ದಿಗಂಬರ ದಿಗಂಬರ ಶ್ರೀಪಾದ ವಲ್ಲಭ ದಿಗಂಬರ

ಅಫಜಲಪುರ ತಾಲೂಕಿನ ದೇವಲ ಗಾಣಗಾಪುರದ ನಿರ್ಗುಣ ಮಠದಲ್ಲಿ ಗುರುವಾರ ಅಸಂಖ್ಯಾತ ಭಕ್ತರ ಜೈಘೋಷದ ಮಧ್ಯೆ ದತ್ತ ಮಹಾರಾಜರ ತೊಟ್ಟಿಲೋತ್ಸವ ನಡೆಯಿತು.
ಅಫಜಲಪುರ ತಾಲೂಕಿನ ದೇವಲ ಗಾಣಗಾಪುರದ ನಿರ್ಗುಣ ಮಠದಲ್ಲಿ ಗುರುವಾರ ಅಸಂಖ್ಯಾತ ಭಕ್ತರ ಜೈಘೋಷದ ಮಧ್ಯೆ ದತ್ತ ಮಹಾರಾಜರ ತೊಟ್ಟಿಲೋತ್ಸವ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ದೇವಲಗಾಣಗಾಪುರದಲ್ಲಿ ವೈಭವದ ದತ್ತ ಜಯಂತಿ
  • ವಿವಿಧ ಪುಷ್ಪಗಳಿಂದ ಝಗಮಗಿಸಿದ ನಿರ್ಗುಣ ಮಠ
ಅಫಜಲಪುರ: ಕರ್ನಾಟಕದ ಕಾಶಿ ಎಂದೇ ಖ್ಯಾತಿ ಪಡೆದಿರುವ ಹಾಗೂ ಭಗವಂತ ತ್ರಿಮೂರ್ತಿ ಸ್ವರೂಪದಲ್ಲಿ ದರ್ಶನ ನೀಡುವ ಶಕ್ತಿ ಕೇಂದ್ರ ದೇವಲಗಾಣಗಾಪುರದ ನಿರ್ಗುಣ ಮಠದಲ್ಲಿ ಶ್ರೀ ದತ್ತಾತ್ರೇಯ ಜಯಂತಿ ಗುರುವಾರ ಸಂಭ್ರಮದಿAದ ನಡೆಯಿತು.
ನಸುಕಿನ ಜಾವದಿಂದಲೇ ನಿರ್ಗುಣ ಮಠದಲ್ಲಿ ಮುಖ್ಯ ಅರ್ಚಕರಿಂದ ದತ್ತಾತ್ರೇಯ ಮಹಾರಾಜರ ಮೂರ್ತಿಗೆ ವಿಶೇಷ ಅಲಂಕಾರ,  ಪೂಜೆ, ಅಭಿಷೇಕ ಹಾಗೂ ನಿರ್ಗುಣ ಪಾದುಕೆಗಳಿಗೆ ಕೇಸರಿ, ಕಸ್ತೂರಿ, ಸುಗಂಧ ದ್ರವ್ಯ (ಅತ್ತರ್) ಲೇಪನ ಜರುಗಿತು. ಗುರುಗಳ ಸ್ಪಟಿಕ ಲಿಂಗಕ್ಕೆ ಕ್ಷೀರಾಭಿಷೇಕ, ಅಷ್ಟೋತ್ತರ, ಸಹಸ್ರನಾಮ, ತುಳಸಿ ಪುಷ್ಪಾರ್ಚನೆ, ಮಂತ್ರ ಪುಷ್ಪಾರ್ಚನೆಯೊಂದಿಗೆ ಕಾಕಡಾರತಿ ನಡೆಯಿತು. ೧೧ಕ್ಕೆ ವಿವಿಧ ವಾದ್ಯಗಳೊಂದಿಗೆ ಮಾಹಾರಾಜರ ರಾಜದಂಡದೊAದಿಗೆ ಅರ್ಚಕರ ಮನೆಯಿಂದ ಮಹಾ ನೈವೇದ್ತ ನಿರ್ಗುಣ ಮಠಕ್ಕೆ ಆಗಮಿಸಿತು. ಬಳಿಕ ವಿಶೇಷ ಮಹಾಮಂಗಳಾರತಿ ನೆರವೇರಿಸಿ ನೈವೇದ್ಯ ಸಮರ್ಪಿಸಲಾಯಿತು.
ಮಧ್ಯಾಹ್ನ ೧೨ಕ್ಕೆ ಗರ್ಭಗುಡಿಯಿಂದ ಸಾಲಕಾರಿ ಅರ್ಚಕರು ಬಾಲ ದತ್ತಮಹಾರಾಜರ ಮೂರ್ತಿಯನ್ನು ವಿವಿಧ ವಾದ್ಯಮೇಳಗಳ ಜತೆಗೆ ಭವ್ಯ ಮೆರವಣಿಗೆಯೊಂದಿಗೆ ತೆಗೆದುಕೊಂಡು ಬಂದು, ಮಠದ ಪ್ರಾಂಗಣದಲ್ಲಿ ವಿವಿಧ ಫಲ-ಪುಷ್ಪಗಳಿಂದ ಸಿಂಗರಿಸಿದ್ದ ಬೆಳ್ಳಿ ತೊಟ್ಟಿಲ್ಲಿ ಹಾಕಿ ತೊಟ್ಟಿಲೋತ್ಸವ ನೆರವೇರಿಸಿದರು. ಸಾಲಕಾರಿ ಅರ್ಚಕರಿಂದ ಬಾಳಾ ಜೋರೆ, ಜೋ ಜೋರೆ ಬಾಳಾ, ದತ್ತಾತ್ರೇಯ ಅವತಾರ ಜೋ, ಜೋ.., ಬ್ರಹ್ಮ, ವಿಷ್ಣು, ಮಹೇಶ್ವರ ದತ್ತಾತ್ರೇಯ ಅವತಾರ ಜೋ ಎಂದು ತೊಟ್ಟಿಲಿಗೆ ಹಾಕಿ ತೂಗಿದರು. ಭಕ್ತರಿಂದ ದಿಗಂಬರ.. ದಿಗಂಬರ.. ಶ್ರೀಪಾದ ಶ್ರೀವಲ್ಲಭ ದಿಗಂಬರ, ದತ್ತ ಮಹಾರಾಜ ಕೀ ಜೈ., ಅನುಸಯತ್ರಿ ಸುಕುಮಾರ ಕೀ ಜೈ ಸೇರಿ ವಿವಿಧ ಜೈಘೋಷ ಮೊಳಗಿದವು.
ಎಲ್ಲರಿಗೂ ಸುಗಮವಾಗಿ ತೊಟ್ಟಿಲೋತ್ಸವ ದರ್ಶನ ಸಿಗಲಿ ಎಂಬ ಉz್ದೆÃಶದಿಂದ ದೇವಸ್ಥಾನ ಸಮಿತಿಯಿಂದ ದೇಗುಲ ಹೊರಗಡೆ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿತ್ತು. ಹೀಗಾಗಿ ಯಾವುದೇ ಗದ್ದಲವಿಲ್ಲದಂತೆ ಶಾಂತಿಯುತವಾಗಿ ಎಲ್ಲರೂ ತೊಟ್ಟಿಲೋತ್ಸವ ಕನ್ತುಂಬಿಕೊAಡರು. 
ಅರ್ಚಕರಾದ ನಾಗೇಶಭಟ್ ಪೂಜಾರಿ, ದತ್ತಾತ್ರೇಯ ಪೂಜಾರಿ, ಪ್ರಿಯಾಂಕ ಪೂಜಾರಿ, ಉದಯ ಪೂಜಾರಿ, ಪ್ರಖ್ಯಾತ ಪೂಜಾರಿ, ಪ್ರಫುಲ್ ಪೂಜಾರಿ, ಪ್ರವೀಣ ಪೂಜಾರಿ, ಕರುಣಾಕರ ಪೂಜಾರಿ, ದಿಗಂಬರ ಪೂಜಾರಿ, ಪ್ರಸಾದ ಪೂಜಾರಿ, ಅವಧೂತ ಪೂಜಾರಿ, ನರಹರಿ ಪೂಜಾರಿ, ಗುಂಡುಭಟ್ ಪೂಜಾರಿ, ಕೌಸ್ತುಭ ಪೂಜಾರಿ, ದೇವು ಪೂಜಾರಿ, ಭರತ ಪೂಜಾರಿ, ರೋಹಿತ ಪೂಜಾರಿ, ಕಿರಣ ಪೂಜಾರಿ, ಶ್ರೀಧರ ಪೂಜಾರಿ, ಅಭಯ ಪೂಜಾರಿ, ಚಂದನ ಪೂಜಾರಿ, ಶರತ ಪೂಜಾರಿ, ಆಶೀರ್ವಾದ ಪೂಜಾರಿ, ಅಲರ್ಕ ಪೂಜಾರಿ, ಸರ್ವೇಶ ಪೂಜಾರಿ, ಚೇತನ ಪೂಜಾರಿ, ಪ್ರದ್ಯುಮ್ನ ಪೂಜಾರಿ, ಪ್ರಶಾಂತ ಪೂಜಾರಿ, ಸ್ವರೂಪ ಪೂಜಾರಿ, ಪ್ರತೀಕ ಪೂಜಾರಿ, ದೇವಸ್ಥಾನ  ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ ಹಾಗೂ ರಾಜ್ಯ, ಮಹಾರಾಷ್ಟç, ಆಂಧ್ರಪ್ರದೇಶ, ತೆಲಂಗಾಣ ಸೇರಿ ವಿವಿಧೆಡೆಯಿಂದ ಸುಮಾರು ೧.೫ ಲP್ಷÀಕ್ಕೂ ಅಧಿಕ ಜನರು ಭಾಗಿಯಾಗಿ ಪುನೀತರಾದರು.
ಪಾದಯಾತ್ರೆ ಮೂಲಕ ಬಂದ ಭಕ್ತರು
ದೇವಲ ಗಾಣಗಾಪುರದಲ್ಲಿ ನಡೆಯುವ ಶ್ರೀ ಗುರು ದತ್ತ ಮಹಾರಾಜರ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮಹಾರಾಷ್ಟçದ ಪುಣೆ, ಪಂಢರಾಪುರ, ಸೋಲಾಪುರ, ಅಕ್ಕಲಕೋಟ, ಜತ್ತ ಸೇರಿ ಇನ್ನಿತರ ಭಾಗಗಳಿಂದ ಅಸಂಖ್ಯಾತ ಭಕ್ತರು ದತ್ತ ಮಹಾರಾಜರ ಪಲ್ಲಕ್ಕಿಯನ್ನು ಹೊತ್ತು ಮೆರವಣಿಗೆಯೊಂದಿಗೆ ಪಾದಯಾತ್ರೆ ಮೂಲಕ ಶ್ರೀಕ್ಷೇತ್ರಕ್ಕೆ ಆಗಮಿಸಿ ಉತ್ಸವದಲ್ಲಿ ಪಾಲ್ಗೊಂಡರು.
ಭೀಮಾ ಅಮರ್ಜಾ ಸಂಗಮದಲ್ಲಿ ಪುಣ್ಯಸ್ನಾನ
ಶ್ರೀ ದತ್ತ ಮಹಾರಾಜರ ೨ನೇ ಅವತಾರವಾದ ಶ್ರೀ ನರಸಿಂಹ ಸರಸ್ವತಿ ಮಹಾರಾಜರು ಅನುಷ್ಠಾನಗೈದ ಪುಣ್ಯ ಸ್ಥಳ ಭೀಮಾ-ಅಮರ್ಜಾ ಸಂಗಮ ಕ್ಷೇತ್ರವಾಗಿದೆ. ಅಸಂಖ್ಯಾತ ಭಕ್ತರು ಗುರುವಾರ ಬೆಳಗ್ಗೆ ಪುಣ್ಯಸ್ನಾನ ನೆರವೇರಿಸಿ, ಇಷ್ಟಾರ್ಥ ಸಿದ್ಧಿಗಾಗಿ ಔದುಂಬರ ವೃP್ಷÀದ ಕೆಳಗೆ ದತ್ತ ಚರಿತ್ರೆ ಪಾರಾಯಣ ಮಾಡಿ, ಸಂಗಮೇಶ್ವರನ ದರ್ಶನ ಪಡೆದು, ನಿರ್ಗುಣ ಮಠದತ್ತ ಹೆಜ್ಜೆ ಹಾಕಿದರು.

ವಾಹನ ದಟ್ಟಣೆ ಯಾತ್ರಿಕರು ಹೈರಾಣ

ದೇವಲಗಾಣಗಾಪುರ ಮಹಾನ್ ಶಕ್ತಿ ಕೇಂದ್ರವಾಗಿದ್ದು, ಇಲ್ಲಿನ ದತ್ತ ಜಯಂತಿಯಲ್ಲಿ ಪ್ರತಿವರ್ಷವೂ ಲಕ್ಷಾಂತರ ಭಕ್ತರು ಭಾಗಿಯಾಗುತ್ತಾರೆ. ಈ ಬಾರಿಯ ಉತ್ಸವಕ್ಕೆ ಬುಧವಾರವೇ ಅಸಂಖ್ಯಾತ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದು, ವಾಹನ ಸಂಚಾರ ದಟ್ಟಣೆಯಿಂದ ಜನರು ಪರದಾಡುವಂತಾಯಿತು. ಚೌಡಾಪುರ- ದೇವಲಗಾಣಗಾಪುರ, ತೆಲ್ಲೂರ- ಗಾಣಗಾಪುರ ಮಾರ್ಗಗಳಲ್ಲಿ ಸುಮಾರು ೪ ಕಿಮೀ. ವರೆಗೂ  ವಾಹನ ಸಂಚಾರ ಸಿಕ್ಕು ಆಗಿದ್ದು, ಭಕ್ತರು ನಡೆದುಕೊಂಡೆ ದೇಗುಲಕ್ಕೆ ಆಗಮಿಸುವಂತಾಯಿತು. ಶಾಂತಿ- ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಡಿವೈಎಸ್‌ಪಿ ನೇತೃತ್ಬದಲ್ಲಿ ೩ ಸಿಪಿಐ, ೨೦ ಪಿಎಸ್‌ಐ, ೨೫೦ ಪೇದೆಗಳು, ೧ ಕೆಎಸ್‌ಆರ್‌ಪಿ, ೪ ಡಿಎಆರ್ ಹಾಗೂ ೬೦ ಹೋಮ್ ಗಾರ್ಡ್ಗಳನ್ನು ನಿಯೋಜನೆ ಮಾಡಲಾಗಿತ್ತು.

ದರ್ಶನ ಪಡೆದ ಗಣ್ಯರು

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ್, ಮಾಜಿ ಸಚಿವ ಸಿದ್ದರಾಮ ಮೇತ್ರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಟಿಟಿಡಿ ಬೋರ್ಡ್ ಸದಸ್ಯ ರಿಷಿ ಪಾಂಡಿಗಾರು, ನಗರ ಪೊಲೀಸ್ ಆಯುಕ್ತ ಕಮಿಷನರ್ ಡಾ.ಶರಣಪ್ಪ ಎಸ್.ಡಿ., ಎಡಿಸಿ ರಾಯಪ್ಪ ಹುಣಸಗಿ, ಮಹಿಳಾ ನಾಯಕಿಯರಾದ ಜ್ಯೋತಿ ಪಾಟೀಲ್, ಉಮಾದೇವಿ ಪಾಟೀಲ್, ಜಯಶ್ರೀ ಮತ್ತಿಮಡು ಸೇರಿ ಹಲವು ಗಣ್ಯರು ದೇವರ ದರ್ಶನ ಪಡೆದು ಕೃತಾರ್ಥರಾದರು.
"

ಶ್ರೀ ದತ್ತ ಮಹಾರಾಜರು ಶ್ರೀ ನರಸಿಂಹ ಸರಸ್ವತಿ ಮಹಾರಾಜರ ರೂಪದಲ್ಲಿ ಕ್ಷೇತ್ರದಲ್ಲಿ ಸಂಚರಿಸಿದ್ದರಿAದ ಈ ನೆಲವೂ ಪಾವಿತ್ರÈ ಸ್ಥಾನ ಪಡೆದಿದೆ. ಮಹಾರಾಜರು ಭೌತಿಕವಾಗಿ ಮರೆಯಾದರೂ ನಿರ್ಗುಣ ಪಾದುಕೆಗಳ ಪ್ರತಿರೂಪದಲ್ಲಿ ನಿತ್ಯ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುತ್ತಿರುವುದು ಮಾನವ ಕುಲಕೋಟಿಯ ಸೌಭಾಗ್ಯ

 | ಪ್ರಿಯಾಂಕ್ ಪೂಜಾರಿ, ಸಾಲಕಾರಿ ಕಾರ್ಯದರ್ಶಿ, ದತ್ತಾತ್ರೇಯ ದೇವಸ್ಥಾನ 

ಭೀಮಾ-ಅಮರ್ಜಾ ಸಂಗಮ ಕ್ಷೇತ್ರದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರ ರೂಪದಲ್ಲಿ ನೆಲೆಸಿರುವ ದತ್ತ ಮಹಾರಾಜರು ಭಕ್ತರ ನಿಷ್ಕಲ್ಮಶ ಭಕ್ತಿಯನ್ನು ಸ್ವೀಕರಿಸಿ, ಕಷ್ಟಗಳನ್ನು ಪರಿಹರಿಸಿ ನೆಮ್ಮದಿಯ ಜೀವನ ಕರುಣಿಸುತ್ತಿz್ದÁರೆ. ಗುರುಗಳ ಆಜ್ಞೆಯಂತೆ ಕ್ಷೇತ್ರದಲ್ಲಿ ನಿತ್ಯ ತ್ರಿಕಾಲ ಪೂಜೆ, ಪ್ರಸಾದ ಸೇವೆ ನಡೆಯುತ್ತಿದೆ.

 | ಪ್ರಖ್ಯಾತ ಪೂಜಾರಿ, ಮುಖ್ಯ ಅರ್ಚಕ, ನಿರ್ಗುಣ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net