

ಕಲಬುರಗಿ: ಹಿಂದಿ ಭಾಷೆಯಿಂದಾಗಿ ಉದ್ಯೋಗಾವಕಾಶಗಳು ವಿಸ್ತರಗೊಳ್ಳಲಿವೆ ಎಂದು ಮಹಿಳಾ ಸರ್ಕಾರಿ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥ ಡಾ.ರಾಮಲಿಂಗ ಭೋಸ್ಲೆ ಪ್ರತಿಪಾದಿಸಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿ.ಜಿ.ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗದಿಂದ ಮಂಗಳವಾರ ಆಯೋಜಿಸಿದ್ದ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಇಂದಿನ ಜಾಗತೀಕರಣದ ಯುಗದಲ್ಲಿ ಹಿಂದಿ ಭಾಷೆ ಕೇವಲ ಸಂವಹನದ ಮಾಧ್ಯಮವಾಗಿರದೆ, ಯುವಜನತೆಗೆ ಉದ್ಯೋಗದ ಬಾಗಿಲು ತೆರೆಯುವ ಪ್ರಮುಖ ಅಸವಾಗಿದೆ. ಅನುವಾದಕರು, ರ್ಜನಲಿಸಂ, ಕೇಂದ್ರ ಸರ್ಕಾರಿ ಇಲಾಖೆ, ಬ್ಯಾಂಕಿಂಗ್ ಕ್ಷೇತ್ರ, ಕಾರ್ಪೊರೇಟ್ ಕಂಪನಿ ಹಾಗೂ ಮಾಧ್ಯಮ ರಂಗದಲ್ಲಿ ಹಿಂದಿ ಬಲ್ಲವರಿಗೆ ಅಪಾರ ಉದ್ಯೋಗಾವಕಾಶಗಳಿವೆ ಎಂದು ಮಾಹಿತಿ ನೀಡಿದರು.
ಪ್ರಾಚಾರ್ಯ ಪ್ರೊ.ಆರ್.ಬಿ.ಕೊಂಡಾ ಅಧ್ಯತೆ ವಹಿಸಿ ಮಾತನಾಡಿ, ರಾಷ್ಟ್ರೀಯ ಭಾವೈಕ್ಯತೆ ಬೆಸೆಯುವಲ್ಲಿ ಹಿಂದಿ ಭಾಷೆ ಪಾತ್ರ ಹಿರಿದು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾತೃಭಾಷೆಯ ಜತೆಗೆ ಹಿಂದಿ ಭಾಷೆಯ ಮೇಲಿನ ಪ್ರಭುತ್ವವು ವಿದ್ಯಾರ್ಥಿಗಳ ಭವಿಷ್ಯದ ವೃತ್ತಿ ಜೀವನಕ್ಕೆ ಹೆಚ್ಚಿನ ಬಲ ತುಂಬುತ್ತದೆ ಎಂದು ಅಭಿಪ್ರಾಯಪಟ್ಟರು.
ಸಮಾಜಶಾಸ ವಿಭಾಗದ ಮುಖ್ಯಸ್ಥ ಡಾ.ಮಹೇಶ ಗಂವ್ಹಾರ್, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸುಭಾಶ್ಚಂದ್ರ ದೊಡ್ಡಮನಿ, ಡಾ.ಮೊಹ್ಸಿನಾ ಫಾತಿಮಾ, ಡಾ.ಶ್ರೀದೇವಿ ಸರಡಗಿ, ಗೀತಾ ಪಾಟೀಲ್, ಡಾ.ನಾಗರತ್ನ, ರತ್ನಾ ಪ್ಯಾಟಿ, ಡಾ ಕನ್ಯಾಕುಮಾರಿ, ಸಂಗಮೇಶ ತುಪ್ಪದ, ಶ್ವೇತಾ ಕೋಟೆ, ಶಿವಲೀಲಾ ಧೋತ್ರೆ, ಬಸಮ್ಮ ಗೊಬ್ಬುರ ಇತರರಿದ್ದರು.
ಹಿಂದಿ ದಿವಸ್ ನಿಮಿತ್ತ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಅಂತರ್ ಮಹಾವಿದ್ಯಾಲಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು. ಹಿಂದಿ ವಿಭಾಗದ ಮುಖ್ಯಸ್ಥ ಡಾ.ಪ್ರೇಮಚಂದ ಚವ್ಹಾಣ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕವಿತಾ ಠಾಕೂರ್ ನಿರೂಪಣೆ ಮಾಡಿದರು. ಸುಷ್ಮಾ ಕುಲಕರ್ಣಿ ವಂದಿಸಿದರು. ಶೆರಿಯಲ್ ಪ್ರಾರ್ಥಿಸಿದರು.