

ಮಳಖೇಡ: ಸಾಮರಸ್ಯದ ಸಂಕೇತವಾದ ಮಳಖೇಡದ ಐತಿಹಾಸಿಕ ರಾಷ್ಟ್ರಕೂಟರ ಕೋಟೆ ಅಭಿವೃದ್ಧಿಗೆ ಸದಾ ಬದ್ಧ. ಇದನ್ನು ಪ್ರವಾಸಿ ತಾಣವಾಗಿಸಲು ಶ್ರಮಿಸುವುದಾಗಿ ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ರಾಷ್ಟ್ರಕೂಟರ ಕೋಟೆ ಆವರಣದಲ್ಲಿ ಭಾನುವಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ 6 ಕೋಟಿ ರೂ. ವೆಚ್ಚದಲ್ಲಿ ಕೋಟೆ ಸಂರಕ್ಷಣಾ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿ, 20 ಎಕರೆ ವಿಸ್ತಿರ್ಣ ಹೊಂದಿದ ಕೋಟೆ ಅಭಿವೃದ್ಧಿಗೆ 2024ರಲ್ಲಿ 34 ಕೋಟಿ ರೂ. ಸರ್ಕಾರ ಅನುಮೋದನೆ ನೀಡಿತ್ತು. ಈಗ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅಲ್ಲದೇ ಕೋಟೆಯಲ್ಲಿ ಅರಣ್ಯ ಇಲಾಖೆಯಿಂದ 3 ಕೋಟಿ ರೂ. ವೆಚ್ಚದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದರು.
ಕಾಡಾ ಮಾಜಿ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಡಿಎಚ್ಒ ಡಾ.ಸಿದ್ದು ಪಾಟೀಲ್, ಟಿಎಚ್ಒ ಡಾ.ಸಂಜೀವಕುಮಾರ ಪಾಟೀಲ, ಡಿವೈಎಸ್ಪಿ ಸಂಗಮನಾಥ ಹಿರೇಮಠ, ಎಇಇ ವಿಶ್ವನಾಥ, ಪಿಡಿಒ ಸಂದೀಪ ಗುತ್ತೇದಾರ್, ಪ್ರಮುಖರಾದ ರಾಜಶೇಖರ ಪುರಾಣಿಕ, ಬಸವರಾಜ ರೇವಗೊಂಡ, ರವಿ ನಂದಿಗಾಮ, ಜಗದೇವಪ್ಪ ಹಾಗರಗಿ, ದಿನೇಶ ಸಣ್ಣೂರ, ಮಿರ್ಜಾ ಅಲಿಬೇಗ್, ಜಗನ್ನಾಥ ಚಿಂತಪಳ್ಳಿ, ನಾಗರಾಜ ನಂದೂರ, ದೇವಿಂದ್ರಪ್ಪ ಹಳಿಜೋಳ, ಅಲಿಆಗಾ ಜಹಾಗಿರದಾರ, ವೀರೇಂದ್ರ ರುದ್ನೂರ, ಭೀಮರಾವ ಮಾಲಿಪಾಟೀಲ್, ಶ್ರೀನಿವಾಸ ಸಂಗಾವಿ, ಶರಣಯ್ಯ ಸ್ಥಾವರಮಠ, ಭೀಮರಾವ ಜಗತಿ, ರವಿ ತೇಗಲತಿಪ್ಪಿ, ಶೇಖಯ್ಯ ಮಠಪತಿ, ಜಹಿರೋದ್ದಿನ್, ದೇವಾನಂದ ಪಿಲ್ಲಿ, ಮಲ್ಲಪ್ಪ ಆರಬೋಳ, ಅಮ್ಜದ್ಖಾನ್, ತೌಸಿಫ್ಖಾನ್ ಇತರರಿದ್ದರು.
ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ 2 ಕೋಟಿ ರೂ. ವೆಚ್ಚದ ನರ್ಸ್ ಮತ್ತು ಡಿ. ಗ್ರೂಪ್ ನೌಕರರ ವಸತಿಗೃಹಗಳ ನಿರ್ಮಾಣ ಕಾಮಗಾರಿ ಹಾಗೂ 30 ಲಕ್ಷ ರೂ.ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ ಕನಕ ಭವನ ಉದ್ಘಾಟಿಸಲಾಯಿತು. ತಾಪಂ ಇಒ ಸೈಯದ್ ಪಟೇಲ್ ಸ್ವಾಗತಿಸಿ, ನಿರೂಪಣೆ ಮಾಡಿದರು. ಪುರಾತತ್ವ ಇಲಾಖೆ ಉಪ ನಿರ್ದೇಶಕಿ ಡಾ.ಸಿ.ಎನ್.ಮಂಜುಳಾ ಪ್ರಾಸ್ತಾವಿಕ ಮಾತನಾಡಿದರು. ದೇವಾನಂದ ಪುರಾಣಿಕ ವಂದಿಸಿದಿರು.