ವೈಜ್ಞಾನಿಕ ಬರ ಪರಿಹಾರ ತ್ವರಿತ ನೀಡಲಿ

drought relief
drought relief
Published on

ಪ್ರಮುಖ ಮುಖ್ಯಾಂಶಗಳು

  • ಕೇದಾರಲಿಂಗಯ್ಯ ಹಿರೇಮಠ ಆಗ್ರಹ
  • ವಿಮೆ ಅನುಷ್ಠಾನ ಸರಿ ಆಗಲಿ
ಕಲಬುರಗಿ: ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದ್ದು, ರಾಜ್ಯ ಸರ್ಕಾರ ಎನ್​ಡಿಆರ್​ಎ್​ ನಿಯಮದ ಪ್ರಕಾರ 2.5 ಹೆಕ್ಟೇರ್​ಗೆ ಪರಿಹಾರ ನೀಡುತ್ತಿರುವುದು ಸರಿಯಲ್ಲ. ಇದನ್ನು ಬದಲಾಯಿಸಿ ಕನಿಷ್ಠ ಐದು ಎಕರೆಗೆ ಒಬ್ಬ ರೈತನಿಗೆ 25 ಸಾವಿರ ರೂ. ಪರಿಹಾರವನ್ನು ತ್ವರಿತ ಗತಿಯಲ್ಲಿ ನೀಡಬೇಕು ಎಂದು ಕಾಂಗ್ರೆಸ್​ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಆಗ್ರಹಿಸಿದರು.
ಬೆಳೆ ಪರಿಹಾರ ತುರ್ತು ಅಗತ್ಯವಿದ್ದು, ಕೇಂದ್ರ ಸರ್ಕಾರ ಪರಿಹಾರ ನೀಡಬೇಕೆಂದರೆ ರಾಜ್ಯ ಸರ್ಕಾರ ತಕ್ಷಣ ಬರಗಾಲ ಎಂದು ಘೋಷಿಸಬೇಕು. ಇಲ್ಲದಿದ್ದರೆ ಪರಿಹಾರ ನೀಡಲು ಬರುವುದಿಲ್ಲ. ತಕ್ಷಣ ಬರ ಘೋಷಿಸಿ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರವನ್ನು ಸರ್ಕಾರ ನೀಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ವಿಮೆ ಹಣ ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿ: ಜಿಲ್ಲೆಯಲ್ಲಿ ಬೆಳೆ ವಿಮೆಯನ್ನು ಬೇಕಾಬಿಟ್ಟಿಯಾಗಿ ಬಿಡುಗಡೆ ಮಾಡಲಾಗುತ್ತಿದೆ. ಇದು ಸರಿಯಾದ ಮತ್ತು ನಿಯಮಬದ್ಧವಾದ ಕ್ರಮವಲ್ಲ. ದೇಶದ ಯಾವುದೇ ಭಾಗದಲ್ಲಿ ಈ ರೀತಿಯ ಕ್ರಮವಿಲ್ಲ. ರೈತರು ಪೂರ್ಣ ಹಣ ಕಟ್ಟಿರುತ್ತಾರೆ. ಆದರೆ ಹೀಗೆ ಶೇ.15, 20 ಎಂದು ಬೇಕಾಬಿಟ್ಟಿ ವಿಮೆ ಹಣ ಬಿಡುಗಡೆ ಮಾಡುವುದು ಸರಿಯಲ್ಲ. ಒಂದೇ ಬಾರಿಗೆ ಪೂರ್ಣಾವಧಿ ಹಣ ನೀಡಬೇಕು. ಒಂದೇ ಕಂತಿನಲ್ಲಿ ಒದಗಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಸಾಲ ಮನ್ನಾ ವೈಜ್ಞಾನಿಕ ಆಗಲಿ: ಬರ ಎದುರಾಗಿದ್ದು, ಕಳೆದ ವರ್ಷ ಅತಿವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ರಾಜ್ಯ ಸರ್ಕಾರವೂ ಕಾಟಾಚಾರಕ್ಕೆ ಸಾಲ ಮನ್ನಾ ಘೋಷಿಸದೇ ವೈಜ್ಞಾನಿಕವಾಗಿ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್​ಗಳ ಸಾಲ ಮನ್ನಾ ಘೋಷಿಸಬೇಕು. ಘೋಷಿಸಿದ ತಕ್ಷಣ ಬ್ಯಾಂಕ್​ಗಳಿಗೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಬ್ಯಾಂಕ್​ಗಳು ದಿವಾಳಿ ಆಗುತ್ತವೆ ಎಂದು ಹೇಳಿದರು.
ಪಿ.ಚಿದಂಬರ ಆರ್ಥಿಕ ಸಚಿವರಾಗಿದ್ದಾಗ 80 ಸಾವಿರ ಕೋಟಿ ರೂ. ಸಾಲ ಮನ್ನಾ ಘೋಷಿಸಿದ್ದರು. ನಂತರ ಕೇಂದ್ರ ಸರ್ಕಾರ ಯಾರೊಬ್ಬರೂ ಸಾಲ ಮನ್ನಾ ಮಾಡಿಲ್ಲ. ಇ ಬಗ್ಗೆ ಕೇಂದ್ರ ಸರ್ಕಾರವೂ ಚಿಂತಿಸಬೇಕು ಎಂದರು.
ಪ್ರಮುಖರಾದ ಭೀಮಾಶಂಕರ ವಿಭೂತಿ, ಗೌತಮ ಗೋಳಾ, ನಿಂಗಣ್ಣಗೌಡ ಸಣ್ಣೂರ, ಶಿವಶಂಕರ ಜವಳಿ, ಚಂದ್ರಶೇಖರ ಮಲ್ಲಾಬಾದ್​, ಗಣೇಶ ಜವಳಗಿ, ಗುರುಕಿರಣ ಹಿರೇಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net