ಕಲಬುರಗಿ ಪೊಲೀಸ್​ ಭರ್ಜರಿ ಕಾರ್ಯಾಚರಣೆ: ಕೋಟಿ ಮೌಲ್ಯದ 785 ಮೊಬೈಲ್​ ಪತ್ತೆ

kalaburagi police
kalaburagi police
Published on

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿ ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ.ಮಾಹಿತಿ
  • 2 ತಿಂಗಳ ವಿಶೇಷ ಕಾರ್ಯಾಚರಣೆ
ಕಲಬುರಗಿ: "ಆಪರೇಷನ್​ ಭರವಸೆ' ಅಡಿ ಎರಡು ತಿಂಗಳ ವಿಶೇಷ ಕಾರ್ಯಾಚರಣೆ ನಡೆಸಿ, ನಗರದ ವ್ಯಾಪ್ತಿಯಲ್ಲಿ ವಿವಿಧೆಡೆ ಸಾರ್ವಜನಿಕರು ಕಳೆದುಕೊಂಡ 785 ಮೊಬೈಲ್​ಗಳನ್ನು ಪತ್ತೆ ಮಾಡಿ, ವಾರಸುದಾರರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ.ತಿಳಿಸಿದರು.
ನಗರದ ಪೊಲೀಸ್​ ಆಯುಕ್ತಾಲಯದ ವ್ಯಾಪ್ತಿಯ ಎಲ್ಲ ಪೊಲೀಸ್​ ಠಾಣೆಗಳಲ್ಲಿ ಸಾರ್ವಜನಿಕರು ಮೊಬೈಲ್​ ಕಳೆದುಕೊಂಡ ಬಗ್ಗೆ ಇ&ಲಾಸ್​ ಮತ್ತು ಸಿಇಐಆರ್​ ಪೋರ್ಟಲ್​ನಲ್ಲಿ ದೂರು ದಾಖಲಿಸಿದ್ದು, ವಿಶೇಷ ಕಾರ್ಯಾಚರಣೆ ನಡೆಸಿ, ಒಟ್ಟು 1.44 ಕೋಟಿ ರೂ. ಮೌಲ್ಯದ ಮೊಬೈಲ್​ಗಳನ್ನು ಪತ್ತೆ ಮಾಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಭರವಸೆ ಮೂಡಿಸಬೇಕು ಎಂಬ ದೃಢ ನಿಶ್ಚಯದೊಂದಿಗೆ ಅಮೂಲ್ಯವಾದ ಮೊಬೈಲ್​ಗಳನ್ನು ಪತ್ತೆ ಮಾಡಲು ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ನಗರದಲ್ಲಿ ಕಳೆದ ಒಂದೆರಡು ವರ್ಷದಲ್ಲಿ ಪತ್ತೆ ಮತ್ತು ಜಪ್ತಿ ಉತ್ತಮವಾಗಿ ಸಾಗಿದೆ. ಹಿಂದೆ ಶೇ.28ರಿಂದ 32 ಇದ್ದ ಪ್ರಮಾಣವೂ ಇಂದು ಶೇ.58ರವರೆಗೆ ತಲುಪಿದ್ದೇವೆ. ಶೇ.60 ಪತ್ತೆಯಾಗುತ್ತಿವೆ ಎಂದರು.
ನಗರದ ಚೌಕ್​ ಠಾಣೆಯಲ್ಲಿ 150, ರೋಜಾ 131, ಸ್ಟೇಷನ್​ ಬಜಾರ್​ 80, ವಿಶ್ವವಿದ್ಯಾಲಯ 68, ಅಶೋಕ ನಗರ 67, ಸಬ್​ ಅರ್ಬನ್​ 66, ಸೆನ್​ 59, ಬ್ರಹ್ಮಪುರ 54, ಎಂ.ಬಿ.ನಗರ 46, ರಾವೇಂದ್ರ ನಗರ 42, ರಹತಾಬಾದ್​ ಠಾಣೆಯಲ್ಲಿ 22, ಸೆನ್​ ಸೇರಿ ಒಟ್ಟು 785 ಮೊಬೈಲ್​ಗಳನ್ನು ವಶಕ್ಕೆ ಪಡೆದಿದ್ದು, ಅದರ ಮಾಲಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.
ಸಣಪುಟ್ಟ ಮೊಬೈಲ್​ ಸೇರಿ ಲಾಂತರ ರೂ. ಮೌಲ್ಯದ ಮೊಬೈಲ್​ಗಳನ್ನು ಪತ್ತೆ ಮಾಡಲಾಗಿದೆ. ರೆಡ್ಮಿ, ಒಪ್ಪೋ, ರಿಯಲ್​ಮಿ, ವಿವೋ, ಒನ್​ಪ್ಲಸ್​, ಇನಫಿಕ್ಸ್​, ಪೋಕೋ, ಸ್ಯಾಮ್ಸಂಗ್​, ಮೊಟೊರೋಲಾ, ಕ್ಸಿಯೋಮಿ, ಟೆಕ್ನೋ ಸ್ಪಾರ್ಕ್​, ಹಾನೋರ್​, ಐಕ್ಯೂ, ಐಟೆಲ್​, ನೋಕಿಯಾ, ಆ್ಯಪ್​ಲ್​ ಕಂಪನಿಯ ಮೊಬೈಲ್​ಗಳು ಸಿಇಐಆರ್​ ಪೋರ್ಟ್​ಲ್​ಗಳ ಮೂಲಕ ಪತ್ತೆ ಹಚ್ಚಿ, ವಶಕ್ಕೆ ಪಡೆದು ವಿತರಿಸಲಾಗಿದೆ ಎಂದರು.
ಉಪ ಪೊಲೀಸ್​ ಆಯುಕ್ತೆ ಶಾಲೂ, ಡಿಸಿಪಿ ಪ್ರವಿಣ ನಾಯಕ, ಎಸಿಪಿಗಳಾದ ಶರಣಪ್ಪ ಸುಬೇದಾರ, ಬಸವೇಶ್ವರ ಹೀರಾ, ಜೇಮ್ಸ್​ ಮಿನೇಜಸ್​, ಪಿಐಗಳಾದ ಗುರುಲಿಂಗಪ್ಪಗೌಡ ಪಾಟೀಲ್​, ಚಂದ್ರಶೇಖರ ತಿಗಡಿ, ಸುಶೀಲಕುಮಾರ, ಹುಸೇನ ಭಾಷಾ, ನಟರಾಜ ಲಾಡೆ, ರಾವೇಂದ್ರ ಭಜಂತ್ರಿ, ವಾಜೀದ್​ ಪಟೇಲ್​, ಅರುಣಕುಮಾರ ಇತರರಿದ್ದರು.
ಅನ್ಯರಾಜ್ಯದಲ್ಲೂ ಪತ್ತೆ
ರಾಜ್ಯ ಪತ್ತೆಯಾದ ಮೊಬೈಲ್​
ಕರ್ನಾಟಕ 688
ಮಹಾರಾಷ್ಟ್ರ 41
ಆಂಧ್ರಪ್ರದೇಶ 23
ತೆಲಂಗಾಣ 23
ಬಿಹಾರ 07
ಉತ್ತರ ಪ್ರದೇಶ 03
ಒಟ್ಟು 785

ಸಾರ್ವಜನಿಕರು ಮೊಬೈಲ್​ ಕಳೆದ ತಕ್ಷಣ ಸಿಇಐಆರ್​ ಪೋರ್ಟ್​ಲ್​ನಲ್ಲಿ ದೂರು ದಾಖಲಿಸಿದರೆ ಪತ್ತೆಗೆ ಅನುಕೂಲವಾಗಲಿದೆ. ಜನರು ಮೊಬೈಲ್​ ಬಿಲ್​ ಇಲ್ಲದೇ, ದಾಖಲೆ ಇಲ್ಲದೇ ಖರೀದಿಸಬಾರದು. ಕಡಿಮೆ ಬೆಲೆ ಆಸೆಗೆ ಕಳ್ಳತನದ ಮೊಬೈಲ್​ ಖರೀದಿಸಿದರೆ ಸಿಮ್​ ಹಾಕಿದ ತಕ್ಷಣ ಸಿಇಐಆರ್​ ಪೋರ್ಟ್​ಲ್​ ಮೂಲಕ ಮೊಬೈಲ್​ ಪತ್ತೆ ಆಗುತ್ತದೆ. ಕಲಬುರಗಿ ನಗರ ಪೊಲೀಸ್​ ಇತಿಹಾಸದಲ್ಲೇ 1.44 ಕೋಟಿ ರೂ. ಮೌಲ್ಯದ 785 ಮೊಬೈಲ್​ ಕೇಸ್​ ಪತ್ತೆ ಹಚ್ಚಲಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು.

— ಡಾ.ಶರಣಪ್ಪ ಎಸ್​.ಡಿ. ನಗರ ಪೊಲೀಸ್​ ಆಯುಕ್ತ

ಆರು ದಿನದಲ್ಲಿ 1.75 ಲಕ್ಷ ಕೇಸ್​
ನಗರದಲ್ಲಿ ಅಳವಡಿಸಿರುವ ಅತ್ಯಾಧುನಿಕ ಐಟಿಎಂಎಸ್​ ಕ್ಯಾಮೆರಾ ಆಧಾರಿತ ಸಂಚಾರ ನಿಯಮ ಉಲ್ಲಂನೆ ನಿಗಾ ವ್ಯವಸ್ಥೆ ಅಡಿ ಮೇ 1ರಿಂದ 6ರವರೆಗೆ 1.75 ಲಕ್ಷ ಕೇಸ್​ಗಳು ಪತ್ತೆಯಾಗಿವೆ. ದಿನಕ್ಕೆ 33 ಸಾವಿರ ಕೇಸ್​ ದಾಖಲಾಗುತ್ತಿವೆ. ಸಾರ್ವಜನಿಕರು ದಂಡದಿಂದ ತಪ್ಪಿಸಿಕೊಳ್ಳಲು, ಜೀವನ ರಕ್ಷಣೆಗಾಗಿ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದರಲ್ಲಿ ಯಾವುದೇ ಮುಲಾಜಿ ಇಲ್ಲ. ಪ್ರಸ್ತುತ ಒಂದಿಷ್ಟು ರಿಯಾಯಿತಿ ನೀಡಿದ್ದು, ಜೂ.1ರಿಂದ ಎಲ್ಲರೂ ಸಂಪೂರ್ಣವಾಗಿ ಸಂಚಾರ ನಿಯಮ ಪಾಲಿಸಬೇಕು. ಇಲ್ಲದಿದ್ದರೆ ದಂಡ ಎದುರಿಸಬೇಕು ಎಂದು ಡಾ.ಶರಣಪ್ಪ ಎಸ್​.ಡಿ.ಎಚ್ಚರಿಕೆ ನೀಡಿದರು.
ಕೆಲವರು ರಸ್ತೆ ಸುಧಾರಿಸಿ, ವ್ಯವಸ್ಥೆ ಬದಲಿಸಿ ಎಂದು ನೆಪ ಹೇಳುತ್ತಿದ್ದಾರೆ. ಅದೆಲ್ಲ ನೆಪವನ್ನು ನಾವು ಕೇಳುವುದಿಲ್ಲ. ಜೀವಕ್ಕಿಂತ ಇದ್ಯಾವುದು ದೊಡ್ಡದಲ್ಲ. ನಿಯಮ ಪಾಲಿಸಿದರೆ ಸಮಸ್ಯೆ ಣವಾಗಲಿದೆ. ಶಿಸ್ತು ಬದ್ಧ ಸಂಚಾರಕ್ಕೆ ನಿಯಮ ಪಾಲನೆ ಅಗತ್ಯ. ಸೀಟ್​ ಬೆಲ್ಟ್​, ಮೊಬೈಲ್​ ಮಾತು, ಹೆಚ್ಚು ಜನರ ಆಟೋ ಓಡಾಟ, ಹೆಲ್ಮೆಟ್​ ಸೇರಿ ಇತರೆ ಉಲ್ಲಂನೆಗೆ ದಂಡ ಹಾಕುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net