ಶೂಟ್ ಮಾಡಿಕೊಂಡು ಕಲಬುರಗಿಯಲ್ಲಿ ಕರ್ತವ್ಯ ನಿರತ ಪೊಲೀಸ್ ಪೇದೆ ಸಾವು

Car police constable sucide shootout
Car police constable sucide shootout
Published on
ಕಲಬುರಗಿ: ಕರ್ತವ್ಯ ನಿರತ ಸಿಎಆರ್ ಪೊಲೀಸ್ ಪೇದೆಯೊಬ್ಬರೂ ಪೊಲೀಸ್ ವಾಹನದಲ್ಲೇ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೃದಯ ಭಾಗದ ಜಗತ್ ವೃತ್ತದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಸಿಎಆರ್ ಪೇದೆ ಶಿವಕುಮಾರ್ ಮಾವನೂರ (32) ಆತ್ಮಹತ್ಯೆ ಮಾಡಿಕೊಂಡವ. ಜೇವರ್ಗಿ ತಾಲೂಕಿನ ಮಾವನೂರ ಗ್ರಾಮದವರು ಎಂದು ತಿಳಿದು ಬಂದಿದೆ. 2016ರ ಬ್ಯಾಚ್ ನ ಪೇದೆಯಾಗಿದ್ದು, ಕರ್ತವ್ಯ ನಿರ್ವಹಿಸಲು ನೀಡಿದ 7.62 ಗನ್ ನಿಂದ ಶೂಟ್ ಮಾಡಿಕೊಂಡಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನಿಂದ ಕಲಬುರಗಿಗೆ ವರ್ಗಾವಣೆ ಆಗಿ ಬಂದಿದ್ದ ಎನ್ನಲಾಗಿದೆ.
ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ, ಡಿಸಿಪಿಗಳಾದ ಶಾಲೂ, ಪ್ರವೀಣ ನಾಯಕ, ಎಸಿಪಿ ಶರಣಪ್ಪ ಸುಬೇದಾರ, ಪಿಐಗಳಾದ ಮಹಾಂತೇಶ ಪಾಟೀಲ್, ಆರ್ ಪಿಐ ಮಹಾದೇವ ಪಾಟೀಲ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದರು. ಬ್ರಹ್ಮಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಜನ್ಮದಿನದ ಮರುದಿನವೇ ಆತ್ಮಹತ್ಯೆ
1994 ಜೂನ್ 6ರಂದು ಜನಿಸಿದ್ದು, ಕಲಬುರಗಿ ನಗರದ ರಾಮ ಮಂದಿರದ ಬಳಿ ಸ್ವಂತ ಮನೆ ಹೊಂದಿದ್ದು, ಶಹಾಪುರ ತಾಲೂಕಿನವರು ಎಂದು ತಿಳಿದು ಬಂದಿದೆ.
ಮಂಗಳವಾರ ಸಂಜೆ 9ಗಂಟೆ ಸುಮಾರಿಗೆ ಕರ್ತವ್ಯ ನಿರತ ವಾಹನದಲ್ಲೆ ರೈಫಲ್ ನಿಂದ ಶೂಟ್ ಮಾಡಿಕೊಂಡಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ವೈಯಕ್ತಿಕ ಕಾರಣ ಎಂದು ತಿಳಿದು ಬಂದಿದ್ದು, ಕುಟುಂಬಸ್ಥರು ನೀಡುವ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗುವುದು.
! ಡಾ.ಶರಣಪ್ಪ ಎಸ್.ಡಿ.,
ನಗರ ಪೊಲೀಸ್ ಆಯುಕ್ತ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net