್ತನೆಯಲ್ಲಿ ಕಾನೂನನ್ನು ಹೇಗೆ ಪ್ರಬಲ ಸಾಧನವಾಗಿ ಬಳಸಬಹುದು ಎಂಬುದರ ಮೇಲೆ ಅವಲಂಬಿಸಿದೆ ಎಂದು ಹೇಳಿದರು.
ಹೈಕೋರ್ಟ್ ನ್ಯಾಯಮೂರ್ತಿ ಆದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಅನು ಸಿವರಾಮನ್ ಮಾತನಾಡಿ, ಕಾನೂನು ಶಿಕ್ಷಣದ ನಿಜವಾದ ಉz್ದÉÃಶ ಕೇವಲ ಯಶಸ್ವಿ ವೃತ್ತಿಪರರನ್ನು ಉತ್ಪಾದಿಸುವುದಲ್ಲ, ಬದಲಾಗಿ ಸಮಾಜ ಸುಧಾರಣೆಗಾಗಿ ತಮ್ಮ ಜ್ಞಾನ ಬಳಸುವವರನ್ನು ಸೃಷ್ಟಿಸುವುದು. ದುರ್ಬಲ ವರ್ಗಗಳಿಗೆ ಸಹಾಯ ಮಾಡಲು ವಿದ್ಯಾರ್ಥಿಗಳು ಮಾಡುವ ಸಣ್ಣ ಪ್ರಯತ್ನವೂ ಅರ್ಥಪೂರ್ಣ ಮತ್ತು ಶಾಶ್ವತ ಸಾಮಾಜಿಕ ಬದಲಾವಣೆ ತರಬಹುದು ಎಂದರು.
ಪ್ರಾಧಿಕಾರ ರಾಜ್ಯಾದ್ಯಂತ ಕಾನೂನು ಜಾಗೃತಿ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಆರ್ಥಿಕವಾಗಿ ದುರ್ಬಲ ಮತ್ತು ಮುಖ್ಯ ವಾಹಿನಿಯಿಂದ ವಂಚಿತರಿಗೆ ಸಮಾನ ನ್ಯಾಯ ಮತ್ತು ಉಚಿತ ಕಾನೂನು ನೆರವು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ನಿರಂತರ ಕೆಲಸ ಮಾಡುತ್ತದೆ. ಭಾರತ ನ್ಯಾಯ ವರದಿಯ ಪ್ರಕಾರ ೨೦೨೨ ಮತ್ತು ೨೦೨೫ರಲ್ಲಿ ದುರ್ಬಲ ವರ್ಗಗಳ ಬಾಗಿಲಿಗೆ ಕಾನೂನು ಸೇವೆ ಒದಗಿಸುವಲ್ಲಿ ದೇಶದಲ್ಲೇ ನಂ.೧ ಸ್ಥಾನ ಪಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್ ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ನ್ಯಾಯಮೂರ್ತಿ ಆರ್.ದೇವದಾಸ್ ಮಾತನಾಡಿ, ನ್ಯಾಯ ನ್ಯಾಯಾಲಯದ ಕೋಣೆಗಳಲ್ಲಿ ಮಾತ್ರ ದೊರೆಯಲ್ಲ. ಕಾನೂನು ಅರಿವು ಕಾಡ್ಗಿಚ್ಚಿನಂತೆ ಹರಡಿದಾಗ, ನಾಗರಿಕರು ತಮ್ಮ ಕಾನೂನು ಜ್ಞಾನವನ್ನು ಸಾರ್ವಜನಿಕ ಒಳಿತಿಗಾಗಿ ಬಳಸಿದಾಗ, ಸಂವಿಧಾನದಲ್ಲಿನ ಮೌಲ್ಯಗಳು ದೈನಂದಿನ ಜೀವನದ ಭಾಗವಾದಾಗ ಮತ್ತು ಕಾನೂನು ನಿಯಮಗಳ ವ್ಯವಸ್ಥೆಯಾಗಿ ಮಾತ್ರವಲ್ಲದೆ ಮಾನವ ಘನತೆಗೆ ಸಾಧನವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದಾಗ ನ್ಯಾಯ ಸಿಗಲು ಸಾಧ್ಯ ಎಂದು ಪ್ರತಿಪಾದಿಸಿದರು.
ಹೈಕೋರ್ಟ್ ರಿಜಿಸ್ಟಾçರ್ ಜನರಲ್ ಎಂ.ಚAದ್ರಶೇಖರ ರೆಡ್ಡಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ ಸೇರಿ ವಿವಿಧ ಹಂತದ ನ್ಯಾಯಾಧೀಶರು, ವಕೀಲರು, ಅಧ್ಯಾಪಕರು ಹಾಗೂ ಸುಮಾರು ೧,೧೦೦ ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಜಿ.ಎಲ್. ಲಕ್ಷಿö್ಮÃನಾರಾಯಣ ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ವಂದಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಬಾಲಸುಬ್ರಮಣಿ ನಿರೂಪಣೆ ಮಾಡಿದರು.
"

ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಕಾನೂನು ವೃತ್ತಿಪರರು ಸೈಬರ್ ಅಪರಾಧ, ಡಿಜಿಟಲ್ ಗೌಪ್ಯತೆ, ಆನ್‌ಲೈನ್ ವಂಚನೆ, ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನದ ದುರ್ಬಳಕೆಯಂಥ ಸವಾಲುಗಳನ್ನು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ನಿರಂತರ ನವೀಕರಿಸಬೇಕು. ವೃತ್ತಿ ಜೀವನದುದ್ದಕ್ಕೂ ಸಾಮಾಜಿಕವಾಗಿ ಜಾಗೃತರಾಗಿರಬೇಕು.

| ಅನು ಸಿವರಾಮನ್ಅಧ್ಯಕ್ಷರು, ರಾಜ್ಯ ಕಾನೂನು ಸೇವಾ ಪ್ರಾಧಿಕಾರ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net