ಡಾ.ಖಂಡ್ರೆ ಕರುನಾಡಿನ ಅಪರೂಪದ ರಾಜಕೀಯ ಮುತ್ಸದ್ಧಿ. ದಿಗ್ಗಜ ನಾಯಕ. ರಾಜ್ಯದ ಬೆರಳೆಣಿಕೆಯ ಮೊದಲನೇ ತಲೆಮಾರಿನ ನೇತಾರರಲ್ಲಿ ಖಂಡ್ರೆ ಹೆಸರು ಅಗ್ರಪಂಕ್ತಿಯಲ್ಲಿ ಅಚ್ಚೊತ್ತಿದೆ. ಇವರ ಅಸಾಮಾನ್ಯ ಸಾಧನೆ ಭಾಲ್ಕಿಯಿಂದ ದಿಲ್ಲಿವರೆಗೂ ವ್ಯಾಪಿಸಿದೆ. ಇವರ ಶ್ರೇಷ್ಠ ವಿಚಾರ, ಮೌಲಿಕ ಚಿಂತನೆ, ಸಮಾಜವಾದಿ ಸಿದ್ಧಾಂತ, ಜನಸೇವೆಗಾಗಿ ಮಿಡಿದ ಹೃದಯ, ಸರಳ ವ್ಯಕ್ತಿತ್ವವನ್ನು ವಿರೋಗಳು ಸಹ ಮೆಚ್ಚುತ್ತಾರೆ. ಹೀಗಾಗಿ ಲೋಕನಾಯಕ ಮಾತ್ರವಲ್ಲ, ಅಜಾತಶತ್ರು ನಾಯಕರೂ ಹೌದು.