ಅಪ್ಪುಗೌಡರ ತೇಜೋವಧೆಗೆ ಷಡ್ಯಂತ್ರ

dattatreay patil revoor
dattatreay patil revoor
Published on

ಪ್ರಮುಖ ಮುಖ್ಯಾಂಶಗಳು

  • ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಕಿಡಿ
ಕಲಬುರಗಿ: ಜಿಲ್ಲೆಯಲ್ಲಿ ಮೂರ್ನಾಲ್ಕು ದಶಕಗಳ ಹಿಂದೆ ಯಾವ ವಿಷಯದ ಮೇಲೆ ರಾಜಕೀಯ ನಡೆಯುತ್ತಿತ್ತು ಎಂಬುದು ಜಗತ್ತಿಗೆ ತಿಳಿದಿದೆ. ರಾಜಕಾರಣದಲ್ಲಿ ಮಾತನಾಡಿದ ವಾಸ್ತವವನ್ನು ಉಲ್ಲೇಖಿಸಿದ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ (ಅಪ್ಪುಗೌಡ) ವಿರುದ್ಧ ಸಾರ್ವಜನಿಕವಾಗಿ ನಿಂದಿಸಿ, ಷಡ್ಯಂತ್ರ ರೂಪಿಸಿ ತೇಜೋವಧೆ ಮಾಡಲಾಗುತ್ತಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ನಾಗಲಿಂಗಯ್ಯ ಹಿರೇಮಠ ಆರೋಪಿಸಿದರು.
ಮಾಜಿ ಶಾಸಕರ ವಿರುದ್ಧ ತರಾತುರಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ಅದೇ ವೇಗದ ಪ್ರಕ್ರಿಯೆ ಅವರನ್ನು ನಿಂದಿಸಿದವರ ಬಗ್ಗೆಯೂ ಮಾಡಬೇಕಿತ್ತು. ಪೊಲೀಸರ ಲಾಠಿಗೆ ಕೈ ಹಿಡಿದವರು ಯಾರೂ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿಂದೆ ಕಲಬುರಗಿಯಲ್ಲಿ ಮಾಜಿ ಸಚಿವರು ಆಡಿದ ಮಾತಿನ ಕುರಿತು ಸುಪ್ರೀಂ ಕೋರ್ಟ್​ವರೆಗೂ ಪ್ರಕರಣ ನಡೆದಿದ್ದು, ಎಲ್ಲರಿಗೂ ತಿಳಿದ ವಿಷಯವಾಗಿದೆ. ಈ ಬಗ್ಗೆ ಸಲ್ಲದ ದ್ವೇಷ ಹುಟ್ಟು ಹಾಕಿ, ಸುಸಂಸತ ರೇವೂರ ಕುಟುಂಬದ ಮೇಲೆ ಆರೋಪ, ಮಾಡುತ್ತಿರುವುದು ಸರಿಯಲ್ಲ. ಪೊಲೀಸ್​ ಠಾಣೆಗೆ ಆಗಮಿಸಿ, ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿ, ಧರ್ಪ ತೋರಿದವರ ವಿರುದ್ಧ ಕೂಡಲೇ ಕೇಸ್​ ಹಾಕಬೇಕು ಎಂದು ಆಗ್ರಹಿಸಿದರು.
ಗೊಡ್ಡು ಬೆದರಿಕೆಗಳಿಗೆ ಬಗ್ಗುವುದಿಲ್ಲ. ಸೋಮವಾರ ಬೆಳಗ್ಗೆ 11ಕ್ಕೆ ಇಡೀ ವೀರಶೈವ ಲಿಂಗಾಯತ ಸಮುದಾಯದವರು ಸೇರಿ ಪೊಲೀಸ್​ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು. ಸಾಮಾಜಿಕ ಜಾಲತಾಣದಲ್ಲಿ ಬಾಯಿಗೆ ಬಂದಂತೆ ಮಾತಾಡಿದವರ ವಿರುದ್ಧ ಕೇಸ್​ ದಾಖಲಿಸಬೇಕು. ಇಡೀ ವೀರಶೈವ ಲಿಂಗಾಯತ ಸಮಾಜ ಅಪ್ಪುಗೌಡರ ಜತೆಗಿದೆ ಎಂದರು.
ಮುಖಂಡ ಶಾಂತು ದುಧನಿ ಮಾತನಾಡಿ, ವೀರಶೈವ ಲಿಂಗಾಯತ ಸಮಾಜದ ಮುಖಂಡರ ಮೇಲೆ ಅನ್ಯಕೋಮಿನ ಜನರು ಮಾತನಾಡುತ್ತಿರುವುದು ಸರಿ ಕಾಣುವುದಿಲ್ಲ. ಕಾನೂನು ರೀತಿ ಹೋರಾಟ ನಡೆಸಲಿ. ಅವಾಚ್ಯ ಶಬ್ಧಗಳಿಂದ ನಿಂದನೆ ಸಹಿಸುವುದಿಲ್ಲ. ನಮ್ಮಲ್ಲೂ ಬೈಕ್​ ಇದೆ, ಯುವ ಜೋಶ್​ ಇದೆ. ಎಚ್ಚರಿಕೆ ಸಂದೇಶ ನೀಡುತ್ತಿದ್ದು, ಸುಮ್ಮನಿದ್ದರೆ ಸರಿ ಇಲ್ಲದಿದ್ದರೆ ನಾವು ರಸ್ತೆಗೆ ಇಳಿಯಬೇಕಾಗುತ್ತದೆ ಎಂದರು.
ಮುಖಂಡ ಚನ್ನಪ್ಪ ಡಿಗ್ಗಾವಿ ಮಾತನಾಡಿ, ಮಾತಿನ ವಾಸ್ತವ ತಿಳಿಯದೇ ಬೇಕಾಬಿಟ್ಟಿ ಮಾತು ಸಹಿಸುವುದಿಲ್ಲ. ಕಾನೂನು ಮೂಲಕ ಹೋರಾಟಕ್ಕೆ ಬರಲಿ. ಅದನ್ನು ಬಿಟ್ಟು ಕೋಮು ಸೌಹಾರ್ದತೆಗೆ ಧಕ್ಕೆ ತಂದರೆ, ಅದೇ ದಾಟಿಯಲ್ಲಿ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರಮುಖರಾದ ಶರಣು ಟೆಂಗಳಿ, ಶರಣು ಸಜ್ಜನ್​, ರವಿ ಮಹಾಗಾಂವ, ಶಿವಲಿಂಗ ಪಾಟೀಲ್​, ಆನಂದ ಲೇಂಗಟಿ, ರವೀಂದ್ರ ಮುತ್ತಿನ, ಭಾಗಣ್ಣ ಸ್ವಾದಿ, ಸತೀಶ ಜಮಖಂಡಿ, ವೀರಣ್ಣ ಅವರಾದಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net