ಕನ್ನಡ ಭಾಷಾಭಿಮಾನ ಹೆಚ್ಚಲಿ

kannada sahitay parishad
kannada sahitay parishad
Published on

ಪ್ರಮುಖ ಮುಖ್ಯಾಂಶಗಳು

  • ರಾಜೇಶ ಗುತ್ತೇದಾರ್​ ಆಶಯ
  • ಕಸಾಪದಿಂದ ಗುಣಾಗ್ರಣಿ ಪ್ರಶಸ್ತಿ ಪ್ರದಾನ
ಕಲಬುರಗಿ: ನಾವು ಓದುವ ಶಾಲೆಗಳಲ್ಲಿ ಕಲೆ, ಸಾಂಸ್ಕತಿಕ ಕಾರ್ಯಕ್ರಮಗಳ ಆಯೋಜಿಸಿ ಭಾರತೀಯ ಸಂಸತಿ, ಸಾಹಿತ್ಯ ಉಳಿಯುವ ಜತೆಗೆ ಭಾಷಾಭಿವೃದ್ಧಿ ಆಗಲಿದೆ. ಕನ್ನಡ ಭಾಷೆ ಅಭಿಮಾನ ಹೆಚ್ಚಬೇಕು ಎಂದು ಜಿಪಂ ಮಾಜಿ ಸದಸ್ಯ ರಾಜೇಶ ಗುತ್ತೇದಾರ್​ ಆಶಯ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ನಿಂದ ನಗರದ ಕನ್ನಡ ಭವನದ ಬಾಪೂಗೌಡ ದರ್ಶನಾಪೂರ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ 10ನೇ ಪರೀಕ್ಷೆ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹತ್ತರ ಕನ್ನಡಕ್ಕೆ ಗುಣಾಗ್ರಣಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ವಿದ್ಯಾವಂತರಾಗಿ ಸಮಾಜಕ್ಕೆ ಮರಳಿ ನೀಡಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವುದರಿಂದ ಸಾಧನೆಗೆ ಪ್ರೇರಣೆ ದೊರೆಯುತ್ತದೆ ಎಂದರು.
ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ ಮಾತನಾಡಿ, ಅಂಕವೇ ಮುಖ್ಯವಾಗದೇ ಜ್ಞಾನಕ್ಕೆ ಪೂರಕವಾಗಿರಬೇಕು. ಮಕ್ಕಳಲ್ಲಿ ಓದುವ ಸಂಸ್ಕತಿ ಬೆಳೆಸಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್​ ತೇಗಲತಿಪ್ಪಿ, ಕನ್ನಡ ಭಾಷೆ ಅತ್ಯಂತ ಸುಲಭವಾಗಿದ್ದು, ವಿದೇಶಿ ಸಂಸತಿಯ ಆಕ್ರಮ ಮೀರಿ ಕನ್ನಡವನ್ನು ಬಳಸಿ ಬೆಳೆಸೋಣ ಎಂದರು.
220 ಕ್ಕೂ ಹೆಚ್ಚು ಕನ್ನಡ ಅಂಕವೀರರಿಗೆ ಹತ್ತರ ಕನ್ನಡಕೆ ಗುಣಾಗ್ರಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಅರುಣಕುಮಾರ ಎಂ. ಪಾಟೀಲ್​, ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಕಚೇರಿ ಉಪ ನಿರ್ದೇಶಕ ಎನ್​.ಎಚ್​. ನಾಗೂರ, ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ, ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂದ ಅಧ್ಯಕ್ಷ ಮಹೇಶ ಹೂಗಾರ, ಪ್ರಮುಖರಾದ ವಿದ್ಯಾಸಾಗರ ದೇಶಮುಖ, ಲಿಂಗರಾಜ ಸಿರಗಾಪೂರ, ಧರ್ಮರಾಜ ಜವಳಿ, ಶಿವರಾಜ ಅಂಡಗಿ, ಧರ್ಮಣ್ಣ ಎಚ್​ ಧನ್ನಿ, ಶರಣರಾಜ ಛಪ್ಪರಬಂದಿ, ಸಿದ್ಧಲಿಂಗ ಬಾಳಿ, ಸೈಯ್ಯದ್​ ನಜಿರುದ್ದಿನ್​ ಮುತ್ತವಲ್ಲಿ, ಗಣೇಶ ಚಿನ್ನಾಕಾರ, ಬಾಬುರಾವ ಪಾಟೀಲ್​, ರಾಜೇಂದ್ರ ಮಾಡಬೂಳ, ಹಣಮಂತರಾವ ಪೆಂಚನಪಳ್ಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net