ಪೊಲೀಸ್ ಠಾಣೆಯಲ್ಲೆ ಲಂಚ: ಗೃಹ ಸಚಿವರ ತವರಲ್ಲೆ ಲೋಕಾ ಬಲೆಗೆ ಪೇದೆಗಳು

Lokayukth trap
Lokayukth trap
Published on
ಕಲಬುರಗಿ: ಎಂಓಬಿ ಬಳಿ ಲಂಚ ಪಡೆಯುತ್ತಿದ್ದ ವೇಳೆ ಪೊಲೀಸ್ ಪೇದೆಗಳಿಬ್ಬರೂ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಓರ್ವ ಪರಾರಿಯಾಗಿದ್ದ, ಇನ್ನೊಬ್ಬ ಪೇದೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತವರಲ್ಲೇ ನಡೆದಿದೆ.
ಕಲಬುರಗಿಯ ಬ್ರಹ್ಮಪೂರ ಪೊಲೀಸ್ ಠಾಣೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಕಾನ್ಸಟೇಬಲ್ ಪರಶುರಾಮ್ , ಲೋಕಾ ಬಲೆಗೆ ಬಿದ್ದಿದ್ದು, ಇನ್ನೊಬ್ಬ ಕಾನ್ಸಟೇಬಲ್ ವೀರೇಶ್ ಲೋಕಾ ದಾಳಿ ವೇಳೆ ಪರಾರಿಯಾಗಿದ್ದಾನೆ.
20 ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಪರಶುರಾಮ ಬಲೆಗೆ ಬಿದ್ದಿದ್ದಾನೆ. ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಕ್ರೈಂ ಕಾನ್ಸಟೇಬಲ್ ಗಳಾಗಿದ್ದರು.
ನಗರದ ಹೃದಯ ಭಾಗದಲ್ಲೆ ಇರುವ ಸೂಪರ್ ಮಾರ್ಕೆಟ್ ನಲ್ಲಿನ ಪೊಲೀಸ್ ಠಾಣೆಯ ಹಿಂಭಾಗದಲ್ಲೆ ಲಂಚ ಪಡೆಯುವಾಗ ದಾಳಿ ನಡೆಸಲಾಗಿದೆ.
20 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಹಣ ಕೊಡದಿದ್ರೆ ಗಡಿ ಪಾರು ಮಾಡುವುದಾಗಿ ಬೆದರಿಕೆ ಹಾಕಿದ್ದ ಇಬ್ಬರು.
ಹೀಗಾಗಿ ಹಣ ಕೊಡಲು ಒಪ್ಪಿಕೊಂಡಿದ್ದ ಇಬ್ಬರು. 20 ಸಾವಿರ ಲಂಚ ಪಡೆಯುವಾಗ ಇಬ್ಬರೂ ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net