

ಪ್ರಮುಖ ಮುಖ್ಯಾಂಶಗಳು
ಖಾಸಗಿ ದೂರು ಹಿಂಪಡೆತ? ಲಾಡ್ಲೇ ಮಶಾಕ್ ದರ್ಗಾದಲ್ಲಿನ ರಾವ ಚೈತನ್ಯ ಶಿವಲಿಂಗ ಶುದ್ಧೀಕರಣದ ವೇಳೆ ನಡೆದ ಕೋಮು ಗಲಭೆ, ಕೇಂದ್ರ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಎಸಿ, ಪೊಲೀಸರು ಸೇರಿ ಹಿಂದು ಮುಖಂಡರ ಮೇಲೆ ದಾಳಿ ಕುರಿತು ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿದ್ದು, ಅದನ್ನು ಹಿಂಪಡೆಯಲಾಗಿದೆ. ಆದರೆ ಅದೇ ಟನೆ ವೇಳೆ ದಾಖಲಾಗಿದ್ದ ಎರಡು ಖಾಸಗಿ ಪ್ರಕರಣಗಳನ್ನು ಹಿಂಪಡೆದಿದ್ದು, ಯಾವ ನಿಯಮದ ಅಡಿ ಎಂಬುದು ಹಿಂದು ಮುಖಂಡರ ಪ್ರಶ್ನೆಯಾಗಿದೆ. ಬಿಜೆಪಿ ಮುಖಂಡ, ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ್ ಕಾರ್ ಚಾಲಕ ನೀಡಿದ ದೂರು ಮತ್ತು ಪತ್ರಕರ್ತ ಪ್ರಕಾಶ ಜಂಗಲೆ ನೀಡಿದ ಖಾಸಗಿ ಪ್ರಕರಣವನ್ನು ಹಿಂಪಡೆದಿದ್ದು, ಹೇಗೆ ಎಂಬ ಪ್ರಶ್ನೆ ಮೂಡಿದೆ. |
|---|