ಕಲಬುರಗಿ ಕ್ಷೇತ್ರದಲ್ಲಿ ಬಿರುಸಿನ ಮತದಾನ : ಶೇಕಡಾ 10 ರಷ್ಟು ಮತ ಚಲಾವಣೆ

ಗುಲಬರ್ಗಾ ದಕ್ಷಿಣ ವಿಧಾನಸಬಾ ಕ್ಷೇತ್ರದ ಕೋಟನೂರ (ಡಿ) ಮತಗಟ್ಟೆಯಲ್ಲಿ ಯುವ ಮತದಾರು ಮೊದಲಬಾರಿಗೆ ಮತ ಚಲಾಯಿಸಿದರು.
IMG-20240507-WA0020
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಗುಲ್ಬರ್ಗ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನಿಂದ ಮತದಾನ ನಡೆದಿದೆ. ಆರಂಭದಲ್ಲಿ ಕೆಲ ತಾಂತ್ರಿಕ ತೊಂದರೆ ಎದುರಾಗಿದ್ದು ಬಿಟ್ಟರೆ ಅಂತಹ ಸಮಸ್ಯೆ ಕಂಡು ಬಂದಿಲ್ಲ.

ಬೆಳಗ್ಗೆ ಯಿಂದಲೇ ಜನರು ಮತ ಕೇಂದ್ರ ಕ್ಕೆ ಆಗಮಿಸ ಸರದಿಯಲ್ಲಿ ನಿಂತು ಹಕ್ಕು ಚಲಾಯಿಸುವ ಕೆಲಸ ಕಾಡುತ್ತಿರುವುದು ಕಂಡು ಬಂದಿದೆ. ಬೆಳಗ್ಗೆ 9 ಗಂಟೆಗೆ ಹೊತ್ತಿಗೆ ಜಿಲ್ಲೆಯಲ್ಲಿ ಶೇ.10 ರಷ್ಟು ಮತದಾನ ಆಗಿದೆ.

ಜಿಲ್ಲೆಯಾದ್ಯಂತ ವಿಶೇಷಚೇನತರು, ಹಿರಿಯ ನಾಗರಿಕರು ಮತ ಚಲಾಯಿಸಲು ಮತಗಟ್ಟೆಗೆ ಬಂದಾಗ ಸ್ವಯಂ ಸೇವಕರು ಸಹಾಯ ಮಾಡುತ್ತಿರುವುದು. ಎಲ್ಲೆಡೆ ರ‌್ಯಾಂಪ್, ವ್ಹೀಲ್ ಚೇರ್ ವ್ಯವಸ್ಥೆ ಮಾಡಿ ಸುಗಮ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಗುಲಬರ್ಗಾ ದಕ್ಷಿಣ ವಿಧಾನಸಬಾ ಕ್ಷೇತ್ರದ ಕೋಟನೂರ (ಡಿ) ಮತಗಟ್ಟೆಯಲ್ಲಿ ಯುವ ಮತದಾರು ಮೊದಲಬಾರಿಗೆ ಮತ ಚಲಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net