ಡಾ.ಬಿ.ಜಿ.ಪಾಟೀಲ್​ ಅಂತಾರಾಷ್ಟ್ರೀಯ ಕ್ರೀಡಾಂಗಣ ಲೋಕಾರ್ಪಣೆ

ಬಿಜಿ ಪಾಟೀಲ್​ ಕ್ರೀಡಾಂಗಣ, ಕ್ರೀಡಾಕೂಟ ಉದ್ಘಾಟಿಸಿದ ವೆಂಕಟೇಶ ಪ್ರಸಾದ, ಶ್ರೇಯಾಂಕ್​ ಪಾಟೀಲ್​
ಬಿಜಿ ಪಾಟೀಲ್​ ಕ್ರೀಡಾಂಗಣ, ಕ್ರೀಡಾಕೂಟ ಉದ್ಘಾಟಿಸಿದ ವೆಂಕಟೇಶ ಪ್ರಸಾದ, ಶ್ರೇಯಾಂಕ್​ ಪಾಟೀಲ್​
Published on

ಪ್ರಮುಖ ಮುಖ್ಯಾಂಶಗಳು

  • ಕೆಎಸ್​ಸಿಎ ಅಧ್ಯಕ್ಷ ವೆಂಕಟೇಶ ಪ್ರಸಾದ್​, ಕ್ರಿಕೆಟ ಪಟು ಶ್ರೇಯಾಂಕಾ ಪಾಟೀಲ್​ರಿಂದ ಉದ್ಘಾಟನೆ
  • ಬಹು ಕ್ರೀಡೆಗಳ ಅಂಕಣ ಹೊಂದಿದ ಕ್ರೀಡಾಂಗಣ
  • ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯ, ಮಾನದಂಡ ಅಳವಡಿಕೆ
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕ್ರೀಡಾಸಕ್ತಿ ಹೆಚ್ಚುತ್ತಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ, ಚಂದ್ರಕಾಂತ ಪಾಟೀಲ್​ ಶಾಲೆಯ ಮಕ್ಕಳಿಗೆ ಅತ್ಯಾಧುನಿಕ ಕ್ರೀಡಾಂಗಣವೂ ಬಲ ನೀಡಲಿದ್ದು, ನಿರಂತರ ಅಭ್ಯಾಸದ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ ಹೊರ ಹೊಮ್ಮಬೇಕು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್​ ಅಸೋಸಿಯೇಷನ್​ ಅಧ್ಯಕ್ಷ ವೆಂಕಟೇಶ ಪ್ರಸಾದ ಹೇಳಿದರು
ನಗರದ ಚಂದ್ರಕಾಂತ ಪಾಟೀಲ್​ ಇಂಗ್ಲಿಷ್​ ಮಾಧ್ಯಮ ಶಾಲೆ (ಸಿಬಿಎಸ್​ಇ) ಯಲ್ಲಿ ಬುಧವಾರ ಡಾ.ಬಿ.ಜಿ.ಪಾಟೀಲ್​ ಕ್ರೀಡಾಂಗಣ ಲೋಕಾರ್ಪಣೆ, 37ನೇ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಅತ್ಯುತ್ತಮ ಸೌಲಭ್ಯ, ಗುಣಮಟ್ಟದ ಕ್ರೀಡಾಂಗಣ ನಿರ್ಮಿಸಿದ್ದು, ಶಾಲೆ ವಿದ್ಯಾರ್ಥಿಗಳು ನಿತ್ಯ ಪಾಠದ ನಂತರ ಕನಿಷ್ಠ ಎರಡು ಗಂಟೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೊಬೈಲ್​, ಗೇಮ್​, ಟಿವಿಯಿಂದ ದೂರ ಉಳಿದು, ಕ್ರಿಕೆಟ್​, ುಟಬಾಲ್​, ಓಟ, ಬಾಸ್ಕೆಟ್​ ಬಾಲ್​ ಸೇರಿ ಇತರೆ ಕ್ರೀಡೆ ಅಭ್ಯಾಸದಲ್ಲಿ ಸಕ್ರೀಯವಾಗಿದ್ದರೆ ದೈಹಿಕ, ಮಾನಸಿಕ ಆರೋಗ್ಯ ಸುಸ್ಥಿರವಾಗಿರುತ್ತದೆ. ಅಧ್ಯಯನಕ್ಕೂ ಪೂರಕವಾಗಿರುತ್ತದೆ. ದಿನವಿಡೀ ಚಟುವಟಿಕೆಯಿಂದ ಇರುವಂತೆ ಶಕ್ತಿ ನೀಡುತ್ತದೆ ಎಂದು ಹೇಳಿದರು.
ಎಸ್​ಬಿ ಪಾಟೀಲ್​ ಗ್ರೂಪ್​ನ ವ್ಯವಸ್ಥಾಪಕ ನಿರ್ದೇಶಕ ಚಂದ್ರಕಾಂತ ಬಿ.ಪಾಟೀಲ್​ ಮಾತನಾಡಿ, ಭವಿಷ್ಯದಲ್ಲಿ ಕಲ್ಯಾಣ ಕರ್ನಾಟಕದಿಂದ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಹೊರ ಹೊಮ್ಮಬೇಕು ಎಂದು ಹೇಳಿದರು.
ರಾಷ್ಟ್ರೀಯ ಮಹಿಳಾ ಕ್ರಿಕೆಟ್​ ತಂಡದ ಆಟಗಾರ್ತಿ ಶ್ರೇಯಾಂಕಾ ಪಾಟೀಲ್​ ಮಾತನಾಡಿದರು. ಎಸ್​ಬಿ ಪಾಟೀಲ್​ ಗ್ರೂಪ್​ನ ಅಧ್ಯಕ್ಷ ಡಾ.ಬಿಜಿ ಪಾಟೀಲ್​ ಮಾತನಾಡಿದರು. ಎಸ್​ಬಿ ಪಾಟೀಲ್​ ಗ್ರೂಪ್​ನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಕೈಲಾಶ್​ ಬಿ.ಪಾಟೀಲ್​ ಮತ್ತು ಶಾಲಾ ಪ್ರಾಂಶುಪಾಲ ಕೆ.ರವಿಕುಮಾರ ಇತರರಿದ್ದರು.

ಅಂತಾರಾಷ್ಟ್ರೀಯ ಮಟ್ಟದ ಅಂಕಣ

ಕಲ್ಯಾಣ ಕರ್ನಾಟಕ ಭಾಗದಲ್ಲೇ ಪ್ರಥಮ ಬಾರಿಗೆ ಖಾಸಗಿ ಸಿಬಿಎಸ್​ಇ ಶಾಲೆಯೊಂದರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಯುರೋಪಿಯನ್​ ಮೇಕ್​ ಕ್ರೀಡಾಂಗಣ ಚಂದ್ರಕಾಂತ ಪಾಟೀಲ್​ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಿರ್ಮಿಸಲಾಗಿದೆ. ಎಲ್ಲ ಅಂತಾರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸಿ, ಗುಣಮಟ್ಟದ ಸಾಮಗರಿ ಬಳಸಿ ಯುರೋಪಿಯನ್​ ಮೇಕ್​ ಸಿಂಥೆಟಿಕ್​ ರ್ಟಫ್​ ಮತ್ತು ಸ್ಯಾಂಡ್​ವಿಚ್​ನಿಂದ ಮೈದಾನ ನಿರ್ಮಿಸಲಾಗಿದೆ. ಈ ಅಂಕಗಣದಲ್ಲಿ ಕ್ರಿಕೆಟ್​, ುಟಬಾಲ್​, ಖೋ ಖೋ, ಕಬ್ಬಡ್ಡಿ, ಉದ್ದ ಜಿಗಿತ, ಎತ್ತರ ಜಿಗಿತ, ಹಾಕಿ ಆಡಬಹುದು. ಓಟಕ್ಕೆ ಪ್ರತ್ಯೇಕ ಸಿಂಥೆಟಿಕ್​ ಟ್ರಾ$್ಯಕ್​ ಸಹ ಹೊಂದಿದೆ. ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಅಭ್ಯಾಸಕ್ಕೆ ಇರುವ ಎಲ್ಲ ವ್ಯವಸ್ಥೆ, ಮಾನದಂಡದ ಸಾಮರ್ಥ್ಯ ಇಲ್ಲಿ ಅಳವಡಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net