ಕಲಬುರಗಿ: ಕಳೆದ ಒಂದುವರೆ ವರ್ಷದಿಂದ ಸ್ಥಗಿತಗೊಂಡಿದ್ದ, ಕಲಬುರಗಿ ವಿಮಾನಯಾನವೂ ಬುಧವಾರ ಪುನಃ ಆರಂಭವಾಗಿದ್ದು, ಜಿಲ್ಲೆಯ ಗಣ್ಯರು ಕೇಕ್ ಕತ್ತರಿಸಿ, ಮೊದಲ ಪ್ರಯಾಣಿಕರಿಗೆ ಟಿಕೆಟ್ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಸ್ಟಾರ್ ಏರ್ ಸಂಸ್ಥೆಯ 78 ಸೀಟ್ ಗಳುಳ್ಳ ವಿಮಾನವೂ ಬೆಂಗಳೂರಿನಿಂದ ಹೊರಟು, 7.45ಕ್ಕೆ ಕಲಬುರಗಿ, ತಲುಪಿದ್ದು, 8.10 ಗಂಟೆ ಗೆ ಮರಳಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿತು.
ನಿತ್ಯ ಬೆಳಗ್ಗೆ ಬೆಂಗಳೂರಿನಿಂದ 6.30ಕ್ಕೆ ಹೊರಟು ಕಲಬುರಗಿಗೆ ಬೆಳಗ್ಗೆ 7.40ಕ್ಕೆ ತಲುಪಲಿದೆ. ನಂತರ 8.10ಕ್ಕೆ ಕಲಬುರಗಿಯಿಂದ ಹೊರಟು 9.20ಕ್ಕೆ ಬೆಂಗಳೂರು ತಲುಪಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ತಿಳಿಸಿದರು.
ಶಾಸಕ ಎಂ.ವೈ.ಪಾಟೀಲ್, ಜಿಲ್ಲಾಧಿಕಾರಿ ಇಕ್ರಾಮ್ ಷರೀಫ್, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ, ಎಸ್.ಪಿ ಅಡ್ಡೂರು ಶ್ರೀನಿವಾಸುಲು, ನಿಲ್ದಾಣದ ನಿರ್ದೇಶಕ ಕಿಶೋರ ಕಿರಂಪಲ್ಲಿ, ಸ್ಟಾರ್ ಏರ್ ಸಂಸ್ಥೆಯ ಸಿ.ಎಸ್.ಬೋಪಣ್ಣ, ಸೋಹೇಲ್ ಸೇರಿದಂತೆ ಇತರರಿದ್ದರು.