ಸಾರಿಗೆ ಬಸ್​ಗಳ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಚಾಲಕ ಸಾವು

ksrtc bus accident
ksrtc bus accident
Published on

ಕಲಬುರಗಿ: ಎರಡು ಕೆಎಸ್​ಆರ್​ಟಿಸಿ ಬಸ್​ಗಳು ಮುಖಾಮುಖಿ ಹಾಗೂ ಬಸ್​ಗೆ ಹಿಂಬದಿಯಿಂದ ಕಾರ್​ ಗುದ್ದಿರುವ ಭೀಕರ ಸರಣಿ ಅಪಘಾತದಲ್ಲಿ ಬಸ್​ ಚಾಲಕ ಸ್ಥಳದಲ್ಲೆ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿರುವ ಟನೆ ಕಮಲಾಪುರ ತಾಲೂಕಿನ ಶನಿವಾರ ರಾತ್ರಿ ನಡೆದಿದೆ.

ಕಲಬುರಗಿಯಿಂದ ಬೀದರ್​ಗೆ ಹೊರಟಿದ್ದ ಸಾರಿಗೆ ಬಸ್​ ಹಾಗೂ ಬೀದರ್​ನಿಂದ ದಾವಣಗೆರೆಗೆ (ಕಲಬುರಗಿ)ಯತ್ತ ಹೊರಟ್ಟಿದ್ದ ನಾನ್​ ಎಸಿ ಸ್ಲಿಪರ್​ ಬಸ್​ಗೆ ಮಧ್ಯೆ ಡೊಂಗರಗಾಂವ್​ ಬಳಿ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬಸ್​ಗಳ ಹಿಂಬದಿಯಲ್ಲಿದ್ದ ಕಾರು ಸಹ ನಿಯಂತ್ರಣ ತಪ್ಪಿ ಬಸ್​ಗೆ ಡಿಕ್ಕ ಹೊಡೆದಿದ್ದು, ಸರಣಿ ಅಪಘಾತ ಸಂಭವಿಸಿದೆ.
ಕೆಎಸ್​ಆರ್​ಟಿಸಿ ಬಸ್​ ಚಾಲಕ ಸ್ಥಳದಲ್ಲೆ ತುಕಾರಾಮ್​(46) ಸ್ಥಳದಲ್ಲಿ ಮೃತಪಟ್ಟಿದ್ದು, ಎರಡೂ ಬಸ್​ಗಳಲ್ಲಿದ್ದ ಪ್ರಯಾಣಿಕರು ಹಾಗೂ ಕಾರಿನಲ್ಲಿದ್ದವರು ಸೇರಿ 10ಕ್ಕೂ ಹೆಚ್ಚು ಜನರಿಗೆ ಗಾಯಗಳಾದ ಮಾಹಿತಿ ಇದೆ. ಗಾಯಾಳುಗಳನ್ನು ತಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕಮಲಾಪುರ ಪೊಲೀಸ್​ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net