ಗೌಡನಹಳ್ಳಿ ರೈತ ಕುಟುಬಗಳಿಂದ ಹೊಲಗಳಿಗೆ ತೆರಳಲು ರಸ್ತೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ

Farmers protest
Farmers protest
Published on
ಕಲಬುರಗಿ: ನಗರದ ಜಿಲ್ಲಾಧಿಕಾರಿ ಕಚೇರಿಯ ಬಳಿ ಚಿಂಚೋಳಿ ತಾಲೂಕಿನ ಗೌಡನಹಳ್ಳಿ ರೈತರು ಗಾರಂಪಳ್ಳಿ ಕಡೆ ಹೋಗುವ ಕಾಲುಧಾರಿ - ಬಂಡಿ ಹಾದಿ ಕಲ್ಪಿಸುವಂತೆ ಮೂರು ದಿನಗಳಿಂದ ಅರ್ನಿಧಿಷ್ಟ ಧರಣಿ ಸತ್ಯಾಗ್ರಹ ಮುಂದುವರೆದಿದೆ.
ತಾಲೂಕಿನ ಗೌಡನಹಳ್ಳಿ ಗ್ರಾಮದ ಬಳಿ ಸಣ್ಣ ನೀರಾವರಿ ಇಲಾಖೆಯು ಅವೈಜ್ಞಾನಿಕ ಬ್ರೀಜ್ ಕಂ. ಬ್ಯಾರೇಜ್ ನಿರ್ಮಿಸಿ ಕಾಲು ಧಾರಿ - ಬಂಡಿ ಹಾದಿ ನುಂಗಿದ ಅಧಿಕಾರಿಗಳಿಂದ ಕಳೆದ 9 ವರ್ಷಗಳಿಂದ ಹಾದಿ ಇಲ್ಲದೆ ರೈತರು ಕಣ್ಣಿರಿನಲ್ಲಿ ಕೈ ತೊಳೆಯುವಂತಾಗಿದೆ. ನೊಂದ ರೈತರಿಗೆ ನ್ಯಾಯ ದೊರೆಯುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೈತ ಇಸ್ಮಾಯಿಲ್ ಸಾಬ್ ಸರಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಕೂಡಲೇ ನಮಗೆ ನಮ್ಮ ಜಮೀನಿನಲ್ಲಿ ಉಳಿಮೆ ಮಾಡಲು ರಸ್ತೆ ಕಲ್ಪಿಸಬೇಕು. ಸಣ್ಣ ನೀರಾವರಿ ಅಧಿಕಾರಿಗಳಿಂದ ಅವೈಜ್ಞಾನಿಕ ಬ್ರೀಜ್ ಕಂ. ಬ್ಯಾರೇಜ್ ನಿರ್ಮಿಸಿದ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ರೈತರ ಸಭೆ ನಡೆಸಿ ಎಲ್ಲಾ ರೈತರ ಜಮೀನುಗಳಿಗೆ ಸಂಚರಿಸಲು ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ಕಾಲು ಧಾರಿ ಕಲ್ಪಿಸಬೇಕು ಎಂಬ ಬೇಡಿಕೆಗಳೊಂದಿಗೆ ಹೋರಾಟ ಮುಂದುವರೆದಿದೆ.
ಈ ಹೋರಾಟದಲ್ಲಿ ಉಸ್ಮಾನ ಅಲಿ, ಮೈಬೂಬ ಸಾಬ್, ಸಲೀಮ ಸಾಬ್, ಜ್ಞಾನಸಬಾಯಿ ಸೇರಿದಂತೆ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net