ಚೋಟಾ ಪಾಕಿಸ್ತಾನ ಹೇಳಿಕೆ: ದತ್ತಾತ್ರೇಯ ಪಾಟೀಲ್​ ವಿರುದ್ಧ ಕೇಸ್​

 Dattatreya Patil revoor
Dattatreya Patil revoor
Published on

ಪ್ರಮುಖ ಮುಖ್ಯಾಂಶಗಳು

  • ಆಳಂದ ಲಾಡ್ಲೇ ಮಶಾಕ್​ ಗಲಭೆಕೋರರ ವಿರುದ್ಧ ಕೇಸ್​ ಹಿಂಪಡೆದಿದ್ದು ಖಂಡಿಸಿ ಪ್ರತಿಭಟನೆಯಲ್ಲಿ ಭಾಷಣ
  • ದ್ವೇಷ ಭಾಷಣ ಮಾಡಿ, ಕೋಮುದ್ವೇಷ ಹರಡಿ ಸೌಹಾರ್ದತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪ
ಕಲಬುರಗಿ: "ಖಮರುಲ್​ ಇಸ್ಲಾಂ ಗುಲ್ಬರ್ಗ ನಗರವನ್ನು ಮಿನಿ ಪಾಕಿಸ್ತಾನ ಮಾಡಲು ಯತ್ನಿಸಿದ್ದರು ಎನ್ನುವ ಮೂಲಕ ಪ್ರಚೋದನಾಕಾರಿ, ದ್ವೇಷಪೂರಿತ ಭಾಷಣ ಮಾಡಿದ್ದಾರೆ ಎಂದು ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ (ಅಪ್ಪುಗೌಡ) ವಿರುದ್ಧ ನಗರದ ಸ್ಟೇಷನ್​ ಬಜಾರ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರ್ಗಾ ಪ್ರದೇಶದ ಖಮರ್​ ಕಾಲನಿಯ ದರ್ಗಾ ಏರಿಯಾದ ಅಜಗರ್​ ಹುಸೇನ್​ ದೂರು ನೀಡಿದ್ದಾರೆ. ಆಳಂದ ಗಲಭೆಕೋರರ ವಿರುದ್ಧದ ಪ್ರಕರಣ ವಾಪಸ್​ ತೆಗೆದುಕೊಂಡಿದ್ದು, ಖಂಡಿಸಿ ಇತ್ತೀಚೆಗೆ ನಗರದಲ್ಲಿ ಭಾರತೀಯ ಜನತಾ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭನೆಯಲ್ಲಿ ಭಾಷಣ ಮಾಡುವ ವೇಳೆ "ಖಮರುಲ್​ ಇಸ್ಲಾಂ ಗುಲ್ಬರ್ಗ ನಗರವನ್ನು ಮಿನಿ ಪಾಕಿಸ್ಥಾನ ಮಾಡಲು ಯತ್ನಿಸಿದ್ದರು. ಅದಕ್ಕೆ ಅವರು ಚುನಾವಣೆಯಲ್ಲಿ ಸೋತ್ತಿದ್ದಾರೆ ಎಂದು ದ್ವೇಷಪೂರಿ, ಪ್ರಚೋದನಕಾರರಿ ಭಾಷಣ ಮಾಡಿ, ಕೋಮು ಸೌಹಾರ್ದತೆಗೆ ಧಕ್ಕೆ ತಂದಿದ್ದಾರೆ ಎಂದು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net