ಆದರೆ ಒಳಗೊಳಗೇ ಪರೀಕ್ಷೆ ಫಲಿತಾಂಶದ ಬಗ್ಗೆ ಆತಂಕ ಇತ್ತೋ ಏನೋ ತಿಳಿಯದು. ಡೆತ್ನೋಟ್ ಬರೆದಿಲ್ಲ, ಕಾರಣವೂ ಹೇಳಿಲ್ಲ. ಕುಟುಂಬಸ್ಥರ ಜತೆ ಚೆನ್ನಾಗಿಯೇ ಇದ್ದಳು. ನಾವು ಯಾರ ಮೇಲೆ ದೂರೋಣ? ಯಾರ ಮೇಲೂ ಆಪಾದನೆ ಮಾಡುವುದಿಲ್ಲ ಎಂದು ಮೃತಳ ತಂದೆ ರಾಜಶೇಖರ ಕಣ್ಣೀರಿಟ್ಟಿದ್ದಾರೆ. ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.