ಸಾಂಸ್ಕೃತಿಕ ವೈಭವ: ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕಲಾ ತಂಡಗಳಿಂದ ಭರತನಾಟ್ಯ, ಜಾನಪದ ಹಾಗೂ ಸಮೂಹ ನೃತ್ಯಗಳ ವೈವಿಧ್ಯಮಯ ಪ್ರದರ್ಶನ ನಡೆದವು. ಪಂಚಾಕ್ಷರಿ ಸಂಗೀತ ಕಲಾತಂಡ, ಪ್ರಿಯಾ ನೃತ್ಯಾಲಯ, ವಿವಿಎನ್ ನೃತ್ಯ ಕಲಾತಂಡ, ಸೂರಜ್ ಲೋನಾರ ಕಲಾತಂಡ, ಶಾಂತಲೇ ಸಾಂಸತಿಕ ನೃತ್ಯ ತಂಡ, ಜ್ಯೋತಿ ಜಾನಪದ ಕಲಾತಂಡ, ಮನಸ್ವಿ ಸಾಂಸತಿಕ ನಾಟ್ಯ ಕಲಾತಂಡ ಹಾಗೂ ಜ್ಞಾನ ಸುರಭಿ ಕಲಾತಂಡಗಳ ಕಲಾವಿದರು ಅದ್ಭುತ ನೃತ್ಯ ಚಾತುರ್ಯದ ಮೂಲಕ ಪ್ರೇಕ್ಷಕರ ಮನಗೆದ್ದರು.