ಭಕ್ತರ ಉದ್ಧರಿಸುತ್ತಿರುವ ಜಿಡಗಾ ಮಠ

ಜಿಡಗಾ ನವಕಲ್ಯಾಣ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಶ್ರೀ ಡಾ.ಮುರುಘರಾಜೇಂದ್ರ ಮಹಾಸ್ವಾಮೀಜಿ, ಶ್ರೀ ವೀರಮಹಾಂತ ಶಿವಾಚಾರ್ಯ, ಸಚಿವ ಈಶ್ವರ ಖಂಡ್ರೆ, ಶಾಸಕರಾದ ಬಿ.ಆರ್.ಪಾಟೀಲ್, ಡಾ.ಅವಿನಾಶ ಜಾಧವ್, ಮಾಜಿ ಶಾಸಕ ಅಮರನಾಥ ಪಾಟೀಲ್, ಶರಣು ಮೋದಿ, ಅರುಣಕುಮಾರ ಪಾಟೀಲ್, ಅಂಬಾರಾಯ ಅಷ್ಟಗಿ, ಹರ್ಷಾನಂದ ಗುತ್ತೇದಾರ್ ಇತರರಿದ್ದರು.
ಜಿಡಗಾ ನವಕಲ್ಯಾಣ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಶ್ರೀ ಡಾ.ಮುರುಘರಾಜೇಂದ್ರ ಮಹಾಸ್ವಾಮೀಜಿ, ಶ್ರೀ ವೀರಮಹಾಂತ ಶಿವಾಚಾರ್ಯ, ಸಚಿವ ಈಶ್ವರ ಖಂಡ್ರೆ, ಶಾಸಕರಾದ ಬಿ.ಆರ್.ಪಾಟೀಲ್, ಡಾ.ಅವಿನಾಶ ಜಾಧವ್, ಮಾಜಿ ಶಾಸಕ ಅಮರನಾಥ ಪಾಟೀಲ್, ಶರಣು ಮೋದಿ, ಅರುಣಕುಮಾರ ಪಾಟೀಲ್, ಅಂಬಾರಾಯ ಅಷ್ಟಗಿ, ಹರ್ಷಾನಂದ ಗುತ್ತೇದಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅರಣ್ಯ ಸಚಿವ ಈಶ್ವರ ಖಂಡ್ರೆ ಬಣ್ಣನೆ
  • ನವಕಲ್ಯಾಣ ಮಠದಲ್ಲಿ ೪೧ನೇ ಗುರುವಂದನೆ ಸಂಭ್ರಮ
  • ಡಾ.ಮುರುಘರಾಜೇಂದ್ರ ಶ್ರೀಗಳನ್ನು ಸತ್ಕರಿಸಿ ಆಶೀರ್ವಾದ ಪಡೆದ ಭಕ್ತಜನ
ಜಿಡಗಾದಲ್ಲಿ ಡಾ.ಮುರುಘರಾಜೇಂದ್ರ ಶ್ರೀಗಳಿಗೆ ಮಾಲಾರ್ಪಣೆ ಮಾಡಿ ಆಶೀರ್ವದಿಸಿದ ಗಜರಾಜ.
ಆಳಂದ: ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ದೇವರ ಸ್ಥಾನವಿದೆ. ಜಿಡಗಾದ ಶ್ರೀ ಸಿದ್ಧರಾಮೇಶ್ವರ ಶಿವಯೋಗಿಗಳು ಮಹಾನ್ ಪವಾಡ ಪುರುಷರಾಗಿದ್ದು, ತಮ್ಮ ತಪೋಶಕ್ತಿಯಿಂದ ಅಸಂಖ್ಯ ಭಕ್ತರ ಕಷ್ಟಗಳನ್ನು ದೂರ ಮಾಡಿದ್ದರು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಬಣ್ಣಿಸಿದರು.
ಜಿಡಗಾ ನವಕಲ್ಯಾಣ ಮಠದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮುಗಳಖೋಡ-ಜಿಡಗಾ ಮಠದ ಪೀಠಾಧಿಪತಿ ಶ್ರೀ ಡಾ.ಮುರುಘರಾಜೇಂದ್ರ ಮಹಾಸ್ವಾಮೀಜಿ ೪೧ನೇ ಗುರುವಂದನೆ ಮಹೋತ್ಸವ ಉದ್ಘಾಟಿಸಿದ ಅವರು, ಡಾ.ಮುರುಘರಾಜೇಂದ್ರ ಶ್ರೀಗಳ ಗುರುವಂದನೆ ಪವಿತ್ರ ಕಾರ್ಯಕ್ರಮ. ಧರ್ಮ ಕಾರ್ಯದ ಜತೆಗೆ ಸಮಾಜದ ಅಭ್ಯುದಯಕ್ಕೂ ಪೂಜ್ಯರು ಶ್ರಮಿಸುತ್ತಿದ್ದಾರೆ ಎಂದರು.
ಶಾಸಕ ಬಿ.ಆರ್. ಪಾಟೀಲ್ ಮಾತನಾಡಿ, ೩೦೦ ಮಕ್ಕಳಿಗೆ ಉಚಿತ ಶಿಕ್ಷಣ ಸುಲಭದ ಕೆಲಸವಲ್ಲ, ಇದು ಮಠ-ಮಂದಿರಗಳಿAದ ಮಾತ್ರ ಆಗುವ ಕಾರ್ಯ. ಈ ಹಿಂದೆ ನಮ್ಮ ಭಾಗದ ಅನೇಕರು ಶಿಕ್ಷಣಕ್ಕಾಗಿ ತುಮಕೂರು ಸಿದ್ಧಗಂಗಾ ಇತರ ಮಠಗಳಿಗೆ ಹೋಗುತ್ತಿದ್ದರು. ಇದೀಗ ಅದೇ ಮಾದರಿಯಲ್ಲಿ ಬಡ ಮಕ್ಕಳಿಗೆ ಉಚಿತ ಅಕ್ಷರ ದಾಸೋಹವನ್ನು ಜಿಡಗಾದಲ್ಲಿ ಪೂಜ್ಯರು ಮಾಡುತ್ತಿದ್ದು, ನಾನು ಸಂಪೂರ್ಣ ಸಹಕಾರ ನೀಡುವೆ. ಶ್ರೀಗಳ ಸಂಕಲ್ಪದAತೆ ರೈತರ ಅನುಕೂಲಕ್ಕಾಗಿ ಕೆರೆ ನಿರ್ಮಾಣ ಕಾಮಗಾರಿ ಶೀಘ್ರ ಕ್ರಿಯಾರೂಪಕ್ಕೆ ತರತ್ತೇನೆ ಎಂದು ಭರವಸೆ ನೀಡಿದರು.
ಜರ್ಮನಿಯ ಸ್ವಾಮಿನೀ ವಿಶ್ವಮೋಹಿನಿ ತಾಯಿ ಮಾತನಾಡಿ, ಅಧ್ಯಾತ್ಮ ತಾಣ ಜಿಡಗಾ ಮಠದಲ್ಲಿ ಪವಾಡ ಪುರುಷ ಸಿದ್ಧರಾಮೇಶ್ವರ ಶ್ರೀಗಳ ದರ್ಶನ ಪಡೆದರೆ ಸಕಲ ಪಾಪಗಳು ದೂರವಾಗುತ್ತವೆ. ಶ್ರೀ ಡಾ.ಮುರುಘರಾಜೇಂದ್ರ ಸ್ವಾಮೀಜಿ ಭಕ್ತರಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ ಎಂದರು.
ಪAಚದಶ ಜುನಾ ಅಖಾಡದ ಪೀಠಾಧೀಶ್ವರ ಶ್ರೀ ಸಹದೇವಾನಂದಗಿರಿ ಮಹಾಂತ ಗುರೂಜಿ ಮಾತನಾಡಿ, ಮಹಾ ಕುಂಭಮೇಳಕ್ಕೆ ಶ್ರೀಗಳು ಆಗಮಿಸಿ ಗಂಗೆಯಲ್ಲಿ ಮುಳುಗಿ ಪಾವನರಾಗಿದ್ದಾರೆ. ಅವರು ತಮಗಾಗಿ ಏನನ್ನೂ ಕೇಳದೆ ರಾಷ್ಟç ಮತ್ತು ರಾಜ್ಯದ ಜನರ ಸುಭಿಕ್ಷೆಗಾಗಿ ಪ್ರಾರ್ಥಿಸಿದ್ದಾರೆ. ನಾಸಿಕ್‌ನಲ್ಲಿ ನಡೆಯುವ ಕುಂಭ ಮೇಳದಲ್ಲಿ ಕರ್ನಾಟಕದಿಂದ ಬರುವ ಭಕ್ತರಿಗೆ ಜಿಡಗಾ ಮಠದಿಂದ ವ್ಯವಸ್ಥೆ ಕಲ್ಪಿಸಲು ಸಂಕಲ್ಪ ಮಾಡಿದ್ದು, ಸಾಕಾರಗೊಳ್ಳಲಿದೆ ಎಂದು ಆಶಿಸಿದರು.
ರೈತ ನಾಯಕ ಶಶಿಕಾಂತ ಗುರೂಜಿ ಮಾತನಾಡಿ, ಕಳೆದ ಸಲ ಮುಗಳಖೋಡದಲ್ಲಿ ನಡೆದಿದ್ದ ಶ್ರೀಗಳ ಜನ್ಮದಿನೋತ್ಸವದಲ್ಲಿ ೩೦ ಸಾವಿರ ರೈತರಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ್ದರು. ಬಳಿಕ ಬೆಳಗಾವಿಯಲ್ಲಿ ಕಬ್ಬಿಗೆ ಸೂಕ್ತ ದರ ನೀಡುವಂತೆ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಬೆಂಬಲ ನೀಡಿದ್ದರು. ನಂತರ ಸರ್ಕಾರ ಟನ್ ಕಬ್ಬಿಗೆ ೩೩೦೦ ರೂ. ದರ ಘೋಷಿಸಿತು. ಶ್ರೀಗಳು ಸದಾ ರೈತಪರ ಚಿಂತೆನ ಮಾಡುತ್ತಾರೆ ಎಂದು ಶ್ಲಾಘಿಸಿದರು.
ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣ, ಕುಷ್ಟಗಿ ಶಾಸಕ ದೊಡ್ಡಪ್ಪಗೌಡ ಮಾತನಾಡಿದರು. ಶ್ರೀ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ್, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಅಮರನಾಥ ಪಾಟೀಲ್, ರೈತ ಸಂಘದ ಅಧ್ಯಕ್ಷ ಚುನ್ನಪ್ಪ ಪೂಜಾರಿ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣು ಮೋದಿ, ವೀರಶೈವ ಸಮಾಜ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ್, ಪ್ರಮುಖರಾದ ಡಾ.ಸಂಗ್ರಾಮ ಬಿರಾದಾರ, ಮುರಳೀಧರ ಎಕಲಾಕರ, ಅಂಬಾರಾಯ ಅಷ್ಟಗಿ, ಪಂಡಿತ ಚಿದ್ರಿ, ಅಶೋಕ ಗುತ್ತೇದಾರ್, ಮಲ್ಲಿಕಾರ್ಜುನ, ಸಿದ್ಧಲಿಂಗ ರೆಡ್ಡಿ, ಅಶೋಕ ದಳವಾಯಿ, ಹರ್ಷಾನಂದ ಗುತ್ತೇದಾರ್, ದೀಪಕ ಆರ್.ಕೆ., ಗುರುಶರಣ ಪಾಟೀಲ್, ಸಿದ್ಧರಾಮ ಪ್ಯಾಟಿ, ಆನಂದ ದೇಶಮುಖ, ಮಲ್ಲಪ್ಪ ಹತ್ತರಕಿ, ಮಹೇಶ ಗೌಳಿ ಹಾಗೂ ಬೆಳಗಾವಿ, ಬೀದರ್, ಸೊಲ್ಲಾಪುರ, ಕಲಬುರಗಿ ಸೇರಿ ವಿವಿಧೆಡೆಯ ಅಸಂಖ್ಯ ಭಕ್ತರು ಭಾಗವಹಿಸಿದ್ದರು.
ಬೆಳಗ್ಗೆ ಶ್ರೀ ಸಿದ್ಧರಾಮ ಶಿವಯೋಗಿಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಗಜರಾಜ ಶ್ರೀಗಳಿಗೆ ಪುಷ್ಪಾರ್ಚನೆ ಮಾಡಿ ಆಶೀರ್ವದಿಸಿದ. ಚಿನ್ಮಯಗಿರಿಯ ಶ್ರೀ ವೀರಮಹಾಂತ ಶಿವಾಚಾರ್ಯ ಸ್ವಾಗತಿಸಿದರು. ಅಮೂಲ್ಯ ಹಿರೇಮಠ ನಿರೂಪಣೆ ಮಾಡಿದರು. ಸೋಮು ಹೊರಟ್ಟಿ ವಂದಿಸಿದರು.

ಬಸವ ತತ್ವದಡಿ ಸಾಗುತ್ತಿದೆ ಶ್ರೀಮಠ

ಇಂದಿನ ದಿನಗಳಲ್ಲಿ ಜಾತಿ ವ್ಯವಸ್ಥೆಯಿಂದ ಸಮಾಜ ಕಲುಷಿತವಾಗುತ್ತಿದೆ. ನಮ್ಮ ಗುರುಗಳಾದ ಶ್ರೀ ಸಿದ್ಧರಾಮ ಶಿವಯೋಗಿಗಳು ವಿಶ್ವಗುರು ಬಸವಣ್ಣನವರ ತತ್ವದಡಿ ಜಾತಿ, ಪಂಥ ಎನ್ನದೆ ಸರ್ವರನ್ನು ಸಮಾನತೆಯಿಂದ ಕಾಣುತ್ತಿದ್ದರು. ಆ ಪರಂಪರೆಯನ್ನು ಮುಂದುವರಿಸಿಕೊAಡು ಬರುತ್ತಿರುವುದಾಗಿ ಶ್ರೀ ಡಾ.ಮುರುಘರಾಜೇಂದ್ರ ಮಹಾಸ್ವಾಮೀಜಿ ಹೇಳಿದರು. ಈಗಾಗಲೇ ಶಾಸಕ ಬಿ.ಆರ್.ಪಾಟೀಲ್ ಜಿಡಗಾದಲ್ಲಿ ಕೆರೆ ನಿರ್ಮಾಣಕ್ಕಾಗಿ ಶ್ರಮಿಸುವುದಾಗಿ ಮಾತು ಕೊಟ್ಟಿದ್ದಾರೆ. ಈ ಕಾರ್ಯ ಮುಗಿದರೆ ಹಗಲು-ರಾತ್ರಿ ಕಷ್ಟ ಪಡುವ ಸಾವಿರಾರು ರೈತರ ಬಾಳು ಬಂಗಾರವಾಗಲಿದೆ. ಅಲ್ಲದೆ ೩೦೦ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿನಿಲಯ ಕಲ್ಪಿಸಿz್ದೆÃವೆ. ಮಠಕ್ಕೆ ಬರುವ ಭಕ್ತರು ಶಾಲು, ಹೂವು ತರದೆ ಮಕ್ಕಳಿಗಾಗಿ ಮುಷ್ಟಿ ಅಕ್ಕಿ ತಂದು ಕೊಟ್ಟರೆ ಮಹಾನ್ ಕಾರ್ಯಕ್ಕೆ ಅರ್ಥ ಬರುತ್ತದೆ. ಇನ್ನೂ ೪-೫ ವರ್ಷಗಳಲ್ಲಿ ೧೦ ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಸಾಧಕರಿಗೆ ಪ್ರಶಸ್ತಿ ಪ್ರದಾನ

ವಿವಿಧ ಕ್ಷೇತ್ರದ ಸಾಧಕರಾದ ಶಶಿಕಾಂತ ಗುರೂಜಿ, ಚುನ್ನಪ್ಪ ಪೂಜಾರಿ (ರೈತ ರತ್ನ ಪ್ರಶಸ್ತಿ), ಶಿರುದ್ರಯ್ಯ ಗೌಡಗಾಂವ್ (ಸ್ವರ ಶಾರದೆ ಪ್ರಶಸ್ತಿ), ಯಲ್ಲಾಲಿಂಗ ಝಳಕಿ, ವಿಶ್ವನಾಥ ಬಡಿಗೇರ (ಷಟಸ್ಥ ಆದರ್ಶ ಶಿಕ್ಷಕ ಪ್ರಶಸ್ತಿ) ಅವರಿಗೆ ಪುರಸ್ಕಾರ ನೀಡಿ ಸತ್ಕರಿಸಲಾಯಿತು.
"

ಜಿಡಗಾ, ಮುಗಳಖೋಡ ಮಠದ ಕೀರ್ತಿ ಕರ್ನಾಟಕ ಮಾತ್ರವಲ್ಲದೆ ರಾಷ್ಟç ಮತ್ತು ಅಂತಾರಾಷ್ಟಿçÃಯ ಮಟ್ಟದಲ್ಲಿ ಪಸರಿಸುವಂತಹ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ. ಸರಳ, ಸಜ್ಜನಿಕೆ ವ್ಯಕ್ತಿತ್ವ, ಮಾತೃತ್ವ ಭಾವದಿಂದ ಭಕ್ತರನ್ನು ಉದ್ಧರಿಸುತ್ತಿದ್ದಾರೆ. ಜಿಡಗಾದಲ್ಲಿ ಕೆರೆ ಇತರ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸಲು ಪ್ರಯತ್ನಿಸುವೆ.

| ಈಶ್ವರ ಖಂಡ್ರೆಅರಣ್ಯ ಸಚಿವ

ಜಿಡಗಾ-ಮುಗಳಖೋಡ ಮಠ ರೈತರಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿದೆ. ಹಲವು ವರ್ಷಗಳಿಂದ ಜಿಡಗಾದಲ್ಲಿ ಸುಮಾರು ೧೮೦ ಎಕರೆ ಪ್ರದೇಶದಲ್ಲಿ ಕರೆ ನಿರ್ಮಿಸುವ ಯೋಜನೆ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಸರ್ಕಾರದ ಗಮನಸೆಳೆಯಲು ಬೆಳಗಾವಿ ಅಧಿವೇಶನದಲ್ಲಿ ಶ್ರೀಗಳ ಸಮ್ಮುಖ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ಸಲ್ಲಿಸಲಾಗುವುದು.

| ಶಶಿಕಾಂತ ಗುರೂಜಿರೈತ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net