ಮೇ 13ರಂದು ಮೊಬೈಲ್ಗೆ ಆರ್ಟಿಒ ಇ&ಚಲನ್ ಆ್ಯಪ್ ಲಿಂಕ್ ಸಂದೇಶ ಬಂದಿದ್ದು, ಅದರ ಮೇಲೆ ಕ್ಲಿಕ್ ಮಾಡಿದ್ದು, ತಕ್ಷಣ ಮೊಬೈಲ್ ಹ್ಯಾಕ್ ಆಗಿ, ವಾಟ್ಸ್ಪ್ ಸಂಖ್ಯೆಯೂ ಹ್ಯಾಕ್ ಆಗಿದೆ. ಸುಮಾರು ಒಂದು ಗಂಟೆ ಮೊಬೈಲ್ ಬಳಸದಂತೆ ಹ್ಯಾಕ್ ಆಗಿದ್ದು, ರಾಜು ಅವರ ಕ್ರೆಡಿಟ್ ಕಾರ್ಡ್ನಿಂದ ಹಂತ ಹಂತವಾಗಿ 2.58 ಲಕ್ಷ ರೂ. ಕಡಿತವಾಗಿದೆ. ಸಂದೇಶ ಪರಿಶೀಲಿಸಿದಾಗ ಬಿಹಾರದ ರಾಜೇಶ ಮಿಶ್ರಾ ಸಿಂಗ್ ಎಂಬಾತ ಮೂರು ಮೊಬೈಲ್ಗಳನ್ನು ಖರೀದಿಸಿ, ತನ್ನ ವಿಳಾಸಕ್ಕೆ ತರಿಸಿಕೊಂಡಿದ್ದಾನೆ ಎಂಬುದು ತಿಳಿದಿದೆ. ಈ ಕುರಿತು ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.