ಕಲಬುರಗಿಯಲ್ಲಿ ಗೋವುಗಳ ಅನುಮಾನಾಸ್ಪದ ಸಾವು: ವಿಷವುಣಿಸಿದ ಅನುಮಾನ

ಮೃತಪಟ್ಟ ಗೋವು ಪರಿಶೀಲಿಸಿದ ಪೊಲೀಸರು.
ಮೃತಪಟ್ಟ ಗೋವು ಪರಿಶೀಲಿಸಿದ ಪೊಲೀಸರು.
Published on

ಪ್ರಮುಖ ಮುಖ್ಯಾಂಶಗಳು

  • ಶಹಾಬಜಾರ್​ ತಾಂಡಾದಲ್ಲಿ ಘಟನೆ
  • ವಾರದಲ್ಲೇ 5 ಆಕಳು ಮೃತ್ಯು
ಕಲಬುರಗಿ: ನಗರದ ಶಹಾಬಜಾರ್​ ತಾಂಡಾದಲ್ಲಿ ಕಳೆದ ಎರಡು ದಿನದಲ್ಲಿ ಐದು ಆಕಳುಗಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಗೋ ಪಾಲಕರಲ್ಲಿ ಆತಂಕ ಮೂಡಿಸಿದೆ.
ತಾಂಡಾದಲ್ಲಿ ಸುಮಾರು 150 ಜಾನುವಾರುಗಳನ್ನು ಲಂಬಾಣಿ ಸಮುದಾಯದವರು ಸಲಹುತ್ತಿದ್ದು, ಕಳೆದ ಎರಡು ದಿನದಲ್ಲಿ ಬದ್ಲಾಬಾಯಿ ರಾಠೋಡ, ದಾನಾಬಾಯಿ ಚವ್ಹಾಣ್​, ಸಕ್ಕುಬಾಯಿ ಧನಸಿಂಗ್​ ಅವರ ನಾಲ್ಕು ಜಾನುವಾರು ಮೃತಪಟ್ಟಿವೆ. ಅದಕ್ಕು ಮುನ್ನವೂ ಎರಡು ಜಾನುವಾರು ಮೃತಪಟ್ಟಿವೆ ಎಂದು ಸ್ಥಳಿಯರು ತಿಳಿಸಿದ್ದಾರೆ.
ಬೆಳಗ್ಗೆ ತಿರುಗಾಡಲು ಬಿಡುತ್ತಿದ್ದು, ಎಲ್ಲೆಂದರಲ್ಲಿ ಆಕಳುಗಳ ಸಾವು ಸಂಭವಿಸುತ್ತಿದೆ. ಸ್ಪಷ್ಟ ಕಾರಣ ತಿಳಿಯದೇ ಗೋ ಸಾಕುವವರು ಸಂಕಷ್ಟಕ್ಕೆ ಈಡಾಗಿದ್ದಾರೆ. ವಾರದಿಂದ ಗೋವುಗಳು ಸಾವು ಸಂಭವಿಸುತ್ತಿದೆ. ಸ್ವಸ್ಥ, ಆರೋಗ್ಯದಿಂದ ಗೋವುಗಳು ಬೆಳಗ್ಗೆ ಮನೆಯಿಂದ ಹೋಗುತ್ತಿದ್ದು, ಹೊಟ್ಟೆ ಉಬ್ಬಿದ ಸ್ಥಿತಿಯಲ್ಲಿ ಮೃತಪಟ್ಟು ಬೀಳುತ್ತಿವೆ. ಇನ್ನು ಕೆಲವು ಸಹಜ ಸ್ಥಿತಿಯಲ್ಲೇ ಮೃತಪಟ್ಟಿವೆ ಎಂದು ಗೋವನ್ನು ಕಳೆದುಕೊಂಡವರು ತಿಳಿಸಿದ್ದಾರೆ.
ಗುರುವಾರವೂ ಗೋವು ಮೃತಪಟ್ಟಿದ್ದು, ಸ್ಥಳಿಯರು ಪೊಲೀಸರು, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳನ್ನು ಕರೆಸಿ, ಪರಿಶೀಲಿಸಲು ತಿಳಿಸಿದ್ದಾರೆ. ಗುರುವಾರ ರಾತ್ರಿ ಪೊಲೀಸರು, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದು, ಕಾರಣ ತಿಳಿಯಬೇಕಿದೆ.
ಶಹಾಬಜಾರ್​ ತಾಂಡಾದಲ್ಲಿ 150ರಿಂದ 200 ಜಾನುವಾರುಗಳಿದ್ದು, ಲಂಬಾಣಿ ಸಮಾಜದ ಕುಲಕಸುಬು ಗೋ ಪಾಲನೆ. ವಾರದಿಂದ ನಾಲ್ಕೆದು ಗೋವುಗಳು ಅನುಮಾನಾಸ್ಪದವಾಗಿ ಮೃತಪಟ್ಟಿವೆ. ಯಾರೋ ಇಂಜಕ್ಷನ್​ ನೀಡಿ, ವಿಷವುಣಿಸಿರುವ ಅನುಮಾನವೂ ಇದೆ. ಈ ಬಗ್ಗೆ ಪೊಲೀಸರು, ಪಶು ಸಂಗೋಪನಾ ಇಲಾಖೆ ಸಮಗ್ರ ತನಿಖೆ, ಪರಿಶೀಲನೆ ನಡೆಸಿ, ತಕ್ಷಣ ಕ್ರಮ ಕೈಗೊಳ್ಳಬೇಕು. ಮೃತ ಗೋವುಗಳ ಸಾಕಣೆದಾರರಿಗೆ ಪರಿಹಾರ ಧನ ನೀಡಬೇಕು. ಕಾರಣ ಪತ್ತೆ ಹಚ್ಚಿ, ಜನರಲ್ಲಿನ ಭೀತಿ ದೂರ ಮಾಡಬೇಕು, ಬಾಕಿ ಗೋವುಗಳನ್ನು ರಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುತ್ತದೆ.
> ಕೃಷ್ಣಾ ನಾಯಕ, ಮಹಾನಗರ ಪಾಲಿಕೆ ಸದಸ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net