ಭಗವಂತನ ಸ್ಮರಣೆಯಿಂದ ಸಂಸ್ಕಾರಯುತ ಜೀವನ

ಸೇಡಂನಲ್ಲಿ ಶ್ರೀ ಸಪ್ಪಣ್ಣಾರ್ಯ ಶಿವಯೋಗಿಗಳ 109ನೇ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಲಾದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ ಚರಿತಾಮೃತ ಪ್ರವಚನ ಮಾಲಿಕೆಯನ್ನು ಶ್ರೀ ಶಿವಶಂಕರ ಶಿವಾಚಾರ್ಯರು ಉದ್ಘಾಟಿಸಿದರು. ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಪಂಚಾಕ್ಷರ ಸ್ವಾಮೀಜಿ, ಶ್ರೀ ಗುರುಸಿದ್ದೇಶ್ವ ಶಿವಾಚಾರ್ಯರು ಇದ್ದರು.
ಸೇಡಂನಲ್ಲಿ ಶ್ರೀ ಸಪ್ಪಣ್ಣಾರ್ಯ ಶಿವಯೋಗಿಗಳ 109ನೇ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಲಾದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ ಚರಿತಾಮೃತ ಪ್ರವಚನ ಮಾಲಿಕೆಯನ್ನು ಶ್ರೀ ಶಿವಶಂಕರ ಶಿವಾಚಾರ್ಯರು ಉದ್ಘಾಟಿಸಿದರು. ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಪಂಚಾಕ್ಷರ ಸ್ವಾಮೀಜಿ, ಶ್ರೀ ಗುರುಸಿದ್ದೇಶ್ವ ಶಿವಾಚಾರ್ಯರು ಇದ್ದರು.
Published on: 

ಸೇಡಂ: ಮಾನವನ ಬದುಕು ಉತ್ತಮವಾಗಿ ರೂಪುಗೊಳ್ಳಬೇಕಾದರೆ ಸಂಸ್ಕಾರಯುತ ಜೀವನ ಅವಶ್ಯ. ಅದಕ್ಕಾಗಿ ಸದಾ ಭಗವಂತನ ಸ್ಮರಣೆ ಆಗುವಂತಹ ಕಾರ್ಯಗಳಲ್ಲಿ ಹೆಚ್ಚು ಭಾಗವಹಿಸಬೇಕು ಎಂದು ಮಹಾರಾಷ್ಟ್ರ ಸುರಗೀಶ್ವರ ಮಠದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯರು ಹೇಳಿದರು.

ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಕಲ್ಯಾಣ ಮಂಟಪದಲ್ಲಿ ಶ್ರೀ ಸಪ್ಪಣ್ಣಾರ್ಯ ಶಿವಯೋಗಿಗಳ 109ನೇ ಪುಣ್ಯಸ್ಮರಣೆ ನಿಮಿತ್ತ ಗುರುವಾರ ರಾತ್ರಿ ಆಯೋಜಿಸಿದ್ದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ ಚರಿತಾಮೃತ ಪ್ರವಚನ ಮಾಲಿಕೆಯಲ್ಲಿ ಮಾತನಾಡಿ, ಮನುಷ್ಯ ಜೀವನ ಆನಂದಮಯ ಆಗಬೇಕಿತ್ತು, ಆದರೆ ಅಜ್ಞಾನ, ಆಸೆ, ದ್ವೇಷ, ಸ್ಪರ್ಧೆ ಹಾಗೂ ಸ್ವಾರ್ಥದಿಂದ ಕದನಮಯವಾಗುತ್ತಿದೆ. ಒಬ್ಬರನ್ನು ಮತ್ತೊಬ್ಬರೂ ಪ್ರೀತಿಸುವ ಗುಣ ಬೆಳೆಸಿಕೊಂಡು, ಜೀವನದ ನಿಜವಾದ ಉದ್ದೇಶ ಅರಿಯಬೇಕು ಎಂದರು.

ಮನಸ್ಸನ್ನು ಪರಿವರ್ತಿಸುವ ಶಕ್ತಿ ಪುರಾಣ, ಪ್ರವಚನ ಹಾಗೂ ಸತ್ಸಂಗಕ್ಕಿದೆ. ಪ್ರವಚನವನ್ನು ಆಲಿಸುವುದರಿಂದ ಜೀವನವನ್ನು ಸನ್ಮಾರ್ಗದಲ್ಲಿ ನಡೆಸಿಕೊಳ್ಳುವ ಪ್ರೇರಣೆ ದೊರೆಯುತ್ತದೆ. 84 ಲಕ್ಷ ಜೀವರಾಶಿಗಳಲ್ಲಿ ಮನುಷ್ಯನಿಗೆ ಅತ್ಯಂತ ಅನುಕೂಲಕರ ಜೀವನ ದೊರೆತಿದ್ದರೂ ಶಾಂತಿ, ಸಮಾಧಾನ ಮಾತ್ರ ಸಿಗುತ್ತಿಲ್ಲ. ಸತ್ಸಂಗ ಮತ್ತು ಮಹಾತ್ಮರ ಸಾನ್ನಿಧ್ಯದಲ್ಲಿ ಮಾತ್ರ ನೆಮ್ಮದಿ ಸಿಗಲು ಸಾಧ್ಯ ಎಂದು ಹೇಳಿದರು.

ಪ್ರವಚನ ಮಾಲಿಕೆಯನ್ನು ಶಿವಶಂಕರೇಶ್ವರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು ಉದ್ಘಾಟಿಸಿದರು. ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿದರು. ಹಾಲಪ್ಪಯ್ಯ ವಿರಕ್ತ ಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ ಸಮ್ಮುಖವಹಿಸಿದ್ದರು.

ಉಪನ್ಯಾಸಕಿ ಲ್ಮ ಹೆಬ್ಬಾಳ ಪ್ರಾರ್ಥಿಸಿದರು. ಜಗದೀಶ್ವರಿ ಯರಗೋಳ ಸ್ವಾಗತಿಸಿದರು. ಆರತಿ ಕಡಗಂಚಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net