ಕಲಬುರಗಿ: ದೇಶದಲ್ಲಿ ವೈದ್ಯಕಿಯ ಶಿಕ್ಷಣದ ಅವಕಾಶ ಹೆಚ್ಚಿಸುವುದರ ಜತೆ ವಿಸ್ತರಣೆ, ಆರೋಗ್ಯ ಸೇವೆಗಳ ಗುಣಮಟ್ಟ ಸುಧಾರಣೆಗೂ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯರೂ ಆದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಶೀಲ್ ಜಿ.ನಮೋಶಿ ಹೇಳಿದರು.
ಎಂಆರ್ಎಂಸಿ ಸ್ಯಾಕ್ ಸಭಾಂಗಣದಲ್ಲಿ ಎಚ್ಕೆಇ ಸಂಸ್ಥೆಯ ಡಾ.ಮಾಲಕರೆಡ್ಡಿ ಹೋಮಿಯೋಪಥಿಕ್ ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆ ಶನಿವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭ ಮತ್ತು ವಾರ್ಷಿಕ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, 2029ರ ವೇಳೆಗೆ ದೇಶದಲ್ಲಿ 75 ಸಾವಿರಕ್ಕೂ ಹೆಚ್ಚು ಎಂಬಿಬಿಎಸ್ ಸೀಟು, 2030ರ ವೇಳೆಗೆ ವೈದ್ಯಕಿಯ ಕಾಲೇಜುಗಳ ಸಂಖ್ಯೆ 2 ಸಾವಿರಕ್ಕೆ ಹೆಚ್ಚಿಸುವ ಉದ್ದೇಶವಿದೆ ಎಂದರು.
2014ರಲ್ಲಿ ದೇಶದಲ್ಲಿ 370 ವೈದ್ಯಕಿಯ ಕಾಲೇಜುಗಳಿದ್ದವು. ಕಳೆದ ಒಂದು ದಶಕದಲ್ಲಿ ವೈದ್ಯಕಿಯ ಶಿಕ್ಷಣ ಕ್ಷೇತ್ರದ ವಿಸ್ತರಣೆಗೆ ಒತ್ತು ನೀಡಿದ್ದರಿಂದ ಪ್ರಸ್ತುತ ವೈದ್ಯಕಿಯ ಕಾಲೇಜುಗಳ ಸಂಖ್ಯೆ 850ಕ್ಕೆ ಏರಿಕೆಯಾಗಿದೆ. ಇದರಿಂದ ವೈದ್ಯಕಿಯ ಶಿಣ ಪಡೆಯಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಸಿಗುವಂತಾಗಿದೆ ಎಂದು ಹೇಳಿದರು.
ಕರ್ನಾಟಕ ವಿಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪೊ.ಎ.ಎಚ್. ರಾಜಾಸಾಬ್ ಮಾತನಾಡಿ, ದೇಶದಲ್ಲಿ ಆಯುರ್ವೇದ, ಹೋಮಿಯೋಪಥಿ, ಯುನಾನಿ ಸೇರಿ ಹಲವು ವೈದ್ಯಕಿಯ ಪದ್ಧತಿಗಳು ಜನರಿಗೆ ಸೇವೆ ನೀಡುತ್ತಿವೆ. ವಿವಿಧ ಚಿಕಿತ್ಸಾ ಪದ್ಧತಿಗಳಲ್ಲಿರುವ ಉತ್ತಮ ಅಂಶಗಳನ್ನು ವೈಾನಿಕವಾಗಿ ಬಳಸಿಕೊಳ್ಳುವ ಮೂಲಕ ಆರೋಗ್ಯ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿ ಆಗಿಸಬೇಕು ಎಂದು ಸಲಹೆ ನೀಡಿದರು.
ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ.ಸಂದೀಪ್ ಹರ್ಷಂಗಿ ಮಾತನಾಡಿದರು. ಸಂಸ್ಥೆ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಆಡಳಿತ ಮಂಡಳಿ ಸದಸ್ಯ ಅರುಣಕುಮಾರ ಎಂ.ವೈ.ಪಾಟೀಲ್, ಡಾ.ಎಸ್.ಆರ್. ಹೊಟ್ಟಿ, ಡಾ.ನಾಗೇಂದ್ರ ಮಂಠಾಳೆ, ಕಾಲೇಜಿನ ಪ್ರಾಚಾರ್ಯ ಡಾ.ಸತೀಶ ಕಲಶೆಟ್ಟಿ, ಉಪ ಪ್ರಾಚಾಯೆರ್ ಡಾ.ವೀಣಾ ಟಿ.ಎನ್., ಉಪ ವೈದ್ಯಕಿಯ ಅಧೀಕ್ಷಕ ಡಾ.ಸಾಗರ್ ಇತರರಿದ್ದರು. ಹೋಮಿಯೋಪಥಿಕ್ ವೈದ್ಯಕಿಯ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ವಿತರಿಸಲಾಯಿತು.