ಅಧಿಕಾರಿ ಸಿಬ್ಬಂದಿಗೆ ಹೆಲ್ತ್​ಕಾರ್ಡ್​

ಕಲಬುರಗಿ ಜೆಸ್ಕಾಂ ನಿಗಮ ಕಚೇರಿಯಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಪ್ರವಿಣ್​ ಪಾಟೀಲ್​ ಹರವಾಳ್​ ಮಾತನಾಡಿದರು. ಎಂಡಿ ಕೃಷ್ಣ ಬಾಜಪೇಯಿ, ತಾಂತ್ರಿಕ ನಿರ್ದೇಶಕ ಚಂದ್ರಶೇಖರ್​ ಪಾಟೀಲ್​, ಪ್ರಧಾನ ವ್ಯವಸ್ಥಾಪಕಿ ಪಾರ್ವತಿ ಇತರರಿದ್ದರು.
ಕಲಬುರಗಿ ಜೆಸ್ಕಾಂ ನಿಗಮ ಕಚೇರಿಯಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಪ್ರವಿಣ್​ ಪಾಟೀಲ್​ ಹರವಾಳ್​ ಮಾತನಾಡಿದರು. ಎಂಡಿ ಕೃಷ್ಣ ಬಾಜಪೇಯಿ, ತಾಂತ್ರಿಕ ನಿರ್ದೇಶಕ ಚಂದ್ರಶೇಖರ್​ ಪಾಟೀಲ್​, ಪ್ರಧಾನ ವ್ಯವಸ್ಥಾಪಕಿ ಪಾರ್ವತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೆಸ್ಕಾಂ ಅಧ್ಯಕ್ಷ ಪ್ರವಿಣ್​ ಪಾಟೀಲ್​ ಹರವಾಳ್​ ಭರವಸೆ
  • ಪ್ರಧಾನ ಕಚೇರಿಯಲ್ಲಿ ಗಣರಾಜ್ಯೋತ್ಸವ
ಕಲಬುರಗಿ: ಜೆಸ್ಕಾಂ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗೆ ಮುಂದಿನ ತಿಂಗಳೊಳಗೆ ಸುಮಾರು 15 ರಿಂದ 35 ಲ ರೂ.ವರೆಗೆ ಉಚಿತ ವೈದ್ಯಕಿಯ ಚಿಕಿತ್ಸೆ ಪಡೆಯಲು ಹೆಲ್ತ್​ ಕಾರ್ಡ್​ ನೀಡುವುದಾಗಿ ಜೆಸ್ಕಾಂ ಅಧ್ಯ ಪ್ರವಿಣ್​ ಪಾಟೀಲ್​ ಹಾರವಾಳ ಭರವಸೆ ನೀಡಿದರು.
ಗುಲ್ಬರ್ರ್ಗ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಗಮ ಕಚೇರಿಯಲ್ಲಿ 77ನೇ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೆರಿಸಿ ಮಾತನಾಡಿದ ಅವರು, ಜೆಸ್ಕಾಂ ಸಿಬ್ಬಂದಿಯ ಅರೋಗ್ಯ ಸುರತೆ ಮತ್ತು ಅವರಿಗೆ ಸುಲಭವಾಗಿ ಚಿಕಿತ್ಸೆ ಒದಗಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಗ್ರಾಹಕರ ಅನುಕೂಲಕ್ಕಾಗಿ, ಸಹಾಯವಾಣಿ ಕೇಂದ್ರದಲ್ಲಿ ಹೆಚ್ಚಿನ 50 ಸಿಬ್ಬಂದಿ ಹಾಗೂ ವಾಟ್ಸ್​ಆ್ಯಪ್​ ಮೂಲಕ ಪೋಟೋ, ವಿಡಿಯೋಗಳನ್ನು ಹಂಚಿಕೊಂಡು ನಿಮ್ಮ ದೂರುಗಳನ್ನು ದಾಖಲಿಸಲು ತಂತ್ರಾಂಶ ಅಭಿವೃದ್ಧಿ ಮಾಡುತ್ತಿದ್ದು, ಆದಷ್ಟು ಬೇಗ ಜಾರಿಗೆ ತರಲಾಗುವುದು. ಜತೆಗೆ ಜೆಸ್ಕಾಂ ಮಿತ್ರ ಆ್ಯಪ್​ನಲ್ಲಿರುವ ತಾಂತ್ರಿಕ ದೋಷ ಸರಿಪಡಿಸಿ ಅಪ್​ಡೇಟ್​ ಮಾಡಲಾಗುವುದು ಎಂದು ಹೇಳಿದರು.
ಜೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಮಾತನಾಡಿ, ಗ್ರಾಹಕರಿಗೆ ನಿರಂತರ, ಸುರತ ಮತ್ತು ಗುಣಮಟ್ಟದ ವಿದ್ಯುತ್​ ಪೂರೈಕೆ ನಮ್ಮ ಮೂಲ ಗುರಿ. ಕಳೆದ ವರ್ಷದಲ್ಲಿ ಸಂಸ್ಥೆಯು, ವಿದ್ಯುತ್​ ವಿತರಣಾ ವ್ಯವಸ್ಥೆಯ ಸುಧಾರಣೆ, ಗ್ರಾಹಕ ಸೇವೆಗಳಲ್ಲಿ ಡಿಜಿಟಲೀಕರಣ, ವಿದ್ಯುತ್​ ಸುರತಾ ಜಾಗೃತಿ ಕಾರ್ಯಕ್ರಮ, ರೈತರು ಮತ್ತು ಗೃಹ ಬಳಕೆದಾರರಿಗೆ ಉಪಯುಕ್ತ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಇವುಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದು ಹೇಳಿದರು.
ತಾಂತ್ರಿಕ ನಿರ್ದೇಶಕ ಚಂದ್ರಶೇಖರ್​ ಪಾಟೀಲ್​, ಪ್ರಧಾನ ವ್ಯವಸ್ಥಾಪಕಿ ಪಾರ್ವತಿ, ಮುಖ್ಯ ಅಭಿಯಂತರ ಸುವರ್ಣ ದಡೆದ, ಎಂಐಎಸ್​ ವಿಭಾಗದ ಅಧೀಕ ಅಭಿಯಂತರ ಮುಮ್ತಾಜ್​ ಹಾಗೂ ಜೆಸ್ಕಾಂನ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.
"

ಜೆಸ್ಕಾಂ, ವಿದ್ಯುತ್​ ನಷ್ಟ ಕಡಿತ, ನವೀಕರಿಸಬಹುದಾದ ಇಂಧನ ಬಳಕೆಯ ವಿಸ್ತರಣೆ, ತಂತ್ರಾನ ಆಧಾರಿತ ಸೇವೆಗಳ ಅಭಿವೃದ್ಧಿ, ಗ್ರಾಹಕರ ತೃಪ್ತಿಗೆ ಹೆಚ್ಚಿನ ಆದ್ಯತೆಗೆ ಕೇಂದ್ರೀಕರಿಸಿ ಕೆಲಸ ಮಾಡಲಿದೆ. ಈ ಎಲ್ಲಾ ಯಶಸ್ಸಿನ ಹಿಂದಿನ ಶಕ್ತಿಯಾಗಿರುವ ನಮ್ಮ ಸಿಬ್ಬಂದಿ ವರ್ಗದ ಸೇವಾ ಮನೋಭಾವ, ಶ್ರಮ ಮತ್ತು ಬದ್ಧತೆಗೆ ಅಭಿನಂದನೆ.

ಕೃಷ್ಣ ಬಾಜಪೇಯಿ,

ಎಂಡಿ, ಜೆಸ್ಕಾಂ ಕಲಬುರಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net