ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ, ಸಿಪಿಐ ಪ್ರತಿಭಟನೆ

drinking water probleme
drinking water probleme
Published on

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿ ಜಿಲ್ಲೆಯಲ್ಲಿ ಸಮಸ್ಯೆಗೆ ಸ್ಪಂದಿಸಲು ಆಗ್ರಹ
  • ಸಿಪಿಐ ಪ್ರತಿಭಟನೆ
ಕಲಬುರಗಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದ್ದು ಜಿಲ್ಲಾಡಳಿತ, ಪಾಲಿಕೆ ಮತ್ತು ಸರ್ಕಾರ ಸಂಪೂರ್ಣ ವಿಲವಾಗಿದೆ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್​ ಪದ (ಸಿಪಿಐ) ಜಿಲ್ಲಾ ಮಂಡಳಿಯಿಂದ ನಗರದ ಮಹಾನಗರ ಪಾಲಿಕೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಡಾ.ಮಹೇಶಕುಮಾರ ರಾಠೋಡ ಮಾತನಾಡಿ, ಜಿಲ್ಲೆಯಲ್ಲಿ ದಾಖಲೆಯ ಬಿಸಿಲು ಆಗಿದ್ದು, ಹನಿ ನೀರಿಗೂ ಪರದಾಡುವಂತಾಗಿದೆ. ಕನಿಷ್ಠ ಕುಡಿಯುವ ನೀರನ್ನು ಒದಗಿಸಲಾಗದಷ್ಟು ಸರ್ಕಾರ ಜನವಿರೋಧಿ ಆಗಿದೆ. ತಾಲೂಕು ಕೇಂದ್ರ ಹಾಗೂ ಹಳ್ಳಿಗಳಲ್ಲಿ ಜನರು ನೀರಿಗಾಗಿ ಮೈಲಿಗಟ್ಟಲೆ ತಿರುಗುವಂತಾಗಿದೆ. ದೊರೆಯುವ ನೀರು ಕುಡಿಯಲು ಆಗದಷ್ಟು ಕೆಟ್ಟಿವೆ ಎಂದರು.
ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕುಡಿಯುವ ನೀರು ಸಿಗದೆ ಆರೋಗ್ಯ ಹದಗೆಡುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ತಣವೇ ಶುದ್ಧ ಮತ್ತು ತಂಪು ನೀರಿನ ವ್ಯವಸ್ಥೆ ಮಾಡಬೇಕು. ನೀರಿನ ಸಮಸ್ಯೆಯೊಂದಿಗೆ ರಸ್ತೆ, ಆಸ್ಪತ್ರೆ ಹಾಗೂ ವಿದ್ಯುತ್​ ಸೌಲಭ್ಯಗಳ ನಿರ್ವಹಣೆಯಲ್ಲೂ ಸರಕಾರ ರ್ನಿಲ್ಯ ವಹಿಸಿದೆ ಎಂದು ದೂರಿದರು.
ಜಿಲ್ಲಾಡಳಿತ ಹಾಗೂ ಪಾಲಿಕೆ ಅ-ಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಬೇಕೆಂದು ಪಟ್ಟು ಹಿಡಿದರು. ನಂತರ ಮಹಾನಗರ ಪಾಲಿಕೆ ಅಧಿ-ಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಜಿಲ್ಲಾ ಸಹ ಕಾರ್ಯದರ್ಶಿ ಪ್ರಭುದೇವ ಯಳಸಂಗಿ, ಜಿಲ್ಲಾ ಖಜಾಂಚಿ ಭೀಮಾಶಂಕರ ಮಾಡಿಯಾಳ, ಸಿಪಿಐ ಮುಖಂಡರಾದ ಸಾಜೀದ್​ ಅಹ್ಮದ್​, ಶಿವಲಿಂಗಮ್ಮ ಲೇಂಗಟೀಕರ್​, ಮಹಮ್ಮದ್​ ಹುಸೇನಿ, ಚಂದಮ್ಮ, ಭಾಗಮ್ಮ ಸೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net