ಮಹಾದೇವಪ್ಪಗೆ ಸಚಿವ ಸ್ಥಾನ ನೀಡಿ

dr hc mahadevappa
dr hc mahadevappa
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಡಿ.ಜಿ.ಸಾಗರ ಮನವಿ
  • 16ರಂದು ರಾಜ್ಯಾದ್ಯಂತ ಪ್ರತಿಭಟನೆ
ಕಲಬುರಗಿ: ಶಾಸಕ ಡಾ.ಎಚ್​.ಸಿ.ಮಹಾದೇವಪ್ಪಗೆ ಸಚಿವ ಸ್ಥಾನ ನೀಡಬೇಕು, ನಿಗಮ ಮಂಡಳಿಗಳಲ್ಲಿ ಮತ್ತು ವಿಧಾನ ಪರಿಷತ್​ ಸ್ಥಾನಗಳಲ್ಲಿ ದಲಿತರಿಗೆ, ಹೋರಾಟಗಾರಿಗೆ ಸೂಕ್ತ ಸ್ಥಾನ ಕಲ್ಪಿಸಬೇಕು ಎಂದು ಒತ್ತಾಯಿಸಿ ಜೂ.16ರಂದು ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್​ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ದಲಿತ ಸಂರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ ತಿಳಿಸಿದರು.
ರಾಜಕಾರಣದಲ್ಲಿ ರಾಜಕೀಯ ಬದ್ಧತೆ, ಶಿಸ್ತು, ತಾಳ್ಮೆಯಿಂದ ದಲಿತ- ಹಿಂದುಳಿದ ಅಲ್ಪಸಂಖ್ಯಾತರ ಹಿತವನ್ನು ಶಾಸಕ ಎಚ್​.ಸಿ.ಮಹದೇವಪ್ಪ ಕಾಪಾಡಿದ್ದಾರೆ. ಮೈಸೂರಿನ ಪ್ರಮುಖ ಸ್ಥಳಗಳಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ಭವನ ನಿರ್ಮಿಸಲು ಸ್ಥಳ ಕಲ್ಪಿಸಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಲಿತರ ಮೇಲಿನ ದೌರ್ಜನ್ಯ ಎಸಗಿದ ಆರೋಪಿಗಳಿಗೆ ಕೋರ್ಟ್​ಗಳಲ್ಲಿ ಶೇ.10 ಶಿಕ್ಷೆ ಆಗುತ್ತಿಲ್ಲ. ಇದನ್ನು ಸಿಎಂ ಗಮನಕ್ಕೆ ತಂದು, ದಲಿತರ ಮೇಲೆ ದೌರ್ಜನ್ಯ ಎಸಗಿದವರಿಗೆ ಶಿೆ ಆಗುವಂತೆ ನಾಗರೀಕ ಹಕ್ಕು ಸಮಾಚಾರಣ ಜಾರಿ ನಿರ್ದೇಶನಾಲಯದಿಂದ ಪ್ರತ್ಯೇಕ ಪೊಲೀಸ್​ ಠಾಣೆ ಜಿಲ್ಲೆಗೊಂದರಲ್ಲಿ ಮಂಜೂರು ಮಾಡಿಸಲು ಡಾ.ಎಚ್​.ಸಿ.ಮಹಾದೇವಪ್ಪ ಶ್ರಮಿಸಿದ್ದಾರೆ. ಅವರಿಗೆ ಮೊದಲನೇ ಹಂತದಲ್ಲೇ ಸಚಿವ ಸ್ಥಾನ ನೀಡಬೇಕಾಗಿತ್ತು. ಇನ್ನಾದರೂ ಎಚ್ಚೆತ್ತು ಸಚಿವ ಸ್ಥಾನ ನೀಡಬೇಕು ಎಂದರು.
ಪ್ರಮುಖರಾದ ಬಿ.ಸಿ.ವಾಲಿ, ಸುರೇಶ ಹಾದಿಮನಿ, ಎಸ್​.ಪಿ.ಸುಳ್ಳದ, ಉಮೇಶ ನರೋಣಾ, ಎಚ್​.ಶಂಕರ ಇತರರಿದ್ದರು.
ಸಿಎಂ ಡಿ.ಕೆ.ಶಿವಕುಮಾರ ಸರ್ಕಾರದಲ್ಲಿ ಡಾ.ಜಿ.ಪರಮೇಶ್ವರಗೆ ಉಪ ಮುಖ್ಯಮಂತ್ರಿ, ಕಂದಾಯ ಖಾತೆ ಹಾಗೂ ಯುವ ನಾಯಕ ಪ್ರಿಯಾಂಕ್​ ರ್ಖಗೆಗೆ ಗೃಹ ಖಾತೆ, ಪ್ರಮುಖ ಖಾತೆಗಳನ್ನು ದಲಿತರಿಗೆ ನೀಡಿರುವುದರಿಂದ ದಲಿತರಲ್ಲಿ ಸಂತಸ ತಂದಿದೆ. ಇದನ್ನು ಕರ್ನಾಟಕ ರಾಜ್ಯ ದಲಿತ ಸಂರ್ಷ ಸಮಿತಿ ಸ್ವಾಗತಿಸುತ್ತದೆ.
-> ಡಾ.ಡಿ.ಜಿ.ಸಾಗರ, ರಾಜ್ಯ ಸಂಚಾಲಕ, ರಾಜ್ಯ ದಲಿತ ಸಂರ್ಷ ಸಮಿತಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net