

ಪ್ರಮುಖ ಮುಖ್ಯಾಂಶಗಳು
| ಸಾಂಸ್ಕೃತಿಕ ಕಲರವ ನಿರ್ಮಾಣ ಉತ್ಸವದ ನಿಮಿತ್ತ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಇಡೀ ದಿನ ಸಾಂಸತಿಕ ಕಲರವ ನಡೆಯಿತು. ಬೆಳಗ್ಗೆ ವಿದ್ಯಾರ್ಥಿಗಳಿಂದ ಬೃಹತ್ ಮ್ಯಾರಾಥಾನ್ ಓಟ ನಡೆಯಿತು. ಮಾರ್ಗ ಮಧ್ಯೆ ಪ್ಲಾ$್ಯಷ್ ಮಾಬ್ ರೂಪಿಸಿ, ನೃತ್ಯ ಮಾಡಿ, ಸಂಭ್ರಮಿಸಲಾಯಿತು. ನಂತರ ಟೆಕ್ನೋ ವಿಸನ್ ಹ್ಯಾಕಾಥಾನ್ ಸೇರಿ ವಿವಿಧ ತಾಂತ್ರಿಕ ಸ್ಪರ್ಧೆಗಳು ನಡೆದವು. ಮಧ್ಯಾಹ್ನ ಡಿಜೆ ಸದ್ದಿನೊಂದಿಗೆ ಸಂಭ್ರಮ ನಡೆದರೆ. ರಾತ್ರಿ ವಿದ್ಯಾರ್ಥಿಗಳು, ಕಲಾವಿದರಿಂದ ಸಾಂಸತಿಕ ಕಲರವದ ಕಾರ್ಯಕ್ರಮಗಳು ಉತ್ಸವದ ಮೆರಗು ಹೆಚ್ಚಿಸಿದ್ದು, ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿ, ಸಂಭ್ರಮಿಸಿದರು. |
|---|