ಮಾಜಿ ಮುಖ್ಯಮಂತ್ರಿ ಹುಟ್ಟೂರಿನಲ್ಲಿ ಕುಡಿವ ನೀರಿಗಾಗಿ ಹಾಹಾಕಾರ

,
,
Published on
ಚಿಂಚೋಳಿ : ಮಾಜಿ ಮುಖ್ಯಮಂತ್ರಿ ಹುಟ್ಟೂರಿನಲ್ಲಿ ಕಳೆದ ಹದಿನೈದು ದಿನಗಳಿಂದ ಜನರು ಕುಡಿವ ನೀರಿಗಾಗಿ ಪರದಾಡುತ್ತಿದ್ದಾರೆ. ತಾಲೂಕಿನ ಹೂಡದಳ್ಳಿ ಗ್ರಾಮವು ಮಾಜಿ ಮುಖ್ಯಮಂತ್ರಿ ದಿ. ವಿರೇಂದ್ರ ಪಾಟೀಲ್ ಅವರ ಹುಟ್ಟೂರಿನಲ್ಲಿ ಕೊಡ ನೀರಿಗಾಗಿ ನಿತ್ಯವು 3 ಕಿ. ಮೀ ಕೆರೆಗೆ ತೆರಳಿ ಕೊಡ ನೀರು ತರುವ ಪರಿಸ್ಥಿತಿ ಇಲ್ಲಿನದ್ದಾಗಿದೆ.
ಹೂಡದಳ್ಳಿ ಗ್ರಾಮದಲ್ಲಿ ಮೂರು ಬೋರವೇಲ್ ಕೆಟ್ಟು ಹೋಗಿದ್ದು, ಹಲವು ಬಾರಿ ಗಾರಂಪಳ್ಳಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗೆ ಮನವಿ ಮಾಡಿದರೇ ಅನುದಾನ ವಿಲ್ಲ. ಎನು ಮಾಡಲಿ. ತೆರಿಗೆ ಹಣದಲ್ಲಿ ದುರಸ್ಥಿ ಮಾಡಬೇಕು. ಹೊಸ ಬೋರವೇಲ್ ಕೊರೆಸಲು ಸಾಧ್ಯವಿಲ್ಲ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥ ಕೈಲಾಸನಾಥ ಬಿರಾದಾರ ಗ್ರಾ.ಪಂ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಹೂಡದಳ್ಳಿ ಗ್ರಾಮದಲ್ಲಿ 1200 ಕ್ಕೂ ಅಧಿಕ ಜನ ವಾಸಿಸುತ್ತಿದ್ದು, ನಿತ್ಯವು ಕೊಡ ನೀರಿಗೆ ಬರದಾಡುತ್ತಿದ್ದೇವೆ. ಗ್ರಾಮದಲ್ಲಿ ಶುಕ್ರವಾರದಂದು ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಇದ್ದು, ನೀರಿನ ಸಂಕಷ್ಟದಿಂದ ಜಾತ್ರೋತ್ಸವ ನಿರುತ್ಸಾಹವಾಗಿದೆ. ಕೂಡಲೇ ಉನ್ನತ ಅಧಿಕಾರಿಗಳು ಬೋರವೇಲ್ ದುರಸ್ಥಿ ಮಾಡಿ. ತಾತ್ಕಾಲಿಕವಾಗಿ ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರ ಆಗ್ರಹವಾಗಿದೆ.
"

ಹೂಡದಳ್ಳಿ ಗ್ರಾಮದಲ್ಲಿ ನೀರಿನ ಸಮಸ್ಯೆ ಕುರಿತು ನನ್ನ ಗಮನಕ್ಕೆ ಇಲ್ಲ ಕೂಡಲೇ ಅಭಿವೃದ್ಧಿ ಅಧಿಕಾರಿಯೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು.

— ಡಾ. ಎಮ್. ಶೃತಿ ನೋಡಲ್ ಅಧಿಕಾರಿ ಗಾರಂಪಳ್ಳಿ. ‌
"

ಕಳೆದ ನಾಲ್ಕು ತಿಂಗಳಿಂದ ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಸಮಸ್ಯೆ ಮುಂದುವರೆದಿದ್ದು, ಮೂರು ಬೋರವೇಲ್ ಪೈಕಿ, ಒಂದು ಕೊಳವೆ ಬಾವಿಯಲ್ಲಿ ಬಿದ್ದಿದೆ. ಇನ್ನೊಂದು ಬೋರನಲ್ಲಿ ನೀರಿಲ್ಲ. ಮತ್ತೊಂದು ಬೋರವೇಲ್ ಸುಟ್ಟು ಹೋಗಿದ್ದು, ಸಂಕಷ್ಟ ಅನುಭವಿಸುವಂತಾಗಿದೆ. ಹೇಳೋರಿಲ್ಲ. ಕೇಳೋರಿಲ್ಲ. ಅಂತಹ ಕೆಟ್ಟ ಪರಿಸ್ಥಿತಿ ಉಂಟಾಗಿದೆ.

— ಹೊನ್ನಪ್ಪ ಮಾಳಗಿ ಗ್ರಾಮಸ್ಥ



.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net