ಕಲಬುರಗಿ: ಚಿತ್ತಾಪುರ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ್ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಕೆಎಸ್ಆರ್ಟಿಸಿ ಕಾಲೊನಿಯ ಸಾಮಾಜಿಕ ಕಾರ್ಯಕರ್ತ ಸಿದ್ದಾರೂಢ ಕಾಂಬಳೆ ದೂರು ನೀಡಿದ್ದಾರೆ. ಜು.17ರಂದು ತಮ್ಮ ಸ್ನೇಹಿತರೊಂದಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಕ್ಯಾಂಟೀನ್ ಮುಂದೆ ಕುಳಿತಿದ್ದಾಗ ಅವರ ವಾಟ್ಸಾಪ್ಗೆ ಲಂಬಾಣಿ ಭಾಷೆಯ ಆಡಿಯೋ ಸಂದೇಶವೊಂದು ಬಂದಿತ್ತು. ಆ ಧ್ವನಿ ಮಣಿಕಂಠ ರಾಠೋಡ್ನದ್ದು ಆಗಿತ್ತು. ಅದನ್ನು ಸ್ನೇಹಿತ ರಾಮು ರಾಠೋಡ್ ಮೂಲಕ ಭಾಷಾಂತರಿಸಿ ಕೇಳಿದಾಗ ಜಾತಿ ನಿಂದನೆ ಮಾಡಿ, ಜಾತಿ ಜಾತಿಗಳ ನಡುವೆ ವೈಷಮ್ಯ ಬಿತ್ತಿ ಕೋಮು ಗಲಭೆ ಸೃಷ್ಟಿಸುವ ಉದ್ದೇಶದಿಂದ ಈ ಆಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.