ಗಂಗಾನಗರದಲ್ಲಿ ಗ್ರಂಥಾಲಯ ಸ್ಥಾಪಿಸಿ

library appeal
library appeal
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಅಂಬಿಗರ ಸೇವಾ ದಳದಿಂದ ಪಾಲಿಕೆ ಆಯುಕ್ತರಿಗೆ ಮನವಿ
ಕಲಬುರಗಿ: ನಗರದ ಮಾಣಿಕೇಶ್ವರಿ ಕಾಲನಿ, ಗಂಗಾನಗರದ ಬಡಾವಣೆಯಲ್ಲಿ ಗ್ರಂಥಾಲಯ ಸ್ಥಾಪಿಸಬೇಕು ಎಂದು ಶ್ರೀ ಅಂಬಿಗರ ಸೇವಾ ದಳದಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಎರಡು ನಗರಗಳಲ್ಲಿ ಐದಾರು ಸಾವಿರ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀೆಗಳಿಗೆ ಅಧ್ಯಯನ ಮಾಡುತ್ತಿದ್ದಾರೆ. ಅಲ್ಲದೇ ಸಾರ್ವಜನಿಕರು ಪುಸ್ತಕ, ಪತ್ರಿಕೆಗಳ ಪ್ರೇಮಿ ಹಿರಿಯರಿದ್ದಾರೆ. ಅವರಿಗೆ ಓದಲು ಸೂಕ್ತ ಗ್ರಂಥಾಲಯದ ಅವಶ್ಯಕತೆ ಇದೆ ಎಂದು ಮನವರಿಕೆ ಮಾಡಿದರು.
ಗ್ರಂಥಾಲಯ ಇಲ್ಲದ್ದಕ್ಕೆ ಬೇರೆ ಬೇರೆ ಕಡೆ ಅಧ್ಯಯನಕ್ಕೆ ಹೋಗುವುದು, ಮನೆಯಲ್ಲಿ, ಕಟ್ಟೆಗಳಲ್ಲಿ ಹರಟೆ ಹೊಡೆಯುವುದು ನಡೆಯುತ್ತಿದೆ. ಓದುವ ಸಂಸತಿ ಣಿಸುತ್ತಿದ್ದು, ಅಧ್ಯಯನಶೀಲರನ್ನಾಗಿ ಮಾಡಲು ಗ್ರಂಥಾಲಯ ಅಗತ್ಯವಿದೆ. ಆದ್ದರಿಂದ ಮಹಾನಗರ ಪಾಲಿಕೆಯಿಂದ ಗ್ರಂಥಾಲಯ ಸ್ಥಾಪಿಸಿದರೆ ಅಧ್ಯಯನಕ್ಕೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಅಂಬಿಗರ ಸೇವಾ ದಳದ ಅಧ್ಯಕ್ಷ ಸಂತೋಷ ಬೆಣ್ಣೂರ, ರಾವೇಂದ್ರ ಜೋಕೆ, ಶರಣಬಸಪ್ಪ ಕಿರಸಾವಳಗಿ, ಮಹಾಂತೇಶ ಹರವಾಳ, ಬಸವರಾಜ ಮಳ್ಳಿ, ದೇವಿಂದ್ರ ಮೇಳಕುಂದಿ, ಮಲ್ಲಿಕಾರ್ಜುನ ಗುಡಬಾ, ಮಲ್ಲಿನಾಥ ಚಿಂಚನಸೂರ, ಲಕ್ಷ$್ಮಣ ಇಂಗಳಗಿ, ಚಿದಾನಂದ ಹೊನಗುಂಟಿ, ಗೊಲ್ಲಾಳಪ್ಪ ಜಮಾದಾರ, ಪ್ರವಿಣ ಚಿಕ್ಕಲ್​, ರಾಯಪ್ಪ ಹೊನಗುಂಟಿ, ಅಮೃತ ಡಿಗ್ಗಿ, ವಿಜಯಕುಮಾರ ಹದಗಲ, ಶಾಂತಪ್ಪ ಕೂಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net