2025&-26ನೇ ಸಾಲಿನಲ್ಲಿ ಯಾವುದೇ ಪದವಿ, ಸ್ನಾತಕೋತ್ತರ ಪದವಿ ಮತ್ತು ಬಿ.ಇಡಿ ಓದುತ್ತಿರುವ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿದ್ದಾರೆ. 2024&-25ನೇ ಸಾಲಿನ ವ್ಯಾಸಂಗದಲ್ಲಿ ಶೇ.65ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಪರಿಗಣಿಸಲಾಗುವುದು. ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಆದ್ಯತೆ. ಕರ್ನಾಟಕದ ನಿವಾಸಿಯಾಗಿರಬೇಕು. ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್, ವಿಳಾಸದ ಪುರಾವೆ, ವಿದ್ಯಾಸಂಸ್ಥೆ ನೀಡಿದ ಗುರುತಿನ ಚೀಟಿ, ಬ್ಯಾಂಕ್ ವಿವರ, ಪ್ರಸ್ತುತ ಶೈಕ್ಷಣಿಕ ವರ್ಷದ ಶುಲ್ಕ ರಶೀದಿ, ದೃಢೀಕರಿಸಿದ ಹಿಂದಿನ ಮೂರು ವರ್ಷದ ಮಾರ್ಕ್ಸ್ ಕಾರ್ಡ್ಗಳನ್ನು ಅರ್ಜಿಯೊಂದಿಗೆ ನೀಡಬೇಕು. ಪ್ರತಿಫಿ್ಠಾನದ ವೆಬ್ಸೈಟ್ ( jpnp.org.in ) ಮೂಲಕ ಅರ್ಜಿ ಪಡೆದು ನ.30ರೊಳಗೆ ಸಲ್ಲಿಸಬೇಕು. ಈ ಹಿಂದೆ ನ.25 ನಿಗದಿ ಆಗಬೇಕು. ಬಳಿಕ ಸ್ವೀಕೃತಿ ಪಡೆದು ಡಿ.5ರೊಳಗೆ ತಾಲೂಕು ಸಮಿತಿಗೆ ಸಲ್ಲಿಸಬೇಕು. ಮಾಹಿತಿಗೆ ಸುರೇಶ ಗುತ್ತೇದಾರ್ ಮೊ.96634 15147, 98448 80444 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.