ಕಲಬುರಗಿ ರೌಡಿಶೀಟರ್​ ಉಸ್ಮಾನ್​ಸಾಬ್​ ಗಡಿಪಾರು

rowdy sheeter
rowdy sheeter
Published on
ಕಲಬುರಗಿ: ಕಾನೂನು ಸುವ್ಯವಸ್ಥೆ ಕಾಪಾಡಲು ಚೌಕ್​ ಪೊಲೀಸ್​ ಠಾಣೆಯ ರೂಢೀಗತ ಅಪರಾಧಿ, ರೌಡಿಶೀಟರ್​ ಮಹ್ಮದ್​ ಉಸ್ಮಾನ್​ಸಾಬ್​ನ್ನನ್ನು ಬಾಗಲಕೋಟೆ ಟೌನ್​ ಪೊಲೀಸ್​ ಠಾಣೆಗೆ ಗಡಿಪಾರು ಮಾಡಿ, ಉಪ ಪೊಲೀಸ್​ ಆಯುಕ್ತೆ ಶಾಲೂ ಆದೇಶಿಸಿದ್ದಾರೆ. ಚೌಕ್​ ಪೊಲೀಸ್​ ಠಾಣೆಯ ರೌಡಿಶೀಟರ್​ ಆಗಿದ್ದು, ಇತನ ವಿರುದ್ಧ ವಿವಿಧ ಠಾಣೆಗಳಲ್ಲಿ ಎಂಟು ಪ್ರಕರಣ ದಾಖಲಾಗಿದ್ದು, ಎ ರೌಡಿ ಎಂದು ಗುರುತಿಸಲಾಗಿದೆ. ಈತನು ನಿರಂತರ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಆರೋಪಿಯಾಗಿದ್ದು, ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ. ನಿರ್ದೇಶನದಂತೆ ಸಮಾಜದಲ್ಲಿ ಆರೋಗ್ಯಕರ ವಾತಾವರಣ ಕಾಪಾಡಲು, ಕಾನೂನಿನ ಅರಿವು ಮೂಡಿಸಲು ಗಡಿಪಾರು ಮಾಡುವುದು ಸೂಕ್ತ ಎಂದು ಚೌಕ್​ ಠಾಣೆ ಪಿಐ ಸುಶೀಲಕುಮಾರ ವರದಿ ಸಲ್ಲಿಸಿದ್ದರು. ವರದಿಯಂತೆ ಡಿಸಿಪಿ ಶಾಲೂ ಗಡಿಪಾರು ಆದೇಶ ಮಾಡಿದ್ದಾರೆ.
ಗಡಿಪಾರು ಆದೇಶ ಉಲ್ಲಂಘಿಸಿ ನಗರಕ್ಕೆ ಬಂದ ರೌಡಿಯಿಂದ ಹಲ್ಲೆ: ಕಲಬುರಗಿ: ಬೆಂಗಳೂರಿನ ಕೋಣನಕುಂಟೆ ಠಾಣೆಗೆ ಗಡಿಪಾರು ಆಗಿರುವ ರೂಢಿಗತ ಅಪರಾಧಿ, ರಾವೇಂದ್ರ ನಗರ ಪೊಲೀಸ್​ ಠಾಣೆ ರೌಡಿಶೀಟರ್​ ಖಾಜಾ ಪಾಶಾನು ಗಡಿಪಾರು ಆದೇಶ ಉಲ್ಲಂಘಿಸಿ, ನಗರಕ್ಕೆ ಬಂದು ಹಲ್ಲೆ ಮಾಡಿದ ಟನೆ ನಡೆದಿದೆ. ಮೇ 10ರಂದು ಖಾಜಾ ಪಾಶಾ ಮತ್ತು ರಿಯಾನ್​ ಮಧ್ಯೆ ಜಗಳವಾಗಿದ್ದು, ರಿಯಾನ್​ಗೆ ಖಾಜಾಪಾಶಾ ಹಲ್ಲೆ ಮಾಡಿದ್ದಾನೆ. ಗಡಿಪಾರು ಆದೇಶ ಉಲ್ಲಂಘಿಸಿದ್ದಾನೆ ಎಂದು ಆತನ ಪರಿಚಿತ ನೀಡಿದ ದೂರಿನಂತೆ ನಗರದ ರಾವೇಂದ್ರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
====
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net