ಕಲಬುರಗಿಯಲ್ಲಿ ಬಸವಾಭಿಮಾನಿಗಳ ಬೃಹತ್​ ಸಮಾವೇಶ ಏ.19ಕ್ಕೆ

Basava jayanthi
Basava jayanthi
Published on

ಪ್ರಮುಖ ಮುಖ್ಯಾಂಶಗಳು

  • ಬಿ.ಆರ್​.ಪಾಟೀಲ್​, ಬಿ.ಜಿ.ಪಾಟೀಲ್, ಬಿ.ಜಿ ಪಾಟೀಲ್​​ ಮಾಹಿತಿ
  • ಏ.16ರಿಂದ 18ರವರೆಗೆ ಅನುಭಾವ
  • ಏ.20ರಂದು ಉತ್ಸವ, ಬೃಹತ್​ ಮೆರವಣಿಗೆ
ಕಲಬುರಗಿ: ವಿಶ್ವಗುರು ಬಸವಣ್ಣನವರ 893ನೇ ಜಯಂತ್ಯುತ್ಸವವನ್ನು ಅರ್ಥಪೂರ್ಣ ಮತ್ತು ಅದ್ದೂರಿಯಾಗಿ, ಸಮಾಜದ ಸಂಘ ಟನೆ ಬಲ ನೀಡಿ, ಸಮಾನತೆಯ ಸಂದೇಶ ಸಾರುವ ನಿಟ್ಟಿನಲ್ಲಿ ಆಚರಿಸುತ್ತಿದ್ದು, ಏ.19ರಂದು ಸಂಜೆ 5ಗಂಟೆಗೆ ನಗರದ ಶ್ರೀ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಬಸವಾಭಿಮಾನಿಗಳ ಬೃಹತ್​ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಸವ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ, ಶಾಸಕ ಬಿ.ಆರ್​.ಪಾಟೀಲ್​, ಸಮಿತಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್​ ಸದಸ್ಯ ಡಾ.ಬಿ.ಜಿ.ಪಾಟೀಲ್​ ಹೇಳಿದರು.
ಏ.16, 17, 18ರಂದು ಸಂಜೆ 6ಗಂಟೆಗೆ ಮೂರು ದಿನ ನಗರದ ಜಗತ್​ ವೃತ್ತದ ಬಸವೇಶ್ವರ ಮೂರ್ತಿಯ ಹಿಂದುಗಡೆ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೃಹತ್​ ಸಮಾವೇಶ: ಜಯಂತಿ ನಿಮಿತ್ತ ನಗರದ ಶ್ರೀ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಏ.19ರಂದು ಸಂಜೆ 6ಗಂಟೆಗೆ ಬಸವಾಭಿಮಾನಿಗಳ ಬೃಹತ್​ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಬೆಳಗಾವಿಯ ಹಂದಿಗುಂದದ ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಉದ್ಘಾಟಿಸಲಿದ್ದಾರೆ. ಶರಣ ಸಾಹಿತ್ಯ ಚಿಂತಕ ಶಂಕರ ದೇವನೂರ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.
ಸಮಾವೇಶದಲ್ಲಿ ಅರಣ್ಯ ಸಚಿವ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷರಾದ ಈಶ್ವರ ಖಂಡ್ರೆ ಅವರಿಗೆ ಅಭಿನಂದನೆ ಮತ್ತು ಶ್ರೀ ಶರಣಬಸವೇಶ್ವರ ಸಂಸ್ಥಾನದಿಂದ ರಾಷ್ಟ್ರಮಟ್ಟದ ದಾಸೋಹ ಜ್ಞಾನ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮಕ್ಕೆ ಮುನ್ನ ಕೇಂದ್ರೀಯ ವಿವಿಯ ಡಾ.ಜಯದೇವಿ ಜಂಗಮಶೆಟ್ಟಿ ಅವರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಶಾಸಕರಾದ ಬಿ.ಆರ್​.ಪಾಟೀಲ್​, ಡಾ.ಬಿ.ಜಿ.ಪಾಟೀಲ್​ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಸಚಿವರಾದ ಪ್ರಿಯಾಂಕ್​ ಖರ್ಗೆ, ಶರಣಬಸಪ್ಪಗೌಡ ದರ್ಶನಾಪುರ, ಡಾ.ಶರಣಪ್ರಕಾಶ ಪಾಟೀಲ್​, ಕೆಕೆಆರ್​ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್​ ಸೇರಿದಂತೆ ಕಲಬುರಗಿ, ಯಾದಗಿರಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಮಾಜಿ ಶಾಸಕರು, ಸಚಿವರು, ವಿವಿಧ ನಿಗಮಗಳ ಅಧ್ಯಕ್ಷರುಗಳು, ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಏ.20ರಂದು ಬೆಳಗ್ಗೆ 8ಕ್ಕೆ ಜಿಲ್ಲಾಡಳಿತದ ಸಹಯೋಗದಲ್ಲಿ ಜಗತ್​ ವೃತ್ತದ ಬಸವೇಶ್ವರ ಮೂರ್ತಿ ಬಳಿ ಬಸವ ಜಯಂತ್ಯುತ್ಸವ ಹಮ್ಮಿಕೊಂಡಿದ್ದು, ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಷಟಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ. ಪ್ರೊ.ಟಿ.ಆರ್​.ಚಂದ್ರಶೇಖರ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಂಜೆ 5ಗಂಟೆಗೆ ನಗರದ ನಗರೇಶ್ವರ ಶಾಲೆಯಿಂದ ಜಗತ್​ ವೃತ್ತದವರೆಗೆ ಬೃಹತ್​ ಮೆರವಣಿಗೆ ಹಮ್ಮಿಕೊಂಡಿದ್ದು, ವಿಶ್ವಗುರು ಬಸವಣ್ಣ ಹಾಗೂ ಕಾಯಕ ಶರಣರ ಭಾವಚಿತ್ರಗಳ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಗೆ ಶಾಸಕ ಶಶೀಲ ನಮೋಶಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಜಗತ್​ ವೇದಿಕೆಯಲ್ಲಿ ಸಂಜೆ 7ಗಂಟೆಗೆ ವಚನ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ್​, ಮಾಜಿ ಶಾಸಕರಾದ ಅಮರನಾಥ ಪಾಟೀಲ್​, ದೊಡ್ಡಪ್ಪಗೌಡ ಪಾಟೀಲ್​ ನರಿಬೋಳ, ಡಾ.ಭೀಮಾಶಂಕರ ಬಿಲಗುಂದಿ, ಆರ್​.ಕೆ.ಹುಡಗಿ, ಆರ್​.ಜಿ.ಶೆಟಗಾರ, ರಾಜಶೇಖರ ಸಿರಿ, ಶರಣಬಸಪ್ಪ ಭುಸನೂರ, ರಾಜಶೇಖರ ಯಂಕಂಚಿ, ರಮೇಶ ಮರಗೋಳ, ಅಶೋಕ ೂಳಿ, ಸೋಮಶೇಖರ ಹಿರೇಮಠ, ಶಿವಾನಂದ ದ್ಯಾಮಗೊಂಡ, ರುದ್ರಮನಿ ಮಠಪತಿ, ಆನಂದ ಲೇಂಗಟಿ, ಚನ್ನಪ್ಪ ದಿಗ್ಗಾವಿ ಇತರರಿದ್ದರು.
ಪ್ರಚಾರಕ್ಕೆ ಜಿಲ್ಲಾದ್ಯಂತ ಪ್ರವಾಸ
ಬಸವಾಭಿಮಾನಿಗಳ ಬೃಹತ್​ ಸಮಾವೇಶ, ಪ್ರವಚನಕ್ಕೆ ಆಹ್ವಾನಿಸಲು, ಸಮಾಜದ ಸಂಟನೆಗೆ ದೃಷ್ಟಿಯಿಂದ ಏ.10 ಜಿಲ್ಲಾದ್ಯಂತ ಜಯಂತಿ ಸಮಿತಿಯಿಂದ ಪ್ರವಾಸ ಮಾಡಲಾಗುವುದು. ಏ.10ರಂದು ಬೆಳಗ್ಗೆ 11ಕ್ಕೆ ಅಜಲಪುರದಲ್ಲಿ, ಮಧ್ಯಾಹ್ನ 3ಕ್ಕೆ ಆಳಂದ, ಏ.11ರಂದು 11ಕ್ಕೆ ಕಮಲಾಪುರ, 6ಗಂಟೆಗೆ ಜೇವರ್ಗಿ, 12ರಂದು ಬೆಳಗ್ಗೆ 11ಕ್ಕೆ ಚಿತ್ತಾಪುರ, ಮಧ್ಯಾಹ್ನ 3ಕ್ಕೆ ಸೇಡಂ, 13ರಂದು ಬೆಳಗ್ಗೆ 10ಕ್ಕೆ ಕಾಳಗಿ, ಮಧ್ಯಾಹ್ನ 2ಗಂಟೆಗೆ ಚಿಂಚೋಳಿಯಲ್ಲಿ ಸಭೆಗಳನ್ನು ನಡೆಸಿ, ಪ್ರಚಾರ ಮಾಡಲಾಗುವುದು. ಈ ಮಧ್ಯೆ ಶಹಾಬಾದ್​, ವಾಡಿ ಕಲಬುರಗಿ ನಗರದ ವಿವಿಧ ಬಡಾವಣೆಗಳಲ್ಲಿ ಸಭೆಗಳನ್ನು ನಡೆಸಿ, ಜನರನ್ನು ಸಮಾವೇಶಕ್ಕೆ ಆಹ್ವಾನಿಸಲಾಗುವುದು ಎಂದು ತಿಳಿಸಿದರು.
50 ಸಾವಿರ ವಚನ ಪುಸ್ತಕ ವಿತರಣೆ

ಕಾಯಕ, ದಾಸೋಹ, ಸಮಾನತೆಯನ್ನು ಸಾರಿದ ಬಸವ ಜಯಂತಿಯನ್ನು ಬಸವ ತತ್ವ ಪ್ರಸಾರಕ್ಕೆ ಪೂರಕವಾಗಿ ಆಚರಿಸುತ್ತಿದ್ದು, ನಿರಂತರ ಸಭೆಗಳನ್ನು ಮಾಡಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅರ್ಥಪೂರ್ಣ, ಶಿಸ್ತುಬದ್ಧ, ಸಮಾಜಕ್ಕೆ ಸಂದೇಶ ನೀಡುವ ಕಾರ್ಯಕ್ರಮವನ್ನು ಬದ್ಧತೆಯಿಂದ ವೀರಶೈವ, ಲಿಂಗಾಯತ ಸಮಾಜದ ಎಲ್ಲ ಒಳಪಂಗಡ, ಕಾಯಕ ಸಮಾಜಗಳನ್ನು ಒಳಗೊಂಡು ಜಯಂತ್ಯುತ್ಸವ ಆಚರಿಸಲಾಗುತ್ತಿದೆ.

ಮೂರು ದಿನ ಉಪನ್ಯಾಸಏ.16ರಂದು ಸಂಜೆ 6ಕ್ಕೆ ಪ್ರಭುಶ್ರೀ ತಾಯಿ ಸಾನ್ನಿಧ್ಯದಲ್ಲಿ ಮಾತೋಶ್ರೀ ಡಾ.ದಾಾಯಿಣಿ ಅಪ್ಪ ಉಪನ್ಯಾಸವನ್ನು ಉದ್ಘಾಟಿಸಲಿದ್ದು, ಗಂಗಾಂಬಿಕಾ ಭದ್ರಾವತಿ ಅವರು ಬಸವಣ್ಣನವರ ಸಮಗ್ರ ಕ್ರಾಂತಿ ಉಪನ್ಯಾಸ ನೀಡಲಿದ್ದಾರೆ. ಏ.17ರಂದು ಶ್ರೀ ಚರಲಿಂಗ ಸ್ವಾಮೀಜಿ, ರಾವೂರಿನ ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಡಾ.ಸೋಮನಾಥ ಯಾಳವಾರ ಅವರು ಬಸವ ತತ್ವದ ಪ್ರಸ್ತುತತೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಏ.18ರಂದು ಶ್ರೀ ಶಾಂತವೀರ ಮುರುರಾಜೇಂದ್ರ ಸ್ವಾಮೀಜಿ, ಶ್ರೀ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಗುರುಲಿಂಗಪ್ಪ ದಬಾಲೆ ಅವರು ಬಸವಣ್ಣನವರ ಬಹುಮುಖ ವ್ಯಕ್ತಿತ್ವ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net