ಚೆಕ್​ ಕದ್ದು, ರು.5 ಲಕ್ಷ ಡ್ರಾ

cheque-stolen
cheque-stolen
Published on
ಕಲಬುರಗಿ: ಬೇರೊಬ್ಬರ ಚೆಕ್​ ಕದ್ದ ಅನಾಮಿಕ ಐದು ಲಕ್ಷ ರೂ. ಡ್ರಾ ಮಾಡಿಕೊಂಡ ಟನೆ ನಗರದ ಗಂಜ್​ ಪ್ರದೇಶದಲ್ಲಿರುವ ಕೆನರಾ ಬ್ಯಾಂಕ್​ನಲ್ಲಿ ನಡೆದಿದೆ. ಪದ್ಮಾ ಮಂದೇವಾಲ್​ ಹಣ ಕಳೆದುಕೊಂಡವರು. ಪದ್ಮಾ ಅವರ ಹೆಸರಿನ ಚೆಕ್​ನ್ನು ಕದ್ದಿರುವ ಅನಾಮಿಕ, ಅವರ ನಕಲಿ ಸಹಿ ಮಾಡಿ, ಐದು ಲಕ್ಷ ರೂ.ವನ್ನು ಖಾತೆಯಿಂದ ಡ್ರಾ ಮಾಡಿಕೊಂಡು ಪರಾರಿಯಾಗಿದ್ದಾನೆ. ಜಯದೇವ ಆಸ್ಪತ್ರೆಯಲ್ಲಿ ಸ್ಟ್​ಾ ನಸ್​ ಆಗಿದ್ದು, ಮನೆಯಲ್ಲಿದ್ದಾಗ ಐದು ಲಕ್ಷ ರೂ. ವಿಥ್​ ಡ್ರಾ ಆಗಿದ್ದ ಸಂದೇಶ ಮೊಬೈಲ್​ಗೆ ಬಂದಿದೆ. ಆಗ ಬ್ಯಾಂಕ್​ಗೆ ಹೋಗಿ ಪರಿಶೀಲಿಸಿದಾಗ ಯಾರೋ ವ್ಯಕ್ತಿ ಸಹಿ ಚೆಕ್​ ನೀಡಿ, ಹಣ ಡ್ರಾ ಮಾಡಿಕೊಂಡಿದ್ದಾರೆ ಎಂದು ಬ್ಯಾಂಕ್​ ಸಿಬ್ಬಂದಿ ತಿಳಿಸಿದ್ದಾರೆ. ಆಗ ನಕಲಿ ಸಹಿ ಮಾಡಿ, ಡ್ರಾ ಮಾಡಿದ್ದು ತಿಳಿದು ಬಂದಿದೆ. ಈ ಬಗ್ಗೆ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net