ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನ: ಹೋರಾಟಗಾರರ ಬಂಧನ

ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನ: ಹೋರಾಟಗಾರರ ಬಂಧನ
Published on: 

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಮಾಡುವಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ, ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಮುಂದಾದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆಯಲಾಯಿತು.

ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯಿಂದ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಮುಂದಾದಾಗ ಹೋರಾಟಗಾರ ಎಂ.ಎಸ್.ಪಾಟೀಲ್ ನರಿಬೋಳ ಸೇರಿದಂತೆ ನೂರಾರು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು, ಪ್ರಯತ್ನ ವಿಫಲಗೊಳಿಸಿದರು.

371ಜೆ ಸಮರ್ಪಕವಾಗಿ ಜಾರಿ ಆಗುತ್ತಿಲ್ಲ, ಕಾವೇರಿಗೆ ಆರತಿ ಮಾಡುತ್ತಾರೆ, ಕೃಷ್ಣಾ ಭೀಮಾ ಮರೆತ್ತಿದ್ದಾರೆ, ಬೆಂಗಳೂರಿನ ಓರ್ವ ಸಾಹಿತಿ ಪುಸ್ತಕ ಬರೆದರೆ ರಾಜ್ಯ ಮಟ್ಟದ ಸಾಹಿತಿ, ಆದರೆ ಕಕ ಭಾಗದ ಸಾಹಿತಿ ನೂರು ಪುಸ್ತಕ ಬರೆದರೂ ನಿರ್ಲಕ್ಷ್ಯ, ಕೈಗಾರಿಕೆಗಳು ಬರುತ್ತಿಲ್ಲ, ಸರ್ಕಾರ ಅನುದಾನ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ಖಂಡಿಸಿ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿದರು.

ಹೋರಾಟಗಾರರಾದ ವಿನೋದಕುಮಾರ ಜನೇವರಿ, ಲಕ್ಷ್ಮೀಕಾಂತ ಸ್ವಾದಿ, ಮಹೇಶ ಕೆಂಭಾವಿ, ಸಂಜುಕುಮಾರ ಗುತ್ತೇದಾರ, ಸುಮಾ ಕವಲ್ದಾರ್ ಸೇರಿದಂತೆ ನೂರಾರು ಜನರನ್ನು ಪೊಲೀಸರು ವಶಕ್ಕೆ ಪಡೆದು, ವಶಕ್ಕೆ ಪಡೆದರು.