ಲಂಚಕೋರ ಅಧಿಕಾರಿಗಳಿಗೆ 4 ವರ್ಷ ಜೈಲು ಶಿಕ್ಷೆ

prison for corrupt officials
prison for corrupt officials
Published on
ಕಲಬುರಗಿ: ಹೊರಗುತ್ತಿಗೆ ನೌಕರನ ನೇಮಕಾತಿಗೆ ಶಿಫಾರಸು ಮಾಡಲು ಲಂಚ ಪಡೆದಿದ್ದ ಎಂಎಸ್​ಐಎಲ್​ ಕಚೇರಿಯ ಇಬ್ಬರು ಅಧಿಕಾರಿಗಳಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು ೪ ರ‍್ಷ ಜೈಲು ಶಿಕ್ಷೆ ಹಾಗೂ ತಲಾ ೨೦ ಸಾವಿರ ರೂ. ದಂಡ ವಿಧಿಸಿ ಸೋಮವಾರ ತರ‍್ಪು ನೀಡಿದೆ.
ಎಂಎಸ್​ಐಎಲ್​ನಲ್ಲಿ ಎ.ಡಿ.ಇ.ಓ ಆಗಿ ನೇಮಕಗೊಳ್ಳಲು ಸಿದ್ದಲಿಂಗ ಎಂಬುವವರು ರ‍್ಜಿ ಸಲ್ಲಿಸಿದ್ದರು. ಅವರ ನೇಮಕಾತಿಗೆ ಶಿಫಾರಸು ಮಾಡಲು ಡಿಎಲ್​ಓ ಚಂದ್ರಶೇಖರ ಸಲಾಕೆ ೧ ಲಕ್ಷ ರೂ. ಬೇಡಿಕೆಯಿಟ್ಟು, ಮುಂಗಡವಾಗಿ ೫೦ ಸಾವಿರ ರೂ. ಪಡೆದಿದ್ದರು. ಹಣವನ್ನು ಶಾಖಾ ವ್ಯವಸ್ಥಾಪಕ ಬಿ.ಕೃಷ್ಣಮರ‍್ತಿ ಅವರಿಗೆ ನೀಡುತ್ತಿದ್ದಾಗ ಲೋಕಾಯುಕ್ತ (ಅಂದಿನ ಎಸಿಬಿ) ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ನ್ಯಾಯಾಧೀಶ ಜಿ.ಎಲ್​. ಲಕ್ಷ್ಮೀನಾರಾಯಣ ಅವರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಶಿಕ್ಷೆ ಪ್ರಕಟಿಸಿದ್ದಾರೆ. ರ‍್ಕಾರದ ಪರ ವಿಶೇಷ ಅಭಿಯೋಜಕ ಅಶೋಕ ಎಸ್​. ಚಾಂದಕವಠ ವಾದ ಮಂಡಿಸಿದ್ದರು. ಅಂದಿನ ಪೊಲೀಸ್​ ಉಪ ಅಧೀಕ್ಷಕಿ ಸುಧಾ ಆದಿ ಪ್ರಕರಣ ದಾಖಲಿಸಿದ್ದರೆ, ಇನ್ಸ್​ಪೆಕ್ಟರ್​ ಮಹಮ್ಮದ ಇಸ್ಮಾಯಿಲ್​ ದೋಫಿಾರೋಪಣ ಪಟ್ಟಿ ಸಲ್ಲಿಸಿದ್ದರು. ಸಿಬ್ಬಂದಿ ಹಣಮಂತರಾಯ, ಗುಂಡುರಾವ ಸಾದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net