ಕಲಬುರಗಿ: ಗೃಹಿಣಿಯೊಬ್ಬರ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಟನೆ ತಾಲೂಕಿನ ಮೇಳಕುಂದಾ ಕೆ ಗ್ರಾಮದಲ್ಲಿ ನಡೆದಿದೆ. ಲಕ್ಷಿ$್ಮ ಕುಂಬಾರ (30) ಮೃತರು. ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಮಾಳಚಾಪುರದ ಲಕ್ಷಿ$್ಮ ಕುಂಬಾರ 2017ರಲ್ಲಿ ಮೇಳಕುಂದಾ ಕೆ ಗ್ರಾಮದ ಅಂಬಣ್ಣ ಕುಂಬಾರನನ್ನು ಮದುವೆ ಆಗಿದ್ದರು. ಅಂಬಣ್ಣನಿಗೆ ಮೊದಲನೇ ಮದುವೆ ಆಗಿದ್ದು, ಕೋರ್ಟ್ನಲ್ಲಿ ಕೇಸ್ ನಡೆದಿರುತ್ತದೆ. ಈ ಮಧ್ಯೆ ಮೊದಲನೇ ಹೆಂಡತಿ ಮನೆಗೆ ವಾಪಸ್ ಬಂದಿದ್ದು, ಅಂಬಣ್ಣನ ಮನೆಯವರು ಕಿರುಕುಳ ನೀಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಲಕ್ಷಿ$್ಮ ತಂದೆ ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.