2 ವರ್ಷದಲ್ಲಿ ಕಲಬುರಗಿ ನಗರದ ಚಿತ್ರಣ ಬದಲು: ಪ್ರಿಯಾಂಕ್​ ಹೇಳಿಕೆ

ಕಲಬುರಗಿ ಮಹಾನಗರ ಪಾಲಿಕೆ
ಕಲಬುರಗಿ ಮಹಾನಗರ ಪಾಲಿಕೆ
Published on

ಪ್ರಮುಖ ಮುಖ್ಯಾಂಶಗಳು

  • 108.10ಕೋಟಿ ರೂ. ಕಾಮಗಾರಿಗೆ ಅಡಿಗಲ್ಲು
  • ಪ್ರಿಯಾಂಕ್​ ರ್ಖಗೆ ಹೇಳಿಕೆ
ಕಲಬುರಗಿ: 50 ವರ್ಷದಲ್ಲಿ ಕಲಬುರಗಿ ಹೇಗಿರಬೇಕೆಂಬ ಕಲ್ಪನೆಯೊಂದಿಗೆ ಕೆಲಸ ಮಾಡುತ್ತಿದ್ದು, ಎರಡು ವರ್ಷದಲ್ಲಿ ನಗರದ ನೆ ಬದಲಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ರ್ಖಗೆ ಹೇಳಿದರು.
ನಗರದ ಡಾ.ಎಸ್​.ಎಂ.ಪಂಡಿತ್​ ರಂಗಮಂದಿರದಲ್ಲಿ ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕೆಕೆಆರ್​ಡಿಬಿ ಹಾಗೂ ವಸತಿ ಇಲಾಖೆ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ 108.85 ಕೋಟಿ ರೂ. ಒಳಚರಂಡಿ ಸೇರಿ ವಿವಿಧ ಕಾಮಗಾರಿಗಳ ಅಡಿಗಲ್ಲು, ಪೌರಕಾರ್ಮಿಕರಿಗೆ, ಕುಷ್ಠ ರೋಗದಿಂದ ಗುಣಮುಖರಾದವರಿಗೆ ನಿವೇಶನ ಪತ್ರ, ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ರಾಜೀವ್​ ಅವಾಸ್​ ಯೋಜನೆಯ ಮನೆ ಹಂಚಿಕೆ ಪತ್ರ ವಿತರಿಸಿ ಮಾತನಾಡಿದರು.
ನಗರದ ರಸ್ತೆ ಆಡಿಟ್​ ಮಾಡಿಸಿದ್ದು, 357 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸುಧಾರಿಸಲಾಗುತ್ತಿದೆ. 400 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್​ ಕಂಬ ಬದಲಾಯಿಸುತ್ತೇವೆ. ಕೂಡಾದಿಂದ 19 ಜಂಕ್ಷನ್​, 3 ಕೆರೆ ಅಭಿವೃದ್ಧಿ ಕಾಮಗಾರಿ, ಉದ್ಯಾನ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ್​ ಮಾತನಾಡಿ, ನಗರದ ಒಳಚರಂಡಿ ವ್ಯವಸ್ಥೆ 40&-50 ವರ್ಷ ಹಳೆಯದಾಗಿದ್ದು, ಪೂರ್ಣ ಹಾಳಾಗಿದ್ದು, 700 ಕೋಟಿ ರೂ. ಅವಶ್ಯವಿದ್ದು, ರಾಜ್ಯ ಸರ್ಕಾರದಿಂದ ಹಣ ಒದಗಿಸಬೇಕು ಎಂದು ಮನವಿ ಮಾಡಿದರು.
ವೈದ್ಯಕಿಯ ಶಿಕ್ಷಣ, ಕೌಲಶ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್​, ಶಾಸಕರಾದ ಕನೀಜ್​ ಫಾತಿಮಾ, ಎಂ.ವೈ.ಪಾಟೀಲ್​, ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಕೂಡಾ ಅಧ್ಯಕ್ಷ ಮಜಹರ್​ ಆಲಂ ಖಾನ್​, ಜೆಸ್ಕಾಂ ಅಧ್ಯಕ್ಷ ಪ್ರವಿಣ ಹರವಾಳ, ಮೇಯರ್​ ವರ್ಷಾ ಜಾನೆ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನುಪಮಾ ಕಮಕನೂರ, ಮಹ್ಮದ ಆಯೇಜ್​ ಖಾನ್​, ಶೇಖ ಹುಸೇನಿ, ಆಡಳಿತ ಪಕ್ಷದ ನಾಯಕ ಶೇಖ್​ ಅಜ್ಮಲಗೋಲಾ, ಚಂದ್ರಿಕಾ ಪರಮೇಶ್ವರಿ, ಬಿ.ಫೌಜಿಯಾ ತರನ್ನಮ್​, ಜಿಪಂ ಸಿಇಒ ಭಂವರ್​ ಸಿಂಗ್​ ಮೀನಾ, ಎಸ್​.ಪಿ.ಅಡ್ಡೂರು ಶ್ರೀನಿವಾಸುಲು ಇತರರಿದ್ದರು. ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಪ್ರಾಸ್ತಾವಿಕ ಮಾತನಾಡಿದರು. ಆಡಳಿತ ವಿಭಾಗದ ಉಪ ಆಯುಕ್ತೆ ಪ್ರಮೀಳಾ ಎಂ.ಕೆ. ಸ್ವಾಗತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net